ಮೈಸೂರು: ಕುರಿ ಕೊಟ್ಟಿಗೆಯಂತಹ ಅಂಗನವಾಡಿಯಲ್ಲಿ ಪುಟಾಣಿ ಮಕ್ಕಳ ಕಲಿಕೆ
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಅಸ್ವಾಳು ಗ್ರಾಮದ ಅಂಗನವಾಡಿ ಕೇಂದ್ರ ಕುರಿ ಕೊಟ್ಟಿಗೆಯ ಹಾಗೆ ಇದೆ. ಗ್ರಾಮದ ಬಾಡಿಗೆ ಮನೆಯಲ್ಲಿ ಅಂಗನವಾಡಿ ಕೇಂದ್ರ ನಡೆಸುತ್ತಿದ್ದು, ಸುಮಾರು 17 ಮಕ್ಕಳು ಕಲಿಯುತ್ತಾರೆ. ಅಂಗನವಾಡಿಗೆ ಕೇಂದ್ರಕ್ಕೆ ಹೋಗಲು ಸಮರ್ಪಕವಾದ ರಸ್ತೆಯೂ ಇಲ್ಲ.
ಮೈಸೂರು, ಜನವರಿ 06: ಹುಣಸೂರು (Hunsur) ತಾಲೂಕಿನ ಅಸ್ವಾಳು ಗ್ರಾಮದ ಅಂಗನವಾಡಿ (Anganwadi) ಕೇಂದ್ರ ಕುರಿ ಕೊಟ್ಟಿಗೆಯ ಹಾಗೆ ಇದೆ. ಗ್ರಾಮದ ಬಾಡಿಗೆ ಮನೆಯಲ್ಲಿ ಅಂಗನವಾಡಿ ಕೇಂದ್ರ ನಡೆಸುತ್ತಿದ್ದು, ಸುಮಾರು 17 ಮಕ್ಕಳು ಕಲಿಯುತ್ತಾರೆ. ಅಂಗನವಾಡಿಗೆ ಕೇಂದ್ರಕ್ಕೆ ಹೋಗಲು ಸಮರ್ಪಕವಾದ ರಸ್ತೆಯೂ ಇಲ್ಲ. ಮೋರಿಯನ್ನು ದಾಟಿ ಮಕ್ಕಳು ಅಂಗನವಾಡಿಗೆ ಹೋಗಬೇಕು. ಮೋರಿ ದಾಟಲು ಕಲ್ಲುಗಳನ್ನು ಹಾಕಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಇನ್ನು ಅಂಗನವಾಡಿ ಕೇಂದ್ರ ಬೀಳುವ ಸ್ಥಿತಿಯಲ್ಲಿದೆ. ಕನಿಷ್ಠ ಸೌಲಭ್ಯವಿಲ್ಲದ ಅಂಗನವಾಡಿಯಲ್ಲಿ ಮಕ್ಕಳು ಕಲಿಯುತ್ತಿದ್ದಾರೆ.
Latest Videos