ನಾನು ಅವಿದ್ಯಾವಂತನೇನೂ ಅಲ್ಲ, ನನಗೂ ಕಾಮನ್ ಸೆನ್ಸ್ ಇದೆ: ಶಿವರಾಜ ತಂಗಡಗಿ, ಸಚಿವ
ಕನ್ನಡ ಅಜ್ಞಾನದ ಬಗ್ಗೆ ಸಮರ್ಥನೆ ನೀಡುತ್ತಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಎಷ್ಟು ಸಂಸ್ಕೃತರು ಅಂತ ಅವರ ಭಾಷೆಯಿಂದ ಗೊತ್ತಾಗುತ್ತದೆ. ತಮ್ಮೊಂದಿಗೆ ನಿಂತಿರುವ ಅಧಿಕಾರಿಗಳನ್ನು ಅವರು ಸಂಬೋಧಿಸುವ ರೀತಿಯನ್ನು ಗಮನಿಸಿ. ಎಲ್ಲರನ್ನೂ ಏಕವಚನದಲ್ಲೇ ಮಾತಾಡಿಸುತ್ತಾರೆ. ತಾನು ಅವಿದ್ಯಾವಂತನಲ್ಲ, ಬಿಎಸ್ಸಿ ಓದಿದ್ದೇನೆ, ಕಾಮನ್ ಸೆನ್ಸ್ ಅನ್ನೋದು ತನ್ನಲ್ಲೂ ಇದೆ ಎಂದು ಸಚಿವ ಹೇಳುತ್ತಾರೆ.
ಕೊಪ್ಪಳ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಇಷ್ಟೆಲ್ಲ ಮಾತಾಡುವ ಬದಲು ನನಗೆ ತಪ್ಪಿಲ್ಲದೆ ಕನ್ನಡ ಬರೆಯಲು ಬರಲ್ಲ ದಯವಿಟ್ಟು ಕ್ಷಮಿಸಿ ಅಂತ ಕನ್ನಡಿಗರಿಗೆ ಹೇಳಿದರೆ ಸಾಕಿತ್ತು. ವಿಷಯವೇನೂಂತ ಕನ್ನಡಿಗರಿಗೆ ಗೊತ್ತಿದೆ. ಜಿಲ್ಲೆಯ ಕಾರಟಗಿಯಲ್ಲಿ ಅಂಗನವಾಡಿ ಕೇಂದ್ರದ ಉದ್ಘಾಟನೆಗೆ ತೆರಳಿದ್ದ ಸಚಿವ ಹೋದ ಕೆಲಸ ಮಾಡೋದನ್ನು ಬಿಟ್ಟು ಕನ್ನಡ ಪ್ರದರ್ಶಿಸುವ ಭರದಲ್ಲಿ ಕಪ್ಪು ಹಲಗೆಯ ಮೇಲೆ ಶುಭವಾಗಲಿ ಎಂದು ಬರೆಯುವ ಬದಲ ಶುಬವಾಗಲಿ ಅಂತ ಬರೆದಿದ್ದಾರೆ. ಕನ್ನಡ ಮತ್ತು ಭಾಷೆಯ ವ್ಯಾಕರಣದ ಬಗ್ಗೆ ಅಪಾರ ಜ್ಞಾನ ಮತ್ತು ಕಾಳಜಿಯಿರುವ ಸಿಎಂ ಸಿದ್ದರಾಮಯ್ಯನವರಿಗೆ ಸಚಿವನ ಕನ್ನಡ ಜ್ಞಾನದ ಬಗ್ಗೆ ಗೊತ್ತಾದರೆ ತಂಗಡಗಿ ಸಾಹೇಬರ ಖಾತೆ ಬದಲಾಗುವ ಸಾಧ್ಯತೆ ಇದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮುಂದಿನ ಸಂಪುಟ ಸಭೆಯಲ್ಲಿ ಜಾತಿಗಣತಿ ಸಮೀಕ್ಷೆ ಬಗ್ಗೆ ಚರ್ಚೆ; ಸಚಿವ ಶಿವರಾಜ ತಂಗಡಗಿ