ಸೀಟ್​​ ಸಿಗದಿದ್ದಕ್ಕೆ ಬಸ್​ ಮುಂದೆ ಮಲಗಿದ ವೃದ್ಧ: ಮುಂದೇನಾಯ್ತು ವಿಡಿಯೋ ನೋಡಿ

Edited By:

Updated on: May 03, 2025 | 2:57 PM

ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್‌ನಲ್ಲಿ ಖಾಸಗಿ ಬಸ್‌ನಲ್ಲಿ ಸೀಟು ಸಿಗದ ಕಾರಣ ವೃದ್ಧ ವ್ಯಕ್ತಿಯೊಬ್ಬರು ಬಸ್‌ನ ಮುಂದೆ ಮಲಗಿ ಪ್ರತಿಭಟಿಸಿದ ಘಟನೆ ನಡೆದಿದೆ. ಬಸ್‌ನಲ್ಲಿ ಸೀಟು ಖಾಲಿಯಾಗಿದ್ದರೂ ಕೊಡದೆ ಇರುವ ಕಾರಣ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಅವರಿಗೆ ಸೀಟು ನೀಡಿದಾಗ ಅವರು ಎದ್ದು ಬಂದಿದ್ದಾರೆ.

ಹುಬ್ಬಳ್ಳಿ, ಮೇ 03: ಖಾಸಗಿ ಬಸ್​ನಲ್ಲಿ ಸೀಟ್​ ಸಿಕ್ಕಲ್ಲ ಎಂದು ಓರ್ವ ವೃದ್ಧ (elderly man) ಬಸ್​ ಮುಂದೆ ಮಲಗಿದ ಘಟನೆ ನಗರದ ಚೆನ್ನಮ್ಮ ಸರ್ಕಲ್​​ನಲ್ಲಿ ನಿನ್ನೆ ನಡೆದಿದೆ. ದಿಢೀರ್​ ಬಸ್​ನಿಂದ ಕೆಳಗಿಳಿದು ಬಸ್​ ಮುಂದೆ ಮಲಗಿದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಳಿತುಕೊಳ್ಳಲು ಸೀಟ್​ ಬಿಟ್ಟಿದ್ದಕ್ಕೆ ವೃದ್ಧ ಎದ್ದು ಬಂದಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.