‘ಪಕ್ಕದಲ್ಲಿ ಚೆಂದದ ಹುಡುಗಿ ಇದ್ದಿದ್ದರೆ ನಾನು ಎಲಿಮಿನೇಟ್ ಆಗ್ತಾ ಇರಲಿಲ್ಲ’; ಕರಿ ಬಸಪ್ಪ
ಕರಿ ಬಸಪ್ಪ ಅವರು ಒಂದೇ ವಾರಕ್ಕೆ ಬಿಗ್ ಬಾಸ್ ಮನೆಯಿಂದ ಹೊರ ಬಂದರು. ಈಗ ಅವರು ದೊಡ್ಮನೆಯಿಂದ ಹೊರ ಬಂದು ಟಿವಿ9 ಕನ್ನಡದ ಜೊತೆಗೆ ಮಾತನಾಡಿದ್ದಾರೆ. ಈ ವೇಳೆ ಅವರು ಒಂದು ವಿಚಾರದಲ್ಲಿ ಗಂಭೀರ ಆರೋಪ ಮಾಡಿದ್ದನ್ನು ಕಾಣಬಹುದು. ಆ ಬಗ್ಗೆ ಇಲ್ಲಿದೆ ಮಾಹಿತಿ.
ಕರಿ ಬಸಪ್ಪ ಹಾಗೂ ಆರ್ಜೆ ಅಮಿತ್ ಅವರು ಬಿಗ್ ಬಾಸ್ ಮನೆಯಿಂದ ಹೊರ ಹೋದ ಮೊದಲ ಸ್ಪರ್ಧಿಗಳಾಗಿದ್ದಾರೆ. ವಾರಾಂತ್ಯದಲ್ಲಿ ನಡೆದ ಎಲಿಮಿನೇಷನ್ನಲ್ಲಿ ಅವರು ದೊಡ್ಮನೆಯಿಂದ ಹೊರ ಬಂದಿದ್ದಾರೆ. ಬಿಗ್ ಬಾಸ್ನಿಂದ ಹೊರ ಬರುತ್ತಿದ್ದಂತೆ ಅವರು ಒಂದು ಗಂಭೀರ ಆರೋಪ ಮಾಡಿದ್ದಾರೆ. ‘ನನ್ನ ಜೊತೆ ಹುಡುಗ ಇದ್ದ, ಚೆಂದದ ಹುಡುಗಿ ಇದ್ದಿದ್ದರೆ ನಾನು ಎಲಿಮಿನೇಟ್ ಆಗುತ್ತಾ ಇರಲಿಲ್ಲ’ ಎಂದು ಕರಿ ಬಸಪ್ಪ ಆರೋಪ ಮಾಡಿದ್ದಾರೆ. ಈ ವಿಡಿಯೋ ಬಗ್ಗೆ ಚರ್ಚೆಗಳು ನಡೆಯುತ್ತಿರುವುದನ್ನು ಕಾಣಬಹುದು. ಸಂಪೂರ್ಣ ವಿಡಿಯೋ ಮೇಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos
