ಜಾಹೀರಾತಿಗೆ ಮೂರು ಕೋಟಿ ರೂ. ಮಾಸ್ಕ್ ಧರಿಸಿದ್ದ ಊರ್ವಶಿ ರೌಟೆಲಾ ತಮಿಳು ಚಿತ್ರವೊಂದನ್ನು ಒಪ್ಪಿಕೊಂಡಿದ್ದಾಳೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 21, 2021 | 5:52 PM

2011 ರಲ್ಲಿ ಸಾಲು ಸಾಲು ಸೌಂದರ್ಯದ ಸ್ಪರ್ಧೆಗಳನ್ನು ಗೆದ್ದಿದ್ದರು-ಮಿಸ್ ಇಂಡಿಯನ್ ಪ್ರಿನ್ಸೆಸ್ 2011, ಮಿಸ್ ಟೂರಿಸಂ ವರ್ಲ್ಡ್, ಮಿಸ್ ಏಷ್ಯನ್ ಸೂಪರ್ ಮಾಡೆಲ್ ಮತ್ತು ಚೀನಾದಲ್ಲಿ ನಡೆದ ಮಿಸ್ ಟೂರಿಸಂ ಕ್ವೀನ್ ಆಫ್ ದಿ ವರ್ಲ್ಡ್. ಆ ಪಾಟಿ ಸುಂದರಿ ಈಕೆ.

ಬಾಲಿವುಡ್ ಬೆಡಗಿ ಊರ್ವಶಿ ರೌಟೆಲಾ ಒಂದು ಭಾರಿ ಬಜೆಟ್ ನ ತಮಿಳು ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡು ಸುದ್ದಿಯಲ್ಲಿದ್ದಾರೆ. ಈಕೆ ಒಂದು ಕನ್ನಡ ಚಿತ್ರದಲ್ಲಿ ನಟಿಸಿದ್ದು ನಿಮಗೆ ಗೊತ್ತಿರಬಹುದು. ದರ್ಶನ್ ಅಭಿಮಾನಿಗಳಿಗೆ ಈಕೆ ಚೆನ್ನಾಗಿ ನೆನಪಿರುತ್ತಾರೆ. ದರ್ಶನ್ ನಾಯಕನಾಗಿ ನಟಿಸಿ 2015 ರಲ್ಲಿ ಬಿಡುಗಡೆಯಾದ ‘ಮಿ. ಐರಾವತ’ ಚಿತ್ರದಲ್ಲಿ ಈ ಉತ್ತರ ಭಾರತದ ಸಂದರಿ ನಟಿಸಿದ್ದರು. ಊರ್ವಶಿ ಸಿನಿಮಾ ನಟಿಯಾಗಿ ಹೆಸರು ಮಾಡುತ್ತಿರೋದು ನಿಜವೇ, ಆದರೆ ಆಕೆ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿಯೂ ಖ್ಯಾತಳಾಗಿದ್ದು ಕೆಲವರಿಗೆ ಗೊತ್ತಿರಲಿಕ್ಕಿಲ್ಲ. ಹೌದು ಮಾರಾಯ್ರೇ, 2015 ರಲ್ಲಿ ಈಕೆ ಮಿಸ್ ದಿವಾ ಆಗಿ ಈಕೆ ಆಯ್ಕೆಯಾಗಿದ್ದರು. ಆದೇ ವರ್ಷ ಈಕೆ ಮಿಸ್ ಯೂನಿವರ್ಸ್ ಪೇಜೆಂಟ್ ನಲ್ಲಿ ಪಾಲ್ಗೊಂಡಿದ್ದರಾದರೂ ಯಾವುದೇ ಸ್ಥಾನ ಗಿಟ್ಟಿಸಲಿಲ್ಲ.

ಆದರೆ, 2011 ರಲ್ಲಿ ಸಾಲು ಸಾಲು ಸೌಂದರ್ಯದ ಸ್ಪರ್ಧೆಗಳನ್ನು ಗೆದ್ದಿದ್ದರು-ಮಿಸ್ ಇಂಡಿಯನ್ ಪ್ರಿನ್ಸೆಸ್ 2011, ಮಿಸ್ ಟೂರಿಸಂ ವರ್ಲ್ಡ್, ಮಿಸ್ ಏಷ್ಯನ್ ಸೂಪರ್ ಮಾಡೆಲ್ ಮತ್ತು ಚೀನಾದಲ್ಲಿ ನಡೆದ ಮಿಸ್ ಟೂರಿಸಂ ಕ್ವೀನ್ ಆಫ್ ದಿ ವರ್ಲ್ಡ್. ಆ ಪಾಟಿ ಸುಂದರಿ ಈಕೆ.

ಊರ್ವಶಿ ದುಬಾರಿ ಉಡುಪು ಮತ್ತು ಆಭರಣಗಳನ್ನು ಧರಿಸಿ ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗೆ ಶೂಟ್ ಆಗಿರುವ ಅಂತರರಾಷ್ಟ್ರೀಯ ಬ್ರ್ಯಾಂಡಿನ ಉತ್ಪಾದನೆಗೆ ಈಕೆ ವಜ್ರಖಚಿತ ಮಾಸ್ಕ್ ಧರಿಸಿ ಸುದ್ದಿಯಲ್ಲಿದ್ದರು. ಆ ಮಾಸ್ಕ್ ಬೆಲೆ ಎಷ್ಟು ಗೊತ್ತಾ? 3 ಕೋಟಿ ರೂಪಾಯಿ! ಆದರಲ್ಲಿ ಊರ್ವಶೀ ಇನ್ನಷ್ಟು ಸುಂದರಿಯಾಗಿ ಕಾಣಿತ್ತಿದ್ದರು. ನೀವೇ ನೋಡಿ ಈಕೇನ್ ಈ ವಿಡಿಯೋನಲ್ಲಿ. ಸದರಿ ವಿಡಿಯೋ ನೋಡಿದ ಬಳಿಕ ಈಕೆಯ ಅಭಿಮಾನಿಗಳು ಗ್ರೀಕ್ ದೇವತೆ ಹೆಲೆನ್ ಆಫ್ ಟ್ರಾಯ್ಳಂತೆ ಕಾಣುತ್ತಿದ್ದಾಳೆ ಅಂತ ಉದ್ಗರಿಸಿದ್ದರು.

ಅಂದಹಾಗೆ, ಊರ್ವಶಿ ಬಾಲಿವುಡ್ ಪ್ರವೇಶಿಸಿದ್ದು 2013 ರಲ್ಲಿ ಬಿಡುಗಡೆಯಾದ ‘ಸಿಂಗ್ ಸಾಬ್ ದಿ ಗ್ರೇಟ್’ ಚಿತ್ರದ ಮೂಲಕ. ಈ ಚಿತ್ರದಲ್ಲಿ ಸನ್ನಿ ಡಿಯೋಲ್ ನಾಯಕನಾಗಿದ್ದರು. ಇದುವರೆಗೆ ಈಕೆ ಸುಮಾರು 15 ಚಿತ್ರಗಳಲ್ಲಿ ನಟಿಸಿದ್ದಾರೆ. ತನ್ನ ಫಿಗರ್ ಬಗ್ಗೆ ಸದಾ ಕಾಳಜಿ ವಹಿಸುವ ಊರ್ವಶಿ ಪ್ರತಿದಿನ ಜಿಮ್ನಲ್ಲಿ ಕಸರತ್ತು ಮಾಡುತ್ತಾಳೆ. ಈ ವಿಡಿಯೋನಲ್ಲಿ ನೀವದನ್ನು ನೋಡಬಹುದು.

ಇದನ್ನೂ ಓದಿ:   ಜಸ್ಟ್​ ಮಿಸ್; ಮಂಗಳೂರಿನಲ್ಲಿ ಕಾರಿನಡಿ ಬಿದ್ದರೂ ಬಾಲಕ ಪವಾಡಸದೃಶ ಪಾರು! ವಿಡಿಯೋ ನೋಡಿ