ಉತ್ತರ ಕರ್ನಾಟಕ ಬದನೆಕಾಯಿ ಉಪ್ಪಿಟ್ಟು ತಿಂದಿದ್ದೀರಾ? ಒಮ್ಮೆ ಮಾಡಿ ನೋಡಿ

TV9 Web
| Updated By: Digi Tech Desk

Updated on:Jun 03, 2021 | 9:43 AM

ಬದನೆಕಾಯಿ ಎಣ್ಣೆಗಾಯಿ, ಬದನೆಕಾಯಿ ಸುಟ್ಟು ಮಾಡುವ ಚಣ್ನಿ, ಬದನೆಕಾಯಿ ಸಾರು, ಬದನೆಕಾಯಿ ಪಲ್ಯ, ಬದನೆಕಾಯಿ ಬೋಂಡ ಇವೆಲ್ಲಾ ತಿಂದೆ ಇರುತ್ತೀರಾ. ಆದರೆ ಬದನೆಕಾಯಿಯಿಂದ ಉಪ್ಪಿಟ್ಟು ಮಾಡುತ್ತಾರೆ ಅಂತ ಹೆಚ್ಚು ಜನರಿಗೆ ತಿಳಿದೇ ಇಲ್ಲ.


ಬೆಂಗಳೂರು: ಸಾಮಾನ್ಯವಾಗಿ ಬದನೆಕಾಯಿ ಎಲ್ಲರಿರೂ ಇಷ್ಟವಾಗಲ್ಲ. ಬದನೆಕಾಯಿ ಎಂದರೆ ಮೂಗು ಮುರಿಯುವವರೆ ಹೆಚ್ಚು. ಆದರೆ ಕೆಲವರು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಬದನೆಕಾಯಿ ಎಣ್ಣೆಗಾಯಿ, ಬದನೆಕಾಯಿ ಸುಟ್ಟು ಮಾಡುವ ಚಣ್ನಿ, ಬದನೆಕಾಯಿ ಸಾರು, ಬದನೆಕಾಯಿ ಪಲ್ಯ, ಬದನೆಕಾಯಿ ಬೋಂಡ ಇವೆಲ್ಲಾ ತಿಂದೆ ಇರುತ್ತೀರಾ. ಆದರೆ ಬದನೆಕಾಯಿಯಿಂದ ಉಪ್ಪಿಟ್ಟು ಮಾಡುತ್ತಾರೆ ಅಂತ ಹೆಚ್ಚು ಜನರಿಗೆ ತಿಳಿದೇ ಇಲ್ಲ. ಬದನೆಕಾಯಿ ಎಂದು ಮೂಗು ಮುರಿಯುವವರೂ ಕೂಡಾ ಈ ಬದನೆಕಾಯಿ ಉಪ್ಪಿಟ್ಟನ್ನು ಇಷ್ಟಪಟ್ಟು ತಿನ್ನುವುದರಲ್ಲಿ ಅನುಮಾನವಿಲ್ಲ.

ಲಾಕ್​ಡೌನ್​ ಇರುವುದರಿಂದ ಸದ್ಯ ಎಲ್ಲರೂ ಮನೆಯಲ್ಲಿ ಫ್ರೀಯಾಗಿ ಇರುತ್ತಾರೆ. ಹೀಗಾಗಿ ಒಂದು ಬಾರಿ ಬದನೆಕಾಯಿ ಉಪ್ಪಿಟ್ಟು ಮಾಡಿ ಸವಿದರೆ ಮತ್ತೆ ಮತ್ತೆ ತಿನ್ನಬೇಕು ಅಂತ ಅನಿಸುತ್ತೆ. ಈ ಬದನೆಕಾಯಿ ಉಪ್ಪಿಟ್ಟು ಮಾಡಲು ಬೇಕಾಗುವ ಸಾಮಾಗ್ರಿಗಳು ಹೀಗಿವೆ.
ಬದನೆಕಾಯಿ
ಕ್ಯಾಪ್ಸಿಕಂ
ಕ್ಯಾರೆಟ್
ಟ್ಯೊಮ್ಯಾಟೋ
ಈರುಳ್ಳಿ
ಹಸಿ ಮೆಣಸಿನಕಾಯಿ
ಆಲೂಗಡ್ಡೆ
ಬಟಾಣಿ
ನಿಂಬೆ ಹಣ್ಣು
ಕೊತ್ತಂಬರಿ ಸೊಪ್ಪು
ಕರಿಬೇವು
ಶುಂಠಿ
ಉಪ್ಪು

ಇದನ್ನೂ ನೋಡಿ

ಕಡಿಮೆ ಸಮಯದಲ್ಲಿ ಮನೆಯಲ್ಲೇ ಮಾಡಿ ವೆಜ್ ಕಟ್ಲೆಟ್

ಮಾವಿನ ಹಣ್ಣಿನ ಕೇಸರಿ ಬಾತ್; 20 ನಿಮಿಷಗಳಲ್ಲಿ ಸರಳ ವಿಧಾನದ ಮೂಲಕ ತಯಾರಿಸಿ

(How to make uttara kannada Aubergine Uppittu)

Published on: Jun 03, 2021 09:05 AM