ಡಾರ್ಜಿಲಿಂಗ್ ಭೂಕುಸಿತದ ಸಾವಿನ ಸಂಖ್ಯೆ 24ಕ್ಕೆ ಏರಿಕೆ; ಹಲವು ಜನ ನಾಪತ್ತೆ
ಕೇವಲ 12 ಗಂಟೆಗಳಲ್ಲಿ 300 ಮಿ.ಮೀ.ಗೂ ಹೆಚ್ಚು ಮಳೆಯಾಗಿದ್ದರಿಂದ ಉಂಟಾದ ಭೂಕುಸಿತಗಳು ಡಾರ್ಜಿಲಿಂಗ್ ಬೆಟ್ಟಗಳು ಮತ್ತು ಬೆಟ್ಟಗಳ ತಪ್ಪಲಿನಲ್ಲಿರುವ ಡೂರ್ಸ್ ಪ್ರದೇಶದ ಮೇಲೆ ತೀವ್ರ ಪರಿಣಾಮ ಬೀರಿವೆ. ಡಾರ್ಜಿಲಿಂಗ್‌ನ ಮಿರಿಕ್, ಸುಖಿಯಾಪೋಖ್ರಿ ಮತ್ತು ಜೋರೆಬಂಗ್ಲೋ ಹಾಗೂ ಜಲ್ಪೈಗುರಿ ಜಿಲ್ಲೆಯ ನಾಗರಕಟ ಸೇರಿದಂತೆ ಅತ್ಯಂತ ಹಾನಿಗೊಳಗಾದ ಪ್ರದೇಶಗಳು ಇಲ್ಲಿವೆ. ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ತಂಡಗಳು ಅನೇಕ ಸ್ಥಳಗಳಲ್ಲಿ ರಕ್ಷಣಾ ಪ್ರಯತ್ನಗಳನ್ನು ನಡೆಸುತ್ತಿದ್ದು, ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಜನರನ್ನು ಪತ್ತೆಹಚ್ಚಲು ಭಾರೀ ಮಣ್ಣು ಚಲಿಸುವ ಯಂತ್ರಗಳನ್ನು ಬಳಸುತ್ತಿವೆ.
ಡಾರ್ಜಿಲಿಂಗ್, ಅಕ್ಟೋಬರ್ 6: ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ನಲ್ಲಿ ಭೂಕುಸಿತ (Darjeeling landslide) ಉಂಟಾಗಿದೆ. ಕೇವಲ 12 ಗಂಟೆಗಳಲ್ಲಿ 300 ಮಿ.ಮೀ.ಗೂ ಹೆಚ್ಚು ಮಳೆಯಿಂದ ಉಂಟಾದ ಕಾರಣದಿಂದ ಭೂಕುಸಿತ ಉಂಟಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯಲ್ಲಿ ಇಂದು ಕೂಡ ಸಂಭವಿಸಿದ ಭೂಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 24ಕ್ಕೆ ಏರಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಹಲವಾರು ಜನರು ಇನ್ನೂ ಕಾಣೆಯಾಗಿದ್ದಾರೆ ಮತ್ತು ಸಾವಿರಾರು ಪ್ರವಾಸಿಗರು ಬೆಟ್ಟಗಳಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos

