ವರ್ಷಾಂತ್ಯ ಮಾರಾಟ ಭಾಗವಾಗಿ ಫ್ಲಿಪ್ಕಾರ್ಟ್, ದುಬಾರಿ ಸ್ಮಾರ್ಟ್ಫೋನಗಳ ಮೇಲೆ ಭಾರಿ ಡಿಸ್ಕೌಂಟ್ ಘೋಷಿಸಿದೆ!
ಈಯರ್ ಎಂಡ್ ಸೇಲ್ ಭಾಗವಾಗಿ ಸ್ಪಾರ್ಟ್ ಫೋನ್ಗಳ ಮೇಲೆ ಫ್ಲಿಪ್ ಕಾರ್ಟ್ ಭಾರಿ ರಿಯಾಯಿತಿ ಘೋಷಿಸಿದೆ. ನಿಮಗೆ ಫೋನ್ ಬದಲಾಯಿಸುವ ಮನಸ್ಸಿದ್ದರೆ ತ್ವರೆ ಮಾಡಿ ಯಾಕೆಂದರೆ, ಶುಕ್ರವಾರ ಈ ಆಫರ್ ಕೊನೆಗೊಳ್ಳಲಿದೆ.
ವರ್ಷವಿಡೀ ಗ್ರಾಹಕರನ್ನು ಮನಸಾರೆ ದೋಚುವ ಫೋನ್ ತಯಾರಿಸುವ ಕಂಪನಿಗಳು ವರ್ಷಾಂತ್ಯದಲ್ಲಿ ಮಾತ್ರ ಭಾರಿ ಡಿಸ್ಕೌಂಟ್ಗಳನ್ನು ಘೋಷಿಸುತ್ತವೆ. ಅದರಲ್ಲೂ ದೈತ್ಯ ಆನ್ ಲೈನ್ ಪ್ಲಾಟ್ಫಾರ್ಮ್ಗಳೆನಿಸಿಕೊಂಡಿರುವ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ಗಳಲ್ಲಂತೂ ಸ್ಮಾರ್ಟ್ಫೋನ್ಗಳು ನಂಬಲಸದಳ ಕಡಿಮೆ ಬೆಲೆಗೆ ಸಿಗುತ್ತವೆ. ಫೋನ್ ತಯಾರಿಸುವ ಕಂಪನಿಯಾಗಲೀ ಅಥವಾ ಆನ್ಲೈನ್ ವೇದಿಕೆಗಳಾಗಲೀ ನಷ್ಟದಲ್ಲಿ ವ್ಯಾಪಾರ ಮಾಡುವುದಿಲ್ಲ. ಅದರರ್ಥ ಡಿಸ್ಕೌಂಟ್ ಘೋಷಿಸುವ ಮೊದಲು ಭಾರಿ ಮಾರ್ಜಿನ್ ಇಟ್ಟುಕೊಂಡು ಫೋನ್ಗಳನ್ನು ಗ್ರಾಹಕರಿಗೆ ಮಾರಿ ಹಣ ಗುಳೆ ಹಾಕಿಕೊಂಡಿದ್ದು ದೋಚುವ ಕೆಲಸ ತಾನೆ?
ಓಕೆ, ಈಯರ್ ಎಂಡ್ ಸೇಲ್ ಭಾಗವಾಗಿ ಸ್ಪಾರ್ಟ್ ಫೋನ್ಗಳ ಮೇಲೆ ಫ್ಲಿಪ್ ಕಾರ್ಟ್ ಭಾರಿ ರಿಯಾಯಿತಿ ಘೋಷಿಸಿದೆ. ನಿಮಗೆ ಫೋನ್ ಬದಲಾಯಿಸುವ ಮನಸ್ಸಿದ್ದರೆ ತ್ವರೆ ಮಾಡಿ ಯಾಕೆಂದರೆ, ಶುಕ್ರವಾರ ಈ ಆಫರ್ ಕೊನೆಗೊಳ್ಳಲಿದೆ. ವಿಶ್ವದ ಪ್ರಮುಖ ಬ್ರ್ಯಾಂಡ್ ಗಳಲ್ಲಿ ಒಂದಾಗಿರುವ ಐಫೋನ್ 12 ಸ್ಮಾರ್ಟ್ ಫೋನನ್ನು ಫ್ಲಿಪ್ ಕಾರ್ಟ್ ಕೇವಲ ರೂ 41,199 ಕ್ಕೆ ಮಾರುತ್ತಿದೆ. ಹಾಗೆಯೇ, ರೂ. 65,199 ಮೂಲಬೆಲೆ ಮತ್ತು 256 ಜಿಬಿ ಸ್ಟೋರೇಜ್ ಸಾಮರ್ಥ್ಯದ ಫೋನನ್ನು ರೂ. 55,199ಕ್ಕೆ ಮಾರಲಾಗುತ್ತಿದೆ.
ರೂ. 35,999 ಮೂಲಬೆಲೆಯ ರೀಯಲ್ಮಿ ಜಿಟಿ ಸ್ಪಾರ್ಟ್ ಪೋನ್ ನಿಮಗೆ ರೂ. 31,999 ಗಳಿಗೆ ಸಿಗಲಿದೆ. ಪೊಕೊ ಎಕ್ಸ್ 3 ಫೋನ್ ಮಾರುಕಟ್ಟೆ ಬೆಲೆಗಿಂತ ರೂ, 2,000 ಕಡಿಮೆಗೆ ಸಿಗಲಿದೆ. ಅಷ್ಟು ಮಾತ್ರವಲ್ಲದೆ, ಸ್ಯಾಮ್ಸಂಗ್, ಒಪ್ಪೋ ಮತ್ತು ರೀಯಲ್ಮೀ ಕಂಪನಿಗಳ ಉತ್ಪಾದನೆಗಳ ಮೇಲೂ ಫ್ಲಿಪ್ ಕಾರ್ಟ್ ಡಿಸ್ಕೌಂಟ್ ಘೋಷಿಸಿದೆ.
ಇದನ್ನೂ ಓದಿ: Viral Video: ಜೋರ್ಡಾನ್ ಸಂಸತ್ ಕಲಾಪದ ವೇಳೆ ಹೊಡೆದಾಡಿಕೊಂಡ ಸಂಸದರು; ವೈರಲ್ ಆಯ್ತು ವಿಡಿಯೋ