ಗುಂಡುಹಾರಿಸಿ ಕುಖ್ಯಾತ ಅಂತರರಾಜ್ಯ ಕಳ್ಳರ ಗ್ಯಾಂಗ್ ಬಂಧಿಸಿದ ಹುಬ್ಬಳ್ಳಿ-ಧಾರವಾಡ ಪೊಲೀಸರು

|

Updated on: Mar 15, 2025 | 12:17 PM

ಪೊಲೀಸರು ಬಂಧಿಸಿರುವ ಕಳ್ಳರು ಉತ್ತರ ಪ್ರದೇಶದ ಘಾಜಿಯಾಬಾದ್ ಮತ್ತು ಬುಲಂದ್​ಶಹರ ಮೂಲದವರೆಂದು ಪೊಲೀಸ್ ಅಧಿಕಾರಿ ಹೇಳುತ್ತಾರೆ. ಮಧ್ಯಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಕಳ್ಳರ ಗುಂಪಿನ ಮೇಲೆ ಪ್ರಕರಣಗಳು ದಾಖಲಾಗಿವೆ. ಗುಂಪಿನ ಸದಸ್ಯರು ಪ್ರತಿಷ್ಠಿತ ಮನೆತನಕ್ಕೆ ಸೇರಿದ ಜನರ ಹಾಗೆ ಬಟ್ಟೆ ಧರಿಸುತ್ತಾರಂತೆ.

ಹುಬ್ಬಳ್ಳಿ, 15 ಮಾರ್ಚ್: ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ಅವರ ಮನೆ ಹಿಂಭಾಗದಲ್ಲಿ ಇದೇ ತಿಂಗಳ ಒಂದನೇ ತಾರೀಖು ಭಾರೀ ಮೊತ್ತದ ಹಣವನ್ನು ಕಳ್ಳತನ ಮಾಡಿದ್ದ ಅಂತರರಾಜ್ಯ ಖದೀಮರ ಗ್ಯಾಂಗೊಂದರ ಸದಸ್ಯರಾಗಿರುವ ಇರ್ಶಾದ್ ಖುರೇಶಿ ಮತ್ತು ಅಕ್ಬರ್ ಖುರೇಶೀ ಹೆಸರಿನ ಇಬ್ಬರ ಮೇಲೆ ಹುಬ್ಬಳ್ಳಿ-ಧಾರವಾಡ ಪೊಲೀಸರು ಗೋಲಿಬಾರ್ ಮಾಡಿ ವಶಕ್ಕೆ ಪಡೆದಿದ್ದಾರೆ. ತಪ್ಪಿಸಿಕೊಂಡಿದ್ದ ಮೂರನೇ ಕಳ್ಳ ಶಂಶೇರ್ ನನ್ನೂ ಬಂಧಿಸಲಾಗಿದೆ. ಕಳ್ಳರ ಮೇಲೆ 8 ರೌಂಡ್ ಗುಂಡು ಹಾರಿಸಿ ಬಂಧಿಸಿದ ಸ್ಥಳದಲ್ಲಿ ನಮ್ಮ ವರದಿಗಾರ ಪೊಲೀಸ್ ಕಮೀಶನರ್ ಎನ್ ಶಶಿಕುಮಾರ್ ಅವರೊಂದಿಗೆ ಮಾತಾಡಿದ್ದು ಅವರು ಹೇಳುವ ಪ್ರಕಾರ ಕಳ್ಳರು ತಮಗೆ ಸೇರಿರುವ ಕಾರನ್ನೆ ಸುಟ್ಟಿರುವ ಸಾಧ್ಯತೆ ಇದೆ, ಕಾರಿನ ರಿಜಿಸ್ಟ್ರೇಶನ್ ಮೂಲಕ ಅದರ ಮಾಲೀಕನನ್ನು ತಲುಪುವುದು ಸುಲಭ ಎಂಬ ಕಾರಣಕ್ಕೆ ಕಾರನ್ನು ಸುಟ್ಟಿರುತ್ತಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ರೌಡಿಶೀಟರ್​ನೊಬ್ಬ ತಲೆಮೇಲೆ ಕ್ಯಾಪ್ ಧರಿಸಿದ್ದನ್ನು ಕಂಡು ಕೋಪಗೊಂಡ ಹು-ಧಾ ಪೊಲೀಸ್ ಕಮೀಶನರ್ ಶಶಿಕುಮಾರ್