ತನ್ನ ಕೊಲೆಗೆ ಸುಪಾರಿ ನೀಡಿದ ವಿಷಯ ತಮಾಷೆಯಾಗಿರಬಹುದೆಂದು ಇಷ್ಟುದಿನ ಸುಮ್ಮನಿದ್ದೆ: ರಾಜೇಂದ್ರ ರಾಜಣ್ಣ
ಸಚಿವ ಕೆಎನ್ ರಾಜಣ್ಣ ಅವರ ಹನಿ ಟ್ರ್ಯಾಪ್ ದೂರು ಮತ್ತು ತನ್ನ ಹತ್ಯೆಗಾಗಿ ಸುಪಾರಿ ಪ್ರಕರಣದ ನಡುವೆ ಸಂಬಂಧವಿಲ್ಲವೆಂದು ರಾಜೇಂದ್ರ ಹೇಳಿದರು. ಅ ಪ್ರಕರಣದ ತನಿಖೆಯನ್ನು ಗೃಹ ಇಲಾಖೆಯವರು ಸಿಐಡಿಗೆ ಒಪ್ಪಿಸಿದ್ದಾರೆ, ವಿಭಾಗದ ಎಡಿಜಪಿ ಆಗಿರುವ ಸಿ ವಂಶಿಕೃಷ್ಣ ನಿನ್ನೆ ಮನೆಗೆ ಬಂದು ಮನೆಯಲ್ಲಿ ಯಾರಿರುತ್ತಾರೆ ಅಂತೆಲ್ಲ ವಿಚಾರಣೆ ಮಾಡಿಕೊಂಡು ಹೋಗಿದ್ದಾರೆ ಎಂದು ರಾಜೇಂದ್ರ ಹೇಳಿದರು.
ತುಮಕೂರು, ಮಾರ್ಚ್ 28: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ತನ್ನ ಕೊಲೆಗೆ ಸುಪಾರಿ ನೀಡಿರುವ ಬಗ್ಗೆ ಮಾತಾಡಿರುವ ಆಡಿಯೋ ಕ್ಲಿಪ್ ಅನ್ನು ತುಮಕೂರು ಎಸ್ ಪಿ ಅಶೋಕ್ ವೆಂಕಟ್ (Ashok Venkat, Tumakuru SP) ಅವರಿಗೆ ನೀಡಿ ದೂರು ಸಲ್ಲಿಸಿರುವುದಾಗಿ ಹೇಳಿದರು. ಕೊಲೆಯ ಬಗ್ಗೆ ಮಾತುಕತೆ ನಡೆದಿದ್ದು ನವೆಂಬರ್ ತಿಂಗಳಲ್ಲಿ ಮತ್ತು ಆಡಿಯೋ ತನಗೆ ಸಿಕ್ಕಿದ್ದು ಜನವರಿಯಲ್ಲಿ ಎಂದು ಹೇಳಿದ ರಾಜೇಂದ್ರ, ತಮಾಷೆಯಿರಬಹುದು ಅಂದುಕೊಂಡು ಇಷ್ಟು ದಿನ ಸುಮ್ಮನಿದ್ದರಂತೆ. ಟೆಂಟ್ ಹೌಸ್ ಮಾಲೀಕನ ಹೆಸರು ಬಹಿರಂಗಪಡಿಸದ ರಾಜೇಂದ್ರ, ಮಾಧ್ಯಮದವರು ಅವನಲ್ಲಿಗೆ ಹೋಗಿ ಪ್ರಶ್ನೆಗಳಖ ಸುರಿಮಳೆಗೈಯಬಾರದು ಎನ್ನುವ ಕಾರಣಕ್ಜೆ ಗೌಪ್ಯತೆ ಕಾಪಾಡಿಕೊಳ್ಳುತ್ತಿರೋದಾಗಿ ಹೇಳಿದರು.
ಇದನ್ನೂ ಓದಿ: ಮಗನ ಹತ್ಯೆಗೆ ಪ್ರಯತ್ನ ನಡೆದಿರುವ ವಿಚಾರ ತನಗೆ ಗೊತ್ತಿಲ್ಲವೆಂದು ಹೇಳಿ ಆಶ್ಚರ್ಯ ಮೂಡಿಸಿದ ರಾಜಣ್ಣ
ವಿಡಿಯೋ ಸ್ಟೋರಿಗಳಿಗಾಗಿ ಕ್ಲಿಕ್ ಮಾಡಿ