AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೋಕಿ ಜೀವನಕ್ಕಾಗಿ ಕಳ್ಳತನ ಮಾಡ್ತಿದ್ದ ಕೆಜಿಎಫ್ ಗ್ಯಾಂಗ್ ಬಂಧನ; ಚಿನ್ನಾಭರಣ ಸೇರಿ 1.5 ಲಕ್ಷ ಹಣ ಜಪ್ತಿ

ಶೋಕಿ ಜೀವನಕ್ಕಾಗಿ ಕಳ್ಳತನ ಮಾಡುತ್ತಿದ್ದ ಕೆಜಿಎಫ್ ಗ್ಯಾಂಗ್​ನ್ನು ಜಿಲ್ಲೆಯ ಹೊಸಕೋಟೆ ಉಪವಿಭಾಗದ ಆವಲಹಳ್ಳಿ ಪೊಲೀಸರು ಬಂಧಿಸಿದ್ದಾರೆ. ರೌಡಿಶೀಟರ್ ಸುನೀಲ್, ಅರವಿಂದ್, ನಂದಿನಿ, ಮೇರಿ ಬಂಧನಕ್ಕೊಳಗಾದ ಆರೋಪಿಗಳು.

ಶೋಕಿ ಜೀವನಕ್ಕಾಗಿ ಕಳ್ಳತನ ಮಾಡ್ತಿದ್ದ ಕೆಜಿಎಫ್ ಗ್ಯಾಂಗ್ ಬಂಧನ; ಚಿನ್ನಾಭರಣ ಸೇರಿ 1.5 ಲಕ್ಷ ಹಣ ಜಪ್ತಿ
ಕೆಜಿಎಫ್​ ಗ್ಯಾಂಗ್​ ಅರೆಸ್ಟ್​
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on: Jul 15, 2023 | 12:25 PM

Share

ಬೆಂಗಳೂರು ಗ್ರಾಮಾಂತರ: ಶೋಕಿ ಜೀವನಕ್ಕಾಗಿ ಕಳ್ಳತನ ಮಾಡುತ್ತಿದ್ದ ಕೆಜಿಎಫ್ ಗ್ಯಾಂಗ್(KGF Gang)​ನ್ನು ಜಿಲ್ಲೆಯ ಹೊಸಕೋಟೆ(Hosakote) ಉಪವಿಭಾಗದ ಆವಲಹಳ್ಳಿ ಪೊಲೀಸರು ಬಂಧಿಸಿದ್ದಾರೆ. ರೌಡಿಶೀಟರ್ ಸುನೀಲ್, ಅರವಿಂದ್, ನಂದಿನಿ, ಮೇರಿ ಬಂಧನಕ್ಕೊಳಗಾದ ಆರೋಪಿಗಳು. ಇನ್ನು ಈ ವೇಳೆ ಅರ್ಧ ಕೆಜಿಗೂ ಅಧಿಕ ಚಿನ್ನಾಭರಣ, 3 ಕೆಜಿ ಬೆಳ್ಳಿ ಸೇರಿ1.5 ಲಕ್ಷ ಹಣ ಜಪ್ತಿ ಮಾಡಲಾಗಿದೆ. ಈ ಖತರ್ನಾಕ್​ ಗ್ಯಾಂಗ್​ ಸಂಜೆ ವೇಳೆ ಲೈಟ್ ಹಾಕದೇ ಬೀಗ ಹಾಕಿರುವ‌ ಮನೆಗಳನ್ನೆ ಟಾರ್ಗೆಟ್​ ಮಾಡಿ, ಮಧ್ಯರಾತ್ರಿ ಮನೆಗೆ ನುಗ್ಗಿ ಚಿನ್ನಾಭರಣ, ಹಣ ದೋಚುತ್ತಿದ್ದರು.

ಆವಲಹಳ್ಳಿ ಸೇರಿ ಬೆಂಗಳೂರಿನ ಹಲವಡೆ ಕಳ್ಳತನ ಮಾಡಿರುವ ಗ್ಯಾಂಗ್

ಇನ್ನು ಈ ಗ್ಯಾಂಗ್​ 15ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿತ್ತು. ಆವಲಹಳ್ಳಿ ಸೇರಿ ಬೆಂಗಳೂರಿನ ಹಲವಡೆ ಕಳ್ಳತನ ಮಾಡಿದ್ದು, ಆರೋಪಿಗಳಾದ ಸುನೀಲ್, ಅರವಿಂದ್ ಇಬ್ಬರೂ ಸೇರಿ ಮನೆ ಕಳ್ಳತನ ಮಾಡಿ, ಕದ್ದ ಚಿನ್ನಾಭರಣವನ್ನ ನಂದಿನಿ ಮತ್ತು ಮೇರಿ ಸೇರಿ ಬ್ಯಾಂಕ್, ಅಂಗಡಿಯಲ್ಲಿ ಮಾರಾಟ ಮಾಡಿ ಹಣ ನೀಡುತ್ತಿದ್ದರು.ಇತ್ತ ಕದ್ದ ಹಣದಿಂದ ಈ ಗ್ಯಾಂಗ್ ಪೊಲೀಸರ ಕಣ್ತಪ್ಪಿಸಿಕೊಂಡು‌ ಶೋಕಿ ಮಾಡುತ್ತಿದ್ದರು. ಇದೀಗ ನಾಲ್ವರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಇದನ್ನೂ ಓದಿ:ಕಳ್ಳತನವೇ ಅವರ ಪುಲ್ ಟೈಮ್ ವರ್ಕ್: ಕದ್ದ ವಸ್ತು ಮಹಾರಾಷ್ಟ್ರದಲ್ಲಿ ಮಾರಾಟ, ಖತರ್ನಾಕ ಗ್ಯಾಂಗ್​ ಬಂಧನ

ಬೆಂಗಳೂರಿನಲ್ಲಿ ಕುಖ್ಯಾತ ಕಳ್ಳ ಆಸೀಫ್ ಸೇರಿ ಮೂವರ ಬಂಧನ

ಬೆಂಗಳೂರು: 2017ರಲ್ಲಿ ಕಳ್ಳತನ ಕೇಸ್​ನಲ್ಲಿ ಅರೆಸ್ಟ್ ಆಗಿದ್ದ ಆರೋಪಿ ಆಸೀಫ್ ಎಂಬಾತ ಬಿಡುಗಡೆ ಬಳಿಕ ಬೆಂಗಳೂರು ಬಿಟ್ಟು ಹುಬ್ಬಳ್ಳಿ-ಧಾರವಾಡ ಸೇರಿದ್ದ. 6 ವರ್ಷ ಬೆಂಗಳೂರು ಹೊರಗಡೆಯೇ ಕಳ್ಳತನ ಮಾಡುತ್ತಿದ್ದ ಆಸೀಫ್. ಪ್ರಕರಣವೊಂದರಲ್ಲಿ ಹುಬ್ಬಳ್ಳಿ ಪೊಲೀಸರಿಗೆ ಸಿಕ್ಕು ಜೈಲುಪಾಲಾಗಿದ್ದ. ಇದಾದ ಬಳಿಕ ಜೈಲಿನಿಂದ ಬಿಡುಗಡೆಯಾಗಿ ಮತ್ತೆ ಬೆಂಗಳೂರಿಗೆ ಬಂದಿದ್ದ. ತನ್ನ ಸಹಚರರಾದ ಶಬ್ಬೀರ್, ನೌಸದ್ ಜೊತೆಗೂಡಿ ಪುನಃ ಕಳ್ಳತನ ಶುರುಮಾಡಿ, ಮಾಗಡಿ ರಸ್ತೆಯ ಕಾರ್ಖಾನೆ ಕಚೇರಿಯಲ್ಲಿ ಮೂವರು ಸೇರಿ ಕಚೇರಿ ಮೇಲ್ಛಾವಣಿ ತೆರೆದು ಕೃತ್ಯವೆಸಗಿದ್ದರು. ಇದೀಗ ಸಿಸಿಟಿವಿ ದೃಶ್ಯ ಆಧರಿಸಿ ಮಾಗಡಿ ರಸ್ತೆ ಪೊಲೀಸರಿಂದ ಮೂವರನ್ನ ಸೆರೆ ಹಿಡಿಯಲಾಗಿದೆ. ಆರೋಪಿಗಳಿಂದ 5.45 ಲಕ್ಷ ನಗದನ್ನ ಪೊಲೀಸರು ಜಪ್ತಿ ಮಾಡಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್