‘ಹಿಂದಿ ಈಸ್ ಎ ಅಫಿಷಿಯಲ್ ಲಾಂಗ್ವೇಜ್’: ಬೆಂಗಳೂರು ಹೋಟೆಲ್ನಲ್ಲಿ ಡಿಜಿಟಲ್ ಬೋರ್ಡ್, ವಿಡಿಯೋ ವೈರಲ್
ಕರ್ನಾಟಕದಲ್ಲಿ ಹಿಂದಿ ಹೇರಿಕೆ ವಿರುದ್ಧ ಹಿಂದಿನಿಂದಲೂ ಹೋರಾಟಗಳು ನಡೆಯುತ್ತಲೇ ಇವೆ. ಇದೀಗ ಬೆಂಗಳೂರಿನ ವಿದ್ಯಾರಣ್ಯಪುರದ ಎಂಎಸ್ ಪಾಳ್ಯ ಸರ್ಕಲ್‌ನ ಗುರು ದರ್ಶನ್ ಕೆಫೆಯಲ್ಲಿ, ‘ಹಿಂದಿ ಈಸ್ ಎ ಅಫಿಷಿಯಲ್ ಲಾಂಗ್ವೇಜ್’ ಎಂಬ ಡಿಜಿಟಲ್ ಬೋರ್ಡ್ ಹಾಕಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ.
ಬೆಂಗಳೂರು, ಮಾರ್ಚ್ 21: ಕರ್ನಾಟಕದಲ್ಲಿ ಹಿಂದಿ ಹೇರಿಕೆ ಮಾಡಲಾಗುತ್ತಿದೆ ಎಂಬ ಆರೋಪ ಹಾಗೂ ಅದಕ್ಕೆ ವಿರೋಧಗಳ ನಡುವೆಯೇ ಅನ್ಯ ರಾಜ್ಯದ ಮ್ಯಾನೇಜರ್ ಒಬ್ಬರು ಉದ್ಧಟತನ ಮೆರೆದಿದ್ದಾರೆ. ಹೋಟೆಲ್ನಲ್ಲಿ ‘ಹಿಂದಿ ಈಸ್ ಎ ಅಫಿಷಿಯಲ್ ಲಾಂಗ್ವೇಜ್’ ಎಂಬ ಡಿಜಿಟಲ್ ಬೋರ್ಡ್ ಹಾಕಿಸಿದ್ದಾರೆ. ವಿದ್ಯಾರಣ್ಯಪುರದ ಎಂಎಸ್ ಪಾಳ್ಯ ಸರ್ಕಲ್‌ನ ಗುರು ದರ್ಶನ್ ಕೆಫೆ ಮೇಲ್ಭಾಗ ಹಿಂದಿ ಕುರಿತ ಬೋರ್ಡ್ ಹಾಕಿಸಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್ ಆದ ಕೂಡಲಲೇ ಎಚ್ಚೆತ್ತ ಪೊಲೀಸರು ಡಿಜಿಟಲ್ ಬೋರ್ಡ್ನಲ್ಲಿದ್ದ ಬರಹ ಅಳಿಸಿಹಾಕಿದ್ದಾರೆ. ಈ ಬಗ್ಗೆ ಕಟ್ಟಡ ಮಾಲೀಕರನ್ನು ಕರೆಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಹಳೆ ಮ್ಯಾನೇಜರ್ ಕೃತ್ಯ ಎಸಗಿದ್ದಾಗಿ ವಿಚಾರಣೆ ವೇಳೆ ಪೊಲೀಸರಿಗೆ ಮಾಹಿತಿ ದೊರೆತಿದೆ.
ವರದಿ: ಪ್ರದೀಪ್ ಚಿಕ್ಕಾಟಿ, ‘ಟಿವಿ9’