‘ಒಂದೊಳ್ಳೆಯ ಸಿನಿಮಾ ನೋಡಿ ಈ ವರ್ಷ ಮುಗಿಸಿದ ಖುಷಿ ಇದೆ’; ಡಾರ್ಲಿಂಗ್ ಕೃಷ್ಣ
ನಟಿ ರಚಿತಾ ರಾಮ್ ಸ್ಯಾಂಡಲ್ವುಡ್ನಲ್ಲಿ ಬಹುಬೇಡಿಕೆಯ ನಟಿಯಲ್ಲಿ ಒಬ್ಬರು. ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ಪಕ್ಕದ ಮನೆ ಹುಡುಗಿ ಪಾತ್ರದ ಜತೆಗೆ ಸಾಕಷ್ಟು ಪ್ರಯೋಗಾತ್ಮಕ ಪಾತ್ರಗಳನ್ನೂ ಅವರು ನಿರ್ವಹಿಸುತ್ತಿದ್ದಾರೆ. ಈಗ ರಚಿತಾ ರಾಮ್ ಅವರು ಹಾಟ್ ಅವತಾರ ತಾಳಿದ್ದಾರೆ
ಅಜಯ್ ರಾವ್ ಹಾಗೂ ರಚಿತಾ ರಾಮ್ ನಟನೆಯ ‘ಲವ್ ಯೂ ರಚ್ಚು’ ಚಿತ್ರ ಶುಕ್ರವಾರ (ಡಿಸೆಂಬರ್ 31) ತೆರೆಗೆ ಬರುತ್ತಿದೆ. ಈ ಸಿನಿಮಾ ಬಗ್ಗೆ ಅಜಯ್ ರಾವ್ ಹಾಗೂ ರಚಿತಾ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸ್ಯಾಂಡಲ್ವುಡ್ ಸೆಲೆಬ್ರಿಟಿಗಳಿಗಾಗಿ ವಿಶೇಷ ಶೋ ಆಯೋಜನೆ ಮಾಡಲಾಗಿತ್ತು. ಈ ಶೋ ನೋಡಿದ ಹಲವರು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಈ ಬಗ್ಗೆ ಮಾತನಾಡಿರುವ ನಟ, ನಿರ್ದೇಶಕ, ನಿರ್ಮಾಪಕ ಡಾರ್ಲಿಂಗ್ ಕೃಷ್ಣ, ‘ಅಜಯ್ ರಾವ್ ಅವರ ನಟನೆ ಇಷ್ಟವಾಗಿದೆ. ಕ್ಲೈಮ್ಯಾಕ್ಸ್ನಲ್ಲಿ ಬರುವ ಒಂದಷ್ಟು ಡೈಲಾಗ್ಗಳು ಹಿಡಿಸುತ್ತವೆ. ಈ ವರ್ಷವನ್ನು ಒಂದೊಳ್ಳೆಯ ಸಿನಿಮಾ ನೋಡಿ ಪೂರ್ಣಗೊಳಿಸಿದ ಖುಷಿ ಇದೆ’ ಎಂದಿದ್ದಾರೆ.
ನಟಿ ರಚಿತಾ ರಾಮ್ ಸ್ಯಾಂಡಲ್ವುಡ್ನಲ್ಲಿ ಬಹುಬೇಡಿಕೆಯ ನಟಿಯಲ್ಲಿ ಒಬ್ಬರು. ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ಪಕ್ಕದ ಮನೆ ಹುಡುಗಿ ಪಾತ್ರದ ಜತೆಗೆ ಸಾಕಷ್ಟು ಪ್ರಯೋಗಾತ್ಮಕ ಪಾತ್ರಗಳನ್ನೂ ಅವರು ನಿರ್ವಹಿಸುತ್ತಿದ್ದಾರೆ. ಈಗ ರಚಿತಾ ರಾಮ್ ಅವರು ಹಾಟ್ ಅವತಾರ ತಾಳಿದ್ದಾರೆ. ಶೂಟಿಂಗ್ ಸಂದರ್ಭದಲ್ಲಿಯೇ ಸಾಕಷ್ಟು ವಿವಾದ ಸೃಷ್ಟಿಸಿದ್ದ ‘ಲವ್ ಯೂ ರಚ್ಚು’ ಸಿನಿಮಾಗಾಗಿ ರಚಿತಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಹಾಸನದಲ್ಲಿ ಧನಂಜಯ ಜತೆ ಸೆಲ್ಫೀ ತೆಗೆದುಕೊಳ್ಳೋಕೆ ಮುಗಿಬಿದ್ದ ಅಭಿಮಾನಿಗಳು
Love You Rachchu: ‘ಲವ್ ಯೂ ರಚ್ಚು’ನಲ್ಲಿ ಮಿಲನಾ, ಡಾರ್ಲಿಂಗ್ ಕೃಷ್ಣಗೆ ಇಷ್ಟ ಆಗಿದ್ದೇನು? ವಿಡಿಯೋ ಇಲ್ಲಿದೆ