ರಾಮಕೋಟಿ ಜಪ ಬರೆಯುವುದರ ಹಿಂದಿನ ರಹಸ್ಯ ಇಲ್ಲಿದೆ ನೋಡಿ
ಶ್ರೀರಾಮಕೋಟಿ ಬರೆಯುವುದರಿಂದ ಲಾಭಗಳು ಅನೇಕ. ಮಾನಸಿಕ ನೆಮ್ಮದಿ, ಏಕಾಗ್ರತೆ ಮತ್ತು ನಂಬಿಕೆ ಹೆಚ್ಚಾಗುತ್ತದೆ. ಭಯದ ಭಾವನೆ ಕಡಿಮೆಯಾಗುತ್ತದೆ. ಶುದ್ಧವಾದ ಪೇಪರ್ ಅಥವಾ ಪುಸ್ತಕದಲ್ಲಿ ಬರೆಯುವುದು ಉತ್ತಮ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿದ್ದು, ಇನ್ನಷ್ಟು ವಿವರಗಳನ್ನು ವಿಡಿಯೋದಲ್ಲಿ ತಿಳಿಸಿದ್ದಾರೆ.
ಶ್ರೀರಾಮಕೋಟಿಯನ್ನು ಬೆಳಿಗ್ಗೆ, ಮಧ್ಯಾಹ್ನ ಅಥವಾ ಸಂಜೆ ಬರೆಯಬಹುದು. ಪೂರ್ವ ದಿಕ್ಕಿಗೆ ಮುಖಮಾಡಿ ಕುಳಿತು ಬರೆಯುವುದು ಶುಭ. ರಾಮಕೋಟಿಯನ್ನು ಅರ್ಧಕ್ಕೆ ನಿಲ್ಲಿಸಬಾರದು. ಪೂರ್ಣಗೊಳಿಸಿದ ನಂತರ ದೇವಸ್ಥಾನ ಅಥವಾ ಆಶ್ರಮಕ್ಕೆ ಕೊಡುವುದು ಉತ್ತಮ. ಇದರಿಂದ ಆರೋಗ್ಯ, ಐಶ್ವರ್ಯ ಮತ್ತು ಅದೃಷ್ಟ ಹೆಚ್ಚಾಗುತ್ತದೆ. ನವಗ್ರಹ ಕಾಟ ಕಡಿಮೆಯಾಗುತ್ತದೆ ಮತ್ತು ಸಮಾಜದಲ್ಲಿ ಗೌರವ ಗಳಿಸಬಹುದು. ರಾಮಕೋಟಿ ಬರೆಯುವ ಮೊದಲು ಹನುಮನ ದೇವಸ್ಥಾನ ಅಥವಾ ರಾಮನ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡುವುದು ಒಳ್ಳೆಯದು ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ವಿವರಿಸಿದ್ದಾರೆ.