AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿ ಗಲಭೆ: ಪೊಲೀಸರ ತನಿಖೆಯಲ್ಲಿ ಹಲವು ಆತಂಕಕಾರಿ ಅಂಶಗಳು ಬಯಲಿಗೆ ಬರುತ್ತಿವೆ

ಹುಬ್ಬಳ್ಳಿ ಗಲಭೆ: ಪೊಲೀಸರ ತನಿಖೆಯಲ್ಲಿ ಹಲವು ಆತಂಕಕಾರಿ ಅಂಶಗಳು ಬಯಲಿಗೆ ಬರುತ್ತಿವೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 21, 2022 | 4:18 PM

ರಾಮನವಮಿಯ ಸಂದರ್ಭದಲ್ಲಿ ಹುಬ್ಬಳ್ಳಿಯ ಬಹುತೇಕ ಓಣಿಗಳಲ್ಲಿ ಗಲಭೆ ಸೃಷ್ಟಿಸುವ ಯೋಜನೆ ಕೆಲ ಕಿಡಿಗೇಡಿಗಳಿಗೆ ಇತ್ತು ಎನ್ನುವ ಅಂಶವೂ ಪೊಲೀಸರ ತನಿಖೆಯಲ್ಲಿ ಬಯಲಿಗೆ ಬಂದಿದೆ.

ಹುಬ್ಬಳ್ಳಿ: ಕಳೆದ ಶನಿವಾರ ಹುಬ್ಬಳ್ಳಿಯಲ್ಲಿ (Hubballi) ಒಂದು ಪ್ರಚೋದಕಾರಿ ವಾಟ್ಸ್ಯಾಪ್ ಪೋಸ್ಟ್ ಗೆ ಸಂಬಂಧಿಸಿದಂತೆ ನಗರದಲ್ಲಿ ನಡೆದ ದೊಂಬಿ ಮತ್ತು ಹಿಂಸಾಚಾರ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಪೊಲೀಸರಿಗೆ ಕೆಲ ಹೊಸ ಅಂಶಗಳು ಗೊತ್ತಾಗುತ್ತಿವೆ. ಕಳೆದ 3-4 ತಿಂಗಳುಗಳಿಂದ ಹುಬ್ಬಳ್ಳಿ ನಗರದಲ್ಲಿ ಯಾವುದೇ ಸಮಯ ಮತೀಯ ಗಲಭೆ ತೋರಬಹುದಾದ ಸ್ಥಿತಿ ಇತ್ತು. ಹಿಜಾಬ್ ವಿವಾದ (hijab controversy) ಶುರುವಾದಾಗಿನಿಂದ ಎರಡೂ ಸಮುದಾಯದ ಕೆಲ ಕಿಡಿಗೇಡಿಗಳು ಭುಗಿಲೇಳುವ ಅವಕಾಶಕ್ಕಾಗಿ ಕಾಯುತ್ತಿದ್ದರು ಅಂತ ಹೇಳಲಾಗುತ್ತಿದೆ. ಈ ವಿಡಿಯೋ ನೋಡಿ. ಹಿಂದೂ ಸಮುದಾಯದ ಒಂದು ಗುಂಪು ಹುಬ್ಬಳ್ಳಿಯ ಪೆಂಡಾರ್ ಗಲ್ಲಿಯಲ್ಲಿರುವ (Pendar galli) ಮಸೀದಿಯೊಂದರ ಮೇಲೆ, ಲೇಸರ್ ಲೈಟ್ ಮೂಲಕ ಜೈ ಶ್ರೀರಾಮ್ ಘೋಷಣೆ ಮತ್ತು ರಾಮಮಂದಿರದ ಚಿತ್ರ ಹಾದುಹೋಗುವಂತೆ ಮಾಡುತ್ತಿದ್ದಾರೆ. ಮುಸ್ಲಿಂ ಸಮುದಾಯದ ನಾಯಕರು ಮಧ್ಯೆಪ್ರವೇಶಿಸಿ ಹಾಗೆಲ್ಲ ಮಾಡಬೇಡಿ ಅಂತ ಮನವಿ ಮಾಡಿಕೊಂಡಿದ್ದರಂತೆ.

ರಾಮನವಮಿಯ ಸಂದರ್ಭದಲ್ಲಿ ಹುಬ್ಬಳ್ಳಿಯ ಬಹುತೇಕ ಓಣಿಗಳಲ್ಲಿ ಗಲಭೆ ಸೃಷ್ಟಿಸುವ ಯೋಜನೆ ಕೆಲ ಕಿಡಿಗೇಡಿಗಳಿಗೆ ಇತ್ತು ಎನ್ನುವ ಅಂಶವೂ ಪೊಲೀಸರ ತನಿಖೆಯಲ್ಲಿ ಬಯಲಿಗೆ ಬಂದಿದೆ. ಶೋಭಾಯಾತ್ರೆ ನಡೆಯುತ್ತಿದ್ದ ಸಂದರ್ಭದಲ್ಲಿ ಯಾವುದಾದರೂ ಒಂದು ಓಣಿಯ ಮೆರವಣಿಗೆಯನ್ನು ಕೆಣಕಿದ್ದರೆ ಸಾಕಿತ್ತು, ಇಡೀ ಹುಬ್ಬಳ್ಳಿಯಲ್ಲಿ ಕಿಚ್ಚು ಹೊತ್ತಿಕೊಳ್ಳುತಿತ್ತು.

ಗಲಭೆ ಸೃಷ್ಟಿಸಲು ನೆಪ ಹುಡುಕುತ್ತಿದ್ದ ಮುಸ್ಲಿಂ ಸಮುದಾಯದ ಕೆಲ ಕಿಡಿಗೇಡಿಗಳಿಗೆ ವರದಾನವಾಗಿ ಸಿಕ್ಕಿದ್ದು ಪ್ರಚೋದಕಾರಿ ವಾಟ್ಸ್ಯಾಪ್ ಪೋಸ್ಟ್. ಹಳೆ ಹುಬ್ಬಳ್ಳಿ ಠಾಣೆಯ ಪೊಲೀಸರು ಪೋಸ್ಟ್ ಹಾಕಿದ್ದ ಯುವಕನನ್ನು ಕೂಡಲೇ ತಮ್ಮ ವಶಕ್ಕೆ ಕೂಡಿ ಹಾಕಿರದಿದ್ದರೆ ಅವನನ್ನು ಮುಗಿಸುವ ಹೊಂಚು ಹಾಕುತ್ತಿತ್ತಂತೆ ಒಂದು ಗುಂಪು!
ಪೊಲೀಸರ ತನಿಖೆ ಇನ್ನೂ ನಡೀತಾ ಇದೆ. ಅದು ಪೂರ್ತಿಗೊಳ್ಳುವುದರೊಳಗೆ ಇನ್ನೇನು ಆತಂಕಕಾರಿ ವಿಷಯಗಳು ಹೊರ ಬೀಳಲಿವೆಯೋ?

ಇದನ್ನೂ ಓದಿ:   ಹುಬ್ಬಳ್ಳಿ ಹಿಂಸಾಚಾರದ ಭೀಕರ ಮುಖ: ದಿಡ್ಡಿ ಹನುಮಂತ ದೇಗುಲ ಬಳಿ ಇಬ್ಬರು ಕಾನ್ಸ್‌ಟೇಬಲ್ಸ್​ ಹತ್ಯೆಗೆ ಯತ್ನಿಸಿದ್ದ ಗಲಭೆಕೋರರು?