Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೂರತ್: ಮ್ಯಾನ್​ಹೋಲ್​ಗೆ ಬಿದ್ದ ಎರಡು ವರ್ಷದ ಬಾಲಕ

ಸೂರತ್: ಮ್ಯಾನ್​ಹೋಲ್​ಗೆ ಬಿದ್ದ ಎರಡು ವರ್ಷದ ಬಾಲಕ

ನಯನಾ ರಾಜೀವ್
|

Updated on: Feb 06, 2025 | 11:24 AM

ಎರಡು ವರ್ಷದ ಬಾಲಕ ಮ್ಯಾನ್​ಹೋಲ್​ಗೆ ಬಿದ್ದಿರುವ ಘಟನೆ ಗುಜರಾತ್​ನ ಸೂರತ್​ನಲ್ಲಿ ನಡೆದಿದೆ. ಮಗುವನ್ನು ರಕ್ಷಿಸಲು ಕಾರ್ಯಾಚರಣೆ ನಡೆಸಲಾಗುತ್ತಿದೆ. ಸೂರತ್​ನ ವೈರವ್ ಗ್ರಾಮದಲ್ಲಿ ಮ್ಯಾನ್​ಹೋಲ್​ನ ಮುಚ್ಚುಳವು ಭಾರೀ ವಾಹನದಿಂದ ಹಾನಿಗೊಳಗಾಗಿತ್ತು, ಹೀಗಾಗಿ ಆ ಮಗು ಬಿದ್ದಿದೆ ಎನ್ನಲಾಗಿದೆ. ಮಾಹಿತಿ ಪಡೆದ ನಂತರ ಅಗ್ನಿಶಾಮಕ ದಳದ ಅಧಿಕಾರಿಗಳ ತಂಡ ಸ್ಥಳಕ್ಕೆ ಆಗಮಿಸಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.

ಎರಡು ವರ್ಷದ ಬಾಲಕ ಮ್ಯಾನ್​ಹೋಲ್​ಗೆ ಬಿದ್ದಿರುವ ಘಟನೆ ಗುಜರಾತ್​ನ ಸೂರತ್​ನಲ್ಲಿ ನಡೆದಿದೆ. ಮಗುವನ್ನು ರಕ್ಷಿಸಲು ಕಾರ್ಯಾಚರಣೆ ನಡೆಸಲಾಗುತ್ತಿದೆ. ಸೂರತ್​ನ ವೈರವ್ ಗ್ರಾಮದಲ್ಲಿ ಮ್ಯಾನ್​ಹೋಲ್​ನ ಮುಚ್ಚುಳವು ಭಾರೀ ವಾಹನದಿಂದ ಹಾನಿಗೊಳಗಾಗಿತ್ತು, ಹೀಗಾಗಿ ಆ ಮಗು ಬಿದ್ದಿದೆ ಎನ್ನಲಾಗಿದೆ. ಮಾಹಿತಿ ಪಡೆದ ನಂತರ ಅಗ್ನಿಶಾಮಕ ದಳದ ಅಧಿಕಾರಿಗಳ ತಂಡ ಸ್ಥಳಕ್ಕೆ ಆಗಮಿಸಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಭಾರೀ ವಾಹನವೊಂದು ಮ್ಯಾನ್​ಹೋಲ್​ ಮುಚ್ಚುಳಕ್ಕೆ ಹಾನಿ ಮಾಡಿತ್ತು. 100-150 ಮೀಟರ್ ಪ್ರದೇಶದ ಸುತ್ತಲೂ ಪರಿಶೀಲಿಸಿದ್ದೇವೆ ಎಂದು ಮುಖ್ಯ ಅಗ್ನಿಶಾಮಕ ಅಧಿಕಾರಿ ಬಸಂತ್ ಪಾರಿಖ್ ತಿಳಿಸಿದ್ದಾರೆ.
ಮಗುವನ್ನು ರಕ್ಷಿಸಲು ಸಮಯ ತೆಗೆದುಕೊಳ್ಳುತ್ತದೆ, 60-70 ಕಾರ್ಮಿಕರನ್ನು ಇಲ್ಲಿ ನಿಯೋಜಿಸಲಾಗಿದೆ. ಮ್ಯಾನ್‌ಹೋಲ್‌ನ ಮುಚ್ಚಳ ತೆರೆದಿರುವುದು ನನಗೆ ತಿಳಿದಿರಲಿಲ್ಲ ಎಂದು ಬಾಲಕನ ತಾಯಿ ತಿಳಿಸಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ