ತಾಳ್ಮೆ ಕಳೆದುಕೊಳ್ಳದ ಜಿ ಪರಮೇಶ್ವರ್ ಸ್ವಭಾವಕ್ಕೆ ವ್ಯತಿರಿಕ್ತವಾಗಿ ವೇದಿಕೆಯ ಮೇಲೆಯೇ ಅಧಿಕಾರಿಯೊಬ್ಬರನ್ನು ಗದರಿದರು!

|

Updated on: Oct 31, 2023 | 4:50 PM

ಅಧಿಕಾರಿಯನ್ನು ಕರೆಯುವ ಪ್ರಯತ್ನದಲ್ಲಿ ಇನ್ನೊಬ್ಬ ಅಧಿಕಾರಿ ವಿಫಲರಾಗುತ್ತಾರೆ. ಹಾಗಾಗೇ, ಪರಮೇಶ್ವರ್ ತಾಳ್ಮೆ ಕಳೆದುಕೊಳ್ಳಲಾರಂಭಿಸಿರುತ್ತಾರೆ. ಅನುಪಸ್ಥಿತ ಅಧಿಕಾರಿಯ ಪರವಾಗಿ ವೇದಿಕೆಯ ಮೇಲಿದ್ದ ಅಧಿಕಾರಿ ಏನೋ ಸಮಜಾಯಿಷಿ ನೀಡಲು ಪ್ರಯತ್ನಿಸಿದಾಗ ಸಚಿವರಿಗೆ ರೇಗುತ್ತದೆ. ಎಲ್ಲರೆದುರೇ ಅಧಿಕಾರಿಗೆ ‘ವ್ಹಾಟ್ ನಾನ್ಸೆನ್ಸ್ ಆರ್ ಯೂ ಟಾಕಿಂಗ್!’ ಅಂತ ಗದರುತ್ತಾರೆ.

ತುಮಕೂರು: ಗೃಹ ಸಚಿವ ಜಿ ಪರಮೇಶ್ವರ್ (G Parameshwara) ನೇರನುಡಿಗೆ ಹೆಸರಾದವರು, ಅದು ಸಚಿವ ಸಂಪುಟ ಸಭೆಯಾಗಿರಲಿ (cabinet meeting), ತಮ್ಮ ಇಲಾಖೆಯ ಅಧಿಕಾರಿಗಳೊಂದಿಎಗ ಚರ್ಚೆ ನಡೆಸುತ್ತಿರಲಿ, ಕೆಡಿಪಿ ಮೀಟಿಂಗ್ ಇಲ್ಲವೇ ಜನತಾ ದರ್ಶನ (Janata Darshan) ಕಾರ್ಯಕ್ರಮವಾಗಿರಲಿ- ಹೇಳಬೇಕಿರುವುದನ್ನು ನೇರವಾಗಿ ಹೇಳುತ್ತಾರೆ. ಇದನ್ನು ಮತ್ತೊಮ್ಮೆ ಯಾಕೆ ಹೇಳಬೇಕಿದೆಯೆಂದರೆ, ಅವರು ಇಂದು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗದಲ್ಲಿ ಜನತಾ ದರ್ಶನ ಕಾರ್ಯಕ್ರಮ ನಡೆಸಿ ಜನರ ಕುಂದು ಕೊರತೆಗಳನ್ನು ಆಲಿಸಿ ಸಂಬಂಧಪಟ್ಟ ಅಧಿಕಾರಿಗಳಿಂದ ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸುವ ಪ್ರಯತ್ನ ಮಾಡಿದರು. ಒಂದು ಸಂದರ್ಭದಲ್ಲಿ ಅವರಿಗೆ ಯಾವುದೋ ಅಂಶದ ಬಗ್ಗೆ ಕ್ಲ್ಯಾರಿಟಿ ಬೇಕಿತ್ತು. ಅದಕ್ಕೆ ಸಂಬಂಧಪಟ್ಟ ಅಧಿಕಾರಿ ಸ್ಥಳದಲ್ಲಿರಲಿಲ್ಲ. ಆ ಅಧಿಕಾರಿಯನ್ನು ಕರೆಯುವ ಪ್ರಯತ್ನದಲ್ಲಿ ಇನ್ನೊಬ್ಬ ಅಧಿಕಾರಿ ವಿಫಲರಾಗುತ್ತಾರೆ. ಹಾಗಾಗೇ, ಪರಮೇಶ್ವರ್ ತಾಳ್ಮೆ ಕಳೆದುಕೊಳ್ಳಲಾರಂಭಿಸಿರುತ್ತಾರೆ. ಅನುಪಸ್ಥಿತ ಅಧಿಕಾರಿಯ ಪರವಾಗಿ ವೇದಿಕೆಯ ಮೇಲಿದ್ದ ಅಧಿಕಾರಿ ಏನೋ ಸಮಜಾಯಿಷಿ ನೀಡಲು ಪ್ರಯತ್ನಿಸಿದಾಗ ಸಚಿವರಿಗೆ ರೇಗುತ್ತದೆ. ಎಲ್ಲರೆದುರೇ ಅಧಿಕಾರಿಗೆ ‘ವ್ಹಾಟ್ ನಾನ್ಸೆನ್ಸ್ ಆರ್ ಯೂ ಟಾಕಿಂಗ್!’ ಅಂತ ಗದರುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on