ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಗಳ ಫಲಿತಾಂಶ ಗುರುವಾರ ಪ್ರಕಟಗೊಂಡಿದೆ. ಆಡಳಿತಾರೂಢ ಬಿಜೆಪಿಗೆ ಹಲವಾರು ಕಡೆ ಮುಖಭಂಗವಾಗಿದೆ. ಕಾಂಗ್ರೆಸ್ ನಿಚ್ಚಳ ಮೆಲುಗೈ ಸಾಧಿಸಿಲ್ಲವಾದರೂ ಬಿಜೆಪಿಯನ್ನು ಹಿಂದಿಕ್ಕಿರುವುದು ಸತ್ಯ. ಓಕೆ, ವಿಷಯ ಅದಲ್ಲ. ಚುನಾವಣೆ ಯಾವುದೇ ಆಗಿರಲಿ, ಕಣದಲ್ಲಿರುವ ಸ್ಪರ್ಧಿಗಳು ಗೆಲ್ಲಲು ಸಾಧ್ಯವಿರುವ ಎಲ್ಲ ಮತ್ತು ಸಾಧ್ಯವಿರದ ಕೆಲ ಪ್ರಯತ್ನಗಳನ್ನು ಮಾಡುವುದು ನಮಗೆ ಗೊತ್ತಿದೆ. ಸ್ಪರ್ಧಿಗಳು ಏನೇ ಮಾಡಿದರೂ ಮತದಾನ ನಡಯುವ ಮೊದಲು ಮಾಡಬೇಕಾಗುತ್ತದೆ. ಮತದಾನ ಒಮ್ಮೆ ಮುಗಿಯಿತು ಅಂತಾದರೆ ಬೇರೆ ಏನೂ ಮಾಡಲು ಸಾಧ್ಯವಾಗುವುದಿಲ್ಲ, ನಂಬಿದ ದೇವರನ್ನು ‘ಕೈ ಬಿಡಬೇಡ ದೇವರೇ,’ ಅಂತ ಪ್ರಾರ್ಥಿಸುವುದೊಂದನ್ನು ಬಿಟ್ಟು!!
ಧಾರವಾಡ ಅಣ್ಣಿಗೇರಿಯಲ್ಲಿ ಒಬ್ಬ ಮಹಿಳಾ ಅಭ್ಯರ್ಥಿ ಮಾಡಿದ್ದು ಅದನ್ನೇ. ಈ ವಿಡಿಯೋ ನೋಡಿ. ಇಲ್ಲಿ ಧ್ಯಾನ ಮಾಡುತ್ತಾ ಕೂತಿರುವ ಮಹಿಳೆಯ ಹೆಸರು ರೇಣುಕಾ ಬಸವರಾಜ ಅಂತ. ಇವರು ಯಾವ ಪಕ್ಷದ ಅಭ್ಯರ್ಥಿ ಅನ್ನೋದು ಗೊತ್ತಾಗಿಲ್ಲ. ಅಣ್ಣಿಗೇರಿ ಪುರಸಭೆಗೆ ವಾರ್ಡ್ ಸಂಖ್ಯೆ 21 ರಿಂದ ಸ್ಪರ್ಧಿಸಿದ್ದಾರೆ.
ಗುರುವಾರದಂದು ಬೆಳಗ್ಗೆ ಸ್ಥಳೀಯ ಅಮೃತೇಶ್ವರ ಮಹಾವಿದ್ಯಾಲಯನಲ್ಲಿ ಮತ ಎಣಿಕೆ ಆರಂಭವಾಗುತ್ತಿದ್ದಂತೆ ಅದರ ಎದುರಿನ ವಿಶಾಲವಾದ ಮೈದಾನದಲ್ಲಿ ಸೂರ್ಯನಿಗೆ ಅಭಿಮುಖವಾಗಿ ಕೂತ ರೇಣುಕಾ ಅವರು ತನ್ನನ್ನು ಚುನಾವಣೆಯಲ್ಲಿ ಗೆಲ್ಲಿಸುವಂತೆ ಪ್ರಾರ್ಥಿಸಲಾರಂಭಿಸಿದ್ದಾರೆ.
ರೇಣುಕಾ ಗೆದ್ದರೋ ಇಲ್ಲ ಸೋತರೋ ಅನ್ನೋದು ನಮಗಿನ್ನೂ ಗೊತ್ತಾಗಿಲ್ಲ. ಅದರೆ, ಗೆಲ್ಲಿಸುವಂತೆ ಅವರು ಮಾಡಿದ ಪ್ರಾರ್ಥನೆ ಮಾತ್ರ ಎಲ್ಲರ ಗಮನ ಸೆಳೆದಿದೆ.
ಇದನ್ನೂ ಓದಿ: Love You Rachchu: ‘ಲವ್ ಯೂ ರಚ್ಚು’ನಲ್ಲಿ ಮಿಲನಾ, ಡಾರ್ಲಿಂಗ್ ಕೃಷ್ಣಗೆ ಇಷ್ಟ ಆಗಿದ್ದೇನು? ವಿಡಿಯೋ ಇಲ್ಲಿದೆ