34 ಅಡಿ ಎತ್ತರ ಗಣೇಶನನ್ನು ವಿಸರ್ಜನೆ ಮಾಡಬೇಕು ಎನ್ನುವಷ್ಟರಲ್ಲೇ ನಡೆಯಿತು ಘೋರ ದುರಂತ

34 ಅಡಿ ಎತ್ತರ ಗಣೇಶನನ್ನು ವಿಸರ್ಜನೆ ಮಾಡಬೇಕು ಎನ್ನುವಷ್ಟರಲ್ಲೇ ನಡೆಯಿತು ಘೋರ ದುರಂತ

TV9 Web
| Updated By: Rakesh Nayak Manchi

Updated on: Sep 11, 2022 | 11:44 AM

34 ಅಡಿ ಎತ್ತರದ ಗಣೇಶನ ವಿಗ್ರಹದೊಂದಿಗೆ ಭಕ್ತರು ಮೆರವಣಿಗೆ ಮೂಲಕ ಸಾಗಿದರು. ಇನ್ನೇನು ಗಣೇಶನನ್ನು ವಿಸರ್ಜನೆ ಮಾಡಬೇಕು ಎನ್ನುವಷ್ಟರಲ್ಲಿ ಭಕ್ತರು ಕನಸು ಮನಸ್ಸಿನಲ್ಲಿ ಯೋಚಿಸಿರದ ಘೋರ ದುರಂತವೊಂದು ನಡೆಯಿತು.

ಅಲ್ಲೊಂದು ಇಲ್ಲೊಂದು ಅವಗಢಗಳು ಸಂಭವಿಸಿದ್ದರೂ ನಮ್ಮಲ್ಲಿ ಇಂತಹ ಒಂದು ಘೋರ ದುರಂತ ನಡೆಯಬಹುದು ಎಂದು ಯಾರೂ ಊಹಿಸರಿಲ್ಲ. ಸಾವಿರಾರು ಭಕ್ತರು 34 ಅಡಿ ಎತ್ತರದ ಗಣೇಶನ ವಿಗ್ರಹದೊಂದಿಗೆ ಮೆರವಣಿಗೆ ಮೂಲಕ ಸಾಗಿದರು. ವಿಗ್ರಹವನ್ನು ಎತ್ತಿಕೊಂಡಿದ್ದ ಕ್ರೇನ್, ಇನ್ನೇನು ನೀರಿಗೆ ಹಾಕಬೇಕು ಎನ್ನುವಷ್ಟರಲ್ಲಿ ಭಾರಕ್ಕೆ ಪಲ್ಟಿಯಾಗಿದೆ. ನಿಧಾನವಾಗಿ ವಿಗ್ರಹವನ್ನು ನೀರಿಗೆ ಇಳಿಸುತ್ತಿದ್ದಾಗ ಹಠಾತ್ ಕ್ರೇನ್ ಬಲಕ್ಕೆ ವಾಲಿದೆ ಮತ್ತು ಕ್ಷಣಾರ್ಧದಲ್ಲೇ ಪಲ್ಟಿ ಹೊಡೆದಿದೆ. ತಡೆಗೋಡೆ ಮತ್ತು ಕ್ರೇನ್​ನ ಬಾಡಿ ನಡುವೆ ಸಿಕ್ಕಿಹಾಕಿಕೊಂಡ ಅಶೋಕ ಪ್ರಾಣ ಉಳಿಸಲು ಒದ್ದಾಡಿದ್ದಾನೆ. ದೈತ್ಯ ಕ್ರೇನ್​ನನ್ನು ಪಕ್ಕಕ್ಕೆ ಸರಿಸಿ ಆತನನ್ನು ರಕ್ಷಿಸುವುದು ಕಷ್ಟಸಾಧ್ಯ. ಕೂಡಲೇ ಮತ್ತೆರಡು ಕ್ರೇನ್​ಗಳನ್ನು ಕರೆಸಲಾಯಿತಾದರೂ ಅಷ್ಟರಲ್ಲೇ ಅಶೋಕ ಪ್ರಾಣಬಿಟ್ಟಿದ್ದಾನೆ. ಘಟನೆಯಲ್ಲಿ ಗಾಯಗೊಂಡ ಮತ್ತೋರ್ವ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆ ಹೊಸಪೇಟೆಯಲ್ಲಿ ನಡೆದಿದೆ.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ