Ganesh Chaturthi 2021 Recipe: ಗಣೇಶನ ಹಬ್ಬಕ್ಕೆ ಉತ್ತರ ಕರ್ನಾಟಕ ಸ್ಪೆಷಲ್​​ ಮೋದಕ ಮಾಡಿ ಸವಿಯಿರಿ

| Updated By: preethi shettigar

Updated on: Sep 08, 2021 | 9:11 AM

ಸಿಹಿಯಾದ ಅಡುಗೆಯನ್ನು ಇಷ್ಟಪಡುವವರು ಇರುತ್ತಾರೆ. ಅಂತೆಯೇ ಕಾರ ಇಷ್ಟಪಡುವವರು ಇರುತ್ತಾರೆ. ಅದರಲ್ಲೂ ಇನ್ನೇನು ಗಣೇಶ ಹಬ್ಬ ಬರುತ್ತಿದೆ. ಹೀಗಾಗಿ ಮೋದಕ ಪ್ರೀಯನಿಗೆ ಮೋದಕ ಮಾಡಿ ನೈವೇದ್ಯ ಮಾಡಿ. 

ಕಾಲಕ್ಕೆ ವಿಶೇಷವಾದ ಒಂದಷ್ಟು ರೆಸಿಪಿಗಳನ್ನು ತಿಳಿದುಕೊಳ್ಳುವುದು ಮುಖ್ಯ ಎನಿಸಿಕೊಳ್ಳುತ್ತದೆ. ಏಕೆಂದರೆ ರುಚಿಕರವಾದ ಅಡುಗೆಯನ್ನು ಮಾಡುವುದರ ಜೊತೆಗೆ ಹೊಸತೆನೋ ಒಂದನ್ನು ಪ್ರತಿದಿನವು ಪ್ರಯೋಗ ಮಾಡುವುದು ಭೋಜನ ಪ್ರೀಯರಿಗೆ ಹೆಚ್ಚು ಖುಷಿಯನ್ನು ಕೊಡುವ ವಿಚಾರ. ಹಾಗೆಯೇ ಸಿಹಿಯಾದ ಅಡುಗೆಯನ್ನು ಇಷ್ಟಪಡುವವರು ಇರುತ್ತಾರೆ. ಅಂತೆಯೇ ಕಾರ ಇಷ್ಟಪಡುವವರು ಇರುತ್ತಾರೆ. ಅದರಲ್ಲೂ ಇನ್ನೇನು ಗಣೇಶ ಹಬ್ಬ(Ganesh Chaturthi 2021 Recipe) ಬರುತ್ತಿದೆ. ಹೀಗಾಗಿ ಮೋದಕ ಪ್ರೀಯನಿಗೆ ಮೋದಕ ಮಾಡಿ ನೈವೇದ್ಯ ಮಾಡಿ. 

ಮೋದಕ ಮಾಡಲು ಬೇಕಾಗುವ ಸಾಮಾಗ್ರಿಗಳು ಕೊಬ್ಬರಿ, ಬೆಲ್ಲ, ಅಕ್ಕಿ ಹಿಟ್ಟು, ತುಪ್ಪ, ಏಲಕ್ಕಿ, ಗೋಡಂಬಿ, ಉಪ್ಪು.

ಮೋದಕ ಮಾಡುವ ವಿಧಾನ:
ಮೊದಲು ಒಂದು ಪಾತ್ರೆಗೆ ನೀರು ಹಾಕಿ ಅದು ಕಾದ ಮೇಲೆ, ಉಪ್ಪು, ಅಕ್ಕಿ ಹಿಟ್ಟು ಹಾಕಿ ಬೇಯಿಸಿ. ಬಳಿ ಇನ್ನೊಂದು ಪಾತ್ರೆಗೆ ಬೆಲ್ಲ ಹಾಕಿ ಅದು ಕರಗಿದ ಮೇಲೆ, ಕೊಬ್ಬರಿ, ಏಲಕ್ಕಿ ಪುಡಿ, ಗೋಡಂಬಿ ಹಾಕಿ ಹೂರ್ಣ ಮಾಡಿಕೊಳ್ಳಿ. ನಂತರ ಬೇಯಿಸಿದ ಅಕ್ಕಿ ಹಿಟ್ಟನ್ನು ಚೆನ್ನಾಗಿ ಕಲಸಿಕೊಳ್ಳಿ. ನಂತರ ಮೋದಕದ ಆಕಾರಕ್ಕೆ ಮಾಡಿ ಮಧ್ಯದಲ್ಲಿ ತಯಾರಿಸಿದ ಹೂರ್ಣ ಹಾಕಿ. ಬಳಿಕ ಅರ್ಧ ಪಾತ್ರೆಗೆ ನೀರು ಹಾಕಿ ಅದರ ಮೇಲೆ ಒಂದು ಪ್ಲೇಟ್ ಇಟ್ಟು ಮೋದಕವನ್ನು 15 ನಿಮಿಷ ಬೇಯಲು ಬಿಡಿ. ಈಗ ಉತ್ತರ ಕರ್ನಾಟಕದ ಸ್ಪೆಷಲ್​ ಮೋದಕ ಸವಿಯಲು ಸಿದ್ಧ.

ಇದನ್ನೂ ಓದಿ:
ಗಣೇಶ ಹಬ್ಬದ ಸ್ಪೆಷಲ್ ಕರ್ಜಿಕಾಯಿ; ರುಚಿಕರವಾದ ತಿಂಡಿ ಮಾಡಿ ಸವಿಯಿರಿ

ಬಿದಿರು ಕಳಲೆ ಸಾಂಬಾರ್; ವರ್ಷಕ್ಕೆ ಒಮ್ಮೆಯಾದರೂ ಮಾಡಿ ಸವಿಯಿರಿ

 

Published On - 8:31 am, Wed, 8 September 21

Follow us on