ವಿಡಿಯೋ ನೋಡಿ: ಹುಬ್ಬಳ್ಳಿಯಲ್ಲಿ ರಸ್ತೆಗೆ ಬಿದ್ದ ಬೃಹತ್ ಕಂಬ, ತಪ್ಪಿದ ಭಾರೀ ದುರಂತ
ಬೃಹದಾಕಾರದ ಕಬ್ಬಿಣದ ಕಂಬವೊಂದು ರಸ್ತೆ ಮೇಲೆ ಬಿದ್ದ ಘಟನೆ ಹುಬ್ಬಳ್ಳಿಯ ರೇಲ್ವೆ ನಿಲ್ದಾಣದ ಬಳಿಯ ರಸ್ತೆಯಲ್ಲಿ ಮಂಗಳವಾರ ಸಂಭವಿಸಿದೆ. ಅದೃಷ್ಟವಶಾತ್, ವಾಹನ ಸವಾರರು ಕೂದಲಳೆಯ ಅಂತರದಲ್ಲಿ ಬಲುದೊಡ್ಡ ಗಂಡಾಂತರದಿಂದ ಪಾರಾಗಿದ್ದಾರೆ.
ಹುಬ್ಬಳ್ಳಿ: ಬೃಹದಾಕಾರದ ಕಬ್ಬಿಣದ ಕಂಬವೊಂದು ರಸ್ತೆ ಮೇಲೆ ಬಿದ್ದ ಘಟನೆ ಹುಬ್ಬಳ್ಳಿಯ ರೇಲ್ವೆ ನಿಲ್ದಾಣದ ಬಳಿಯ ರಸ್ತೆಯಲ್ಲಿ ಮಂಗಳವಾರ ಸಂಭವಿಸಿದೆ. ಅದೃಷ್ಟವಶಾತ್, ವಾಹನ ಸವಾರರು ಕೂದಲಳೆಯ ಅಂತರದಲ್ಲಿ ಬಲುದೊಡ್ಡ ಗಂಡಾಂತರದಿಂದ ಪಾರಾಗಿದ್ದಾರೆ. ಘಟನೆ ಸಂಬಂಧಿತ ಎದೆ ಝಲ್ ಎನ್ನುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ರೇಲ್ವೆ ಮೇಲ್ಸೇತುವೆ ಬಳಿ ಬೃಹತ್ ವಾಹನಗಳ ಪ್ರವೇಶ ನಿರ್ಬಂಧಿಸುವ ದೃಷ್ಟಿಯಿಂದ ಹಾಕಲಾಗಿದ್ದ ಕಬ್ಬಿಣದ ಬೃಹತ್ ಕಂಬ ಬಿದ್ದಿದೆ. ಕಂಬ ತುಕ್ಕು ಹಿಡಿದು ತನ್ನಷ್ಟಕ್ಕೆ ತಾನೆ ನೆಲಕ್ಕುರುಳಿದೆ ಎನ್ನಲಾಗಿದೆ. ಬಸ್, ಕಾರು, ದ್ವಿಚಕ್ರ ವಾಹನಗಳು ಹಾದುಹೋದ ಕಾಲವೇ ಕ್ಷಣಗಳಲ್ಲಿ ಕಂಬ ಉರಳಿಬಿದ್ದಿದೆ. ಅತ್ಯಂತ ಜನದಟ್ಟಣೆಯ ಪ್ರದೇಶ ಹಾಗೂ ಹುಬ್ಬಳ್ಳಿ-ಗದಗ ಎನ್‌ಎಚ್-63 ರಸ್ತೆ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದೆ. ನಿರ್ಲಕ್ಷ್ಯ ವಹಿಸಿದ ರೇಲ್ವೆ ಇಲಾಖೆಯ ಅಧಿಕಾರಗಳ ವಿರುದ್ಧ ಕ್ರಮಕ್ಕೆ ಹುಬ್ಬಳ್ಳಿಯ ಜನರು ಆಗ್ರಹಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ