‘ಅನ್ನ ಕೊಡುವ ಚಿತ್ರೋದ್ಯಮ ಮುಚ್ಚಬಾರದು, ಪೈರಸಿಗೆ ಅಂತ್ಯ ಹಾಡ್ತೀವಿ’: ಆರಗ ಜ್ಞಾನೇಂದ್ರ ಭರವಸೆ

| Updated By: ಮದನ್​ ಕುಮಾರ್​

Updated on: Oct 19, 2021 | 12:59 PM

‘ಪೈರಸಿ ಸಮಸ್ಯೆಯನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ. ಹಾಗಾಗಿ ಸೈಬರ್​ ವಿಭಾಗವನ್ನು ಗಟ್ಟಿಗೊಳಿಸಿದ್ದೇವೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿ ನೀಡಿ ಅವರು ಚರ್ಚೆ ನಡೆಸಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಪೈರಸಿ ಕಾಟ ಹೆಚ್ಚಾಗಿದೆ. ಸಿನಿಮಾ ರಿಲೀಸ್​ ಆದ ದಿನವೇ ಪೈರಸಿ ಕಾಪಿ ಲಭ್ಯವಾಗುವಂತಹ ಕೆಟ್ಟ ಪರಿಸ್ಥಿತಿ ಬಂದಿದೆ. ಇಂಥ ಕೆಲಸ ಮಾಡುವ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆ ಕೊಡಿಸಬೇಕು ಎಂಬುದು ಚಿತ್ರೋದ್ಯಮದವರ ಬಹುದಿನಗಳ ಕೂಗು. ಪೈರಸಿಗೆ ಅಂತ್ಯ ಹಾಡಲು ಸರ್ಕಾರ ಕೂಡ ಕ್ರಮ ಕೈಗೊಂಡಿದೆ. ಈ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಭರವಸೆ ನೀಡಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಪೈರಸಿ ಕುರಿತು ಮಾತನಾಡಿದರು.

‘ಪೈರಸಿ ಸಮಸ್ಯೆಯನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ. ಸಾವಿರಾರು ಜನರಿಗೆ ಅನ್ನ ನೀಡುವಂತಹ ಚಿತ್ರರಂಗ ನಷ್ಟಕ್ಕೆ ಒಳಗಾಗಬಾರದು ಎಂಬ ಕಾಳಜಿ ನಮ್ಮ ಸರ್ಕಾರಕ್ಕಿದೆ. ಹಾಗಾಗಿ ಸೈಬರ್​ ವಿಭಾಗವನ್ನು ಗಟ್ಟಿಗೊಳಿಸಿದ್ದೇವೆ. ಚಿತ್ರರಂಗದವರ ಜೊತೆ ಮಾತನಾಡುವಂತೆ ಆ ಅಧಿಕಾರಿಗಳಿಗೆ ಸೂಚಿಸುತ್ತೇನೆ. ನಿಮ್ಮೆಲ್ಲರ ಸಲಹೆ ಪಡೆದುಕೊಳ್ಳತ್ತೇನೆ’ ಎಂದು ಆರಗ ಜ್ಞಾನೇಂದ್ರ ಹೇಳಿದರು.

ಇದನ್ನೂ ಓದಿ:

ನಟಿ ಸವಿ ಮಾದಪ್ಪ ಆತ್ಮಹತ್ಯೆ ಪ್ರಕರಣ: ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ಏನು?

Salaga: ನಿರೀಕ್ಷೆಗೂ ಮೀರಿ ‘ಸಲಗ’ ಸಕ್ಸಸ್​; ಹಾಗಾದ್ರೆ ಈವರೆಗಿನ ಕಲೆಕ್ಷನ್​ ಲೆಕ್ಕ ಹೇಳೋರು ಯಾರು?

Follow us on