ಸೊಳ್ಳೆ ಪರದೆ ಹಿಡಿದು ಚಿರತೆ ಬೇಟೆಗೆ ಹೊರಟ ಬಿಜೆಪಿಯ ಮಾಜಿ ಶಾಸಕ
ಮಧ್ಯಪ್ರದೇಶದಲ್ಲಿ ಬಿಜೆಪಿಯ ಮಾಜಿ ಶಾಸಕ ವಿಚಿತ್ರವಾದ ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ. ಮಧ್ಯಪ್ರದೇಶದ ತೆಂತಾರ್‌ನ ಮಾಜಿ ಬಿಜೆಪಿ ಶಾಸಕ ಸೊಳ್ಳೆ ಪರದೆಯೊಂದಿಗೆ ಚಿರತೆಯನ್ನು ಬೇಟೆಯಾಡಲು ಹೋಗಿದ್ದಾರೆ. ಆ ಚಿರತೆ 48 ಗಂಟೆಯೊಳಗೆ 5 ಜನರ ಮೇಲೆ ಪ್ರಾಣಿ ದಾಳಿ ಮಾಡಿದ್ದು, ಗ್ರಾಮದ ಸಮೀಪದ ಪೊದೆಗಳಲ್ಲಿ ಅವಿತುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಚಿರತೆಯನ್ನು ಹಿಡಿಯಲು ಹೊರಟ ತಂಡದೊಂದಿಗೆ ಬಿಜೆಪಿ ಮಾಜಿ ಶಾಸಕ ಕೂಡ ಸೇರಿಕೊಂಡಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗಿದೆ.
ನವದೆಹಲಿ: ಬಿಜೆಪಿಯ ಮಾಜಿ ಶಾಸಕ ಶ್ಯಾಮಲಾಲ್ ದ್ವಿವೇದಿ ಅವರ ವಿಚಿತ್ರ ಮತ್ತು ದಿಟ್ಟ ಕಾರ್ಯದಲ್ಲಿ ಸೊಳ್ಳೆ ಪರದೆಯನ್ನು ಹಿಡಿದುಕೊಂಡು ಚಿರತೆಯನ್ನು ಹಿಡಿಯಲು ಹೊರಟಿದ್ದಾರೆ. ಮಧ್ಯಪ್ರದೇಶದ ರೇವಾ ಜಿಲ್ಲೆ ಮತ್ತು ಅದರ ನೆರೆಯ ಉತ್ತರ ಪ್ರದೇಶದ ಹಳ್ಳಿಗಳಲ್ಲಿ ನರಭಕ್ಷಕ ಚಿರತೆಯ ಕಾಟದಿಂದ ಜನ ಕಂಗೆಟ್ಟಿದ್ದರು. ಹೀಗಾಗಿ, ಜನರ ಕಷ್ಟಕ್ಕೆ ಅಂತ್ಯ ಹಾಡಲು ಹೊರಟ ಮಾಜಿ ಶಾಸಕ ಕೇವಲ ಒಂದು ಸೊಳ್ಳೆ ಪರದೆಯನ್ನು ಹಿಡಿದುಕೊಂಡು ಚಿರತೆ ಹಿಡಿಯಲು ಹೋಗಿದ್ದಾರೆ. 48 ಗಂಟೆಗಳಲ್ಲಿ 5 ಜನರ ಮೇಲೆ ಚಿರತೆ ದಾಳಿ ಮಾಡಿದ್ದು, ಜನರಲ್ಲಿ ಭಯ ಹುಟ್ಟಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ