ನಿಮಗೆ ಕಾಜು ಬರ್ಫಿ ಅಂದ್ರೆ ಇಷ್ಟಾನಾ? ತಯಾರಿಸುವ ವಿಧಾನವನ್ನು ವಿಡಿಯೋದಲ್ಲೇ ನೋಡಿ

| Updated By: shruti hegde

Updated on: Sep 16, 2021 | 8:29 AM

ಈ ಸ್ಪೆಷಲ್ ಕಾಜು ಬರ್ಫಿ ತಯಾರಿಸಿ ರೆಡಿ ಇಟ್ಟುಕೊಳ್ಳಿ. ಸ್ವೀಟ್ ಆಗಿರೋದ್ರಿಂದ ಎಲ್ಲ ಮಕ್ಕಳಿಗೂ ಇಷ್ಟವಾಗುತ್ತೆ, ಜತೆಗೆ ಮನೆಗೆ ಅತಿಥಿಗಳು ಬಂದಾಗ ಚಹಾದ ಜತೆಗೆ ಸವಿಯಲು ಸಹ ಕೊಡಬಹುದು.

ಸಾಮಾನ್ಯವಾಗಿ ಮನೆಗೆ ನೆಂಟರು ಬಂದಾಗ ಚಹಾದ ಜತೆಗೆ ರುಚಿಯಾಗಿ ಸವಿಯಲು ಏನ್ ಕೊಡೋದಪ್ಪಾ ಅಂತ ತುಂಬಾ ಯೋಚಿಸ್ತೀವಿ. ಮಕ್ಕಳು ಹೊಟ್ಟೆ ಹಸಿದು ತಿಂಡಿ ಬೇಕು ಅಂದಾಗದಲೂ ಹಾಗೆಯೇ, ಸ್ವೀಟ್, ಖಾರ ಹೀಗೆ ಮಕ್ಕಳಿಗೆ ಪ್ರಿಯವಾದ ತಿನಿಸು ಏನಪ್ಪಾ ಅಂತ ಬಹಳ ಚಿಂತೆಯಲ್ಲಿರ್ತೀವಿ. ಹಾಗಿರುವಾಗ ಈ ಸ್ಪೆಷಲ್ ಕಾಜು ಬರ್ಫಿ ತಯಾರಿಸಿ ರೆಡಿ ಇಟ್ಟುಕೊಳ್ಳಿ. ಸ್ವೀಟ್ ಆಗಿರೋದ್ರಿಂದ ಎಲ್ಲ ಮಕ್ಕಳಿಗೂ ಇಷ್ಟವಾಗುತ್ತೆ, ಜತೆಗೆ ಮನೆಗೆ ಅತಿಥಿಗಳು ಬಂದಾಗ ಚಹಾದ ಜತೆಗೆ ಸವಿಯಲು ಸಹ ಕೊಡಬಹುದು.

ಸ್ವೀಟ್ ಅಂದಾಕ್ಷಣ ಬೇಕರಿ ಅಂಗಡಿಗಳಿಂದ ಖರೀದಿಸುತ್ತೇವೆ. ಅದರಲ್ಲಿಯೂ ಕಾಜು ಬರ್ಫಿ ಜನರಿಗೆ ಹೆಚ್ಚು ಇಷ್ಟವಾಗುವಂತಹ ತಿಂಡಿ. ಹಾಗಿರುವಾಗ ಈ ಸ್ಪೆಷಲ್ ಕಾಜು ಬರ್ಫಿಯನ್ನು ನೀವೇ ಕೈಯ್ಯಾರೆ ಮನೆಯಲ್ಲಿ ಮಾಡಿ ಸವಿದರೆ ಅದರ ಖುಷಿನೇ ಬೇರೆ! ಮನೆಯವರೆಲ್ಲಾ ಖುಷಿಯಿಂದ ಸಿಹಿ ತಿನ್ನುತ್ತಾ ಸಂಭ್ರಮಿಸಬಹುದು. ವಿಡಿಯೋದಲ್ಲಿ ಕಾಜು ಬರ್ಫಿ ಮಾಡುವ ವಿಧಾನ ಹೇಗೆ ಎಂಬ ಮಾಹಿತಿ ಇದೆ. ನೀವೂ ಮನೆಯಲ್ಲಿ ಒಮ್ಮೆ ಟ್ರೈ ಮಾಡಿ ರುಚಿ ಸವಿಯಿರಿ.

ಇದನ್ನೂ ಓದಿ:

‘ಮೆಂತ್ಯೆ ಸೊಪ್ಪಿನ ಸ್ಪೆಷಲ್​ ಬಜ್ಜಿ‘ ಒಮ್ಮೆ ಮನೆಯಲ್ಲಿ ಟ್ರೈ ಮಾಡಿ ರುಚಿ ಸವಿಯಿರಿ

ಕೋಲಾರ ಸ್ಪೆಷಲ್ ಮೋದಕ; ಸರಳ ವಿಧಾನದಲ್ಲಿ ಮಾಡಿ ಸವಿಯಿರಿ

(How to prepare kaju barfi check in kannada)

Published on: Sep 16, 2021 08:25 AM