ಬೆಂಗಳೂರು ಚೋಳೂರುಪಾಳ್ಯದಲ್ಲಿ ನಾಲ್ಕು ಅಂಗಡಿಗಳ ಸರಣಿ ಕಳ್ಳತನ, ಖದೀಮರ ಕೃತ್ಯ ಸಿಸಿಟಿವಿಯಲ್ಲಿ ಸೆರೆ
ಕಳ್ಳತನ ಮಾಡಲು ಖದೀಮರು ತಮ್ಮ ಮೊಬೈಲ್ ಫೋನ್ ಟಾರ್ಚ್ ಬಳಸುತ್ತಾರೆ. ರಾತ್ರಿ ಸಮಯದಲ್ಲಿ ಕಳ್ಳತನ ಮಾಡುವಾಗ ಬೇರೊಂದು ವಾಹನದ ಶಬ್ದ ಕೇಳಿಸಿದರೆ ಸಾಮಾನ್ಯವಾಗಿ ಕಳ್ಳರು ಹೆದರಿ ಅವಿತುಕೊಳ್ಳುವ ಪ್ರಯತ್ನ ಮಾಡುತ್ತಾರೆ. ಅದರೆ ಚೋಳೂರುಪಾಳ್ಯದ ಮುಖ್ಯರಸ್ತೆಯ ಅಂಗಡಿಗಳಲ್ಲಿ ಕಳ್ಳತನ ಮಾಡುತ್ತಿರುವ ಕಳ್ಳರಿಗೆ ಇದ್ಯಾವುದರ ಪರಿವೆಯೇ ಇಲ್ಲ.
ಬೆಂಗಳೂರು: ಮೊನ್ನೆಯಷ್ಟೇ ಆವಲಹಳ್ಳಿ ಪೊಲೀಸರು ಮಂಕೀಕ್ಯಾಪ್ ಧರಿಸಿ ಕೆಅರ್ ಪುರಂ ಮತ್ತು ಹೊಸಕೋಟೆಯಲ್ಲಿ ಕಳ್ಳತನ ಮಾಡುತ್ತಿದ್ದ ಕಳ್ಳರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಮತ್ತೊಂ್ಯ ತಂಡವು ನಗರದ ಚೋಳೂರುಪಾಳ್ಯದ ಮುಖ್ಯರಸ್ತೆಯಲ್ಲಿರುವ ಮೆಡಿಕಲ್ ಶಾಪ್, ಬೇಕರಿ, ನಂದಿನಿ ಮಿಲ್ಕ್ ಪಾರ್ಲರ್ ಹಾಗೂ ಇನ್ನೊಂದು ಅಂಗಡಿಗೆ ನುಗ್ಗಿ ಕಳ್ಳತನ ಮಾಡಿದೆ. ನಾಲ್ವರ ತಂಡ ಎರಡು ಸ್ಕೂಟರ್ ಗಳ ಮೇಲೆ ಬಂದು ಅಂಗಡಿಗಳನ್ನು ದೋಚುವ ಕೃತ್ಯ ಸಿಸಿಟಿವಿ ಕೆಮೆರಾಗಳಲ್ಲಿ ಸೆರೆಯಾಗಿದೆ. ರಸ್ತೆಯಲ್ಲಿ ಕಾರು ಮತ್ತು ಬೇರೆ ವಾಹನಗಳು ವಿರಳವಾಗಿ ಚಲಿಸುತ್ತಿದ್ದರೂ ಕಳ್ಳರು ತಮ್ಮ ಕರಾಮತ್ತ್ತು ನಡೆಸುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಶೋಕಿ ಜೀವನಕ್ಕಾಗಿ ಕಳ್ಳತನ ಮಾಡ್ತಿದ್ದ ಕೆಜಿಎಫ್ ಗ್ಯಾಂಗ್ ಬಂಧನ; ಚಿನ್ನಾಭರಣ ಸೇರಿ 1.5 ಲಕ್ಷ ಹಣ ಜಪ್ತಿ