ಹುಬ್ಬಳ್ಳಿ: ಕಿಮ್ಸ್ ನೂತನ ಕಟ್ಟಡದ ಚಾವಣಿಯ ಪಿಒಪಿ ಕುಸಿತ, ತಪ್ಪಿದ ದುರಂತ
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ನೂತನ ಸೂಪರ್ ಸ್ಪೆಷಾಲಿಟಿ ಕಟ್ಟಡದಲ್ಲಿ ಭಾರಿ ಅನಾಹುತ ಸಂಭವಿಸಿದೆ. ಅದೃಷ್ಟವಶಾತ್ ಯಾರಿಗೂ ತೊಂದರೆಯಾಗಿಲ್ಲ. ಜೀವ ಹಾನಿಯಾಗಿಲ್ಲ. ಕಳೆದ ವರ್ಷವಷ್ಟೇ ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಿತ್ತು. ಚಾವಣಿಯ ಪಿಒಪಿ ಕುಸಿತದ ವಿಡಿಯೋ ಇಲ್ಲಿದೆ ನೋಡಿ.
ಹುಬ್ಬಳ್ಳಿ, ಜೂನ್ 28: ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ನೂತನ ಸೂಪರ್ ಸ್ಪೆಷಾಲಿಟಿ ಕಟ್ಟಡದ ಕೆಳ ಅಂತಸ್ತಿನ ಚಾವಣಿಯ ಪಿಒಪಿ ಕುಸಿದಿದೆ. ಅದೃಷ್ಟವಶಾತ್, ಪ್ರಣಾಪಾಯ ಸಂಭವಿಸಿಲ್ಲ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿರುವ ಪಿಎಂಎಸ್ಎಸ್ವೈ ಬಿಲ್ಡಿಂಗ್ ಇದಾಗಿದೆ. ಘಟನಾ ಸ್ಥಳಕ್ಕೆ ಕಿಮ್ಸ್ ನಿರ್ದೇಶಕ, ಆಡಳಿತ ಮಂಡಳಿ ಸದಸ್ಯರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ವಿದ್ಯಾನಗರ ಪೊಲೀಸ್ ಠಾಣೆಯ ಸಿಬ್ಬಂದಿ ಕೂಡ ಭೇಟಿ ನೀಡಿದ್ದಾರೆ.
ಕಳೆದ ವರ್ಷವಷ್ಟೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಕಿಮ್ಸ್ಗೆ ಹಸ್ತಾಂತರಿಸಿ, ನಂತರ ಸುಮಾರು 150 ಕೋಟಿ ರೂಪಾಯಿ ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಕಟ್ಟಡದ ಕೆಳ ಅಂತಸ್ತಿನ ಕಾಮಗಾರಿ ಕಳೆದ ವರ್ಷವೇ ಪೂರ್ಣಗೊಂಡು ಕಾರ್ಯಾರಂಭ ಮಾಡಲಾಗಿತ್ತು.
ಶನಿವಾರ ಮೇಯರ್, ಉಪಮೇಯರ್ ಚುನಾವಣೆ
ಹುಬ್ಬಳ್ಳಿ ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಚುನಾವಣೆ ಶನಿವಾರ ನಡೆಯಲಿದ್ದು, ಬಿಜೆಪಿ ವಿಪ್ ಜಾರಿಗೊಳಿಸಿದೆ. ಬಿಜೆಪಿಯ ಪಾಲಿಕೆ ಸದಸ್ಯರು ಮತ್ತು ಬಿಜೆಪಿಯ ಜನಪ್ರತಿನಿಧಿಗಳಿಗೆ ವಿಪ್ ಜಾರಿಗೊಳಿಸಲಾಗಿದೆ. ಬಿಜೆಪಿ 38 ಪಾಲಿಕೆ ಸದಸ್ಯರು ಹಾಗೂ ಬಿಜೆಪಿ ಜೊತೆ ಗುರುತಿಸಿಕೊಂಡ ಇಬ್ಬರು ಪಕ್ಷೇತರ ಸದಸ್ಯರಿಗೆ ವಿಪ್ ಜಾರಿ ಮಾಡಲಾಗಿದೆ. ಸಂಸದರು, ಶಾಸಕರು ಸೇರಿ ಆರು ಜನಪ್ರತಿನಿಧಿಗಳಿಗೂ ವಿಪ್ ಜಾರಿಗೊಳಿಸಲಾಗಿದ್ದು, ಮತ ವಿಭಜನೆಯಾಗದಂತೆ ಬಿಜೆಪಿ ಮುನ್ನೆಚ್ಚರಿಕೆ ವಹಿಸಿದೆ. ಇಂದು ರಾತ್ರಿ ಹುಬ್ಬಳ್ಳಿಯ ಖಾಸಗಿ ಹೋಟೆಲ್ನಲ್ಲಿ ಪ್ರಮುಖರ ಸಭೆ ನಡೆಸಲೂ ಮುಂದಾಗಿದೆ.
ಇದನ್ನೂ ಓದಿ: ನನಸಾಗಲಿದೆಯೇ ಧಾರವಾಡ ಬೆಳಗಾವಿ ರೈಲು ಯೋಜನೆ? ಜೋಶಿ, ಶೆಟ್ಟರ್ ಮೇಲೆ ಎಲ್ಲರ ಕಣ್ಣು
ಮೂರನೇ ಅವಧಿಗೂ ಪಾಲಿಕೆಯಲ್ಲಿ ಕಮಲ ಅರಳಿಸಲು ಎಲ್ಲ ರೀತಿಯ ಸಿದ್ಧತೆ ಬಿಜೆಪಿಯಿಂದ ನಡೆಯುತ್ತಿದೆ. ಪಾಲಿಕೆಯಲ್ಲಿ ಬಿಜೆಪಿ ಬಹುಮತ ಹೊಂದಿದೆ. ಮೇಯರ್ ಸ್ಥಾನ ಹಿಂದುಳಿದ ವರ್ಗ, ಪುರುಷ ಮತ್ತು ಉಪಮೇಯ ಸ್ಥಾನ ಎಸ್ಸಿ ಮಹಿಳೆಗೆ ಮೀಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ