‘ನಾನು ಚಿತ್ರರಂಗದಿಂದ ದೂರ ಹೋಗಲ್ಲ, ಇದು ಸಣ್ಣ ವಿರಾಮವಷ್ಟೇ’; ನಿಖಿಲ್ ಕುಮಾರ್ ಸ್ಪಷ್ಟನೆ
‘ನಾನು ಫುಲ್ ಟೈಮ್ ರಾಜಕಾರಣಿ’ ಎಂದು ನಿಖಿಲ್ ಇತ್ತೀಚೆಗೆ ಹೇಳುವ ಮೂಲಕ ಅಚ್ಚರಿ ಹೊರಹಾಕಿದ್ದರು. ಅವರು ಚಿತ್ರರಂಗ ತೊರೆಯುತ್ತಾರಾ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿತ್ತು. ಆದರೆ, ನಿಖಿಲ್ ಅವರು ಚಿತ್ರರಂಗದಿಂದ ದೂರ ಆಗುತ್ತಿಲ್ಲ. ಇದು ಸಣ್ಣ ಬ್ರೇಕ್ ಅಷ್ಟೇ.
‘ನಾನು ಫುಲ್ ಟೈಮ್ ರಾಜಕಾರಣಿ’ ಎಂದು ನಿಖಿಲ್ ಕುಮಾರಸ್ವಾಮಿ (Nikhil Kumarswamy) ಅವರು ಇತ್ತೀಚೆಗೆ ಹೇಳಿದ್ದರು. ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಅವರು ಚಿತ್ರರಂಗದಿಂದ ದೂರ ಆದರು ಎಂದೆಲ್ಲ ಕೆಲವರು ಮಾತನಾಡಿಕೊಂಡರು. ಆದರೆ, ಅವರು ಚಿತ್ರರಂಗದಿಂದ ದೂರ ಹೋಗುವುದಿಲ್ಲವಂತೆ. ಈ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ. ‘ನಾನು ಈ ವಿಷಯದ ಬಗ್ಗೆ ಸ್ಪಷ್ಟನೆ ಕೊಡಬೇಕು. ನನ್ನ ಮಾತನ್ನು ತಪ್ಪಾಗಿ ಅರ್ಥೈಸಿಕೊಂಡರು ಅನಿಸುತ್ತದೆ. ರಾಜಕಾರಣದ ಹಿನ್ನೆಲೆಯಲ್ಲಿ ನಾನು ಬಂದರೂ ಜಾಸ್ತಿ ಪ್ರೀತಿ ಕೊಟ್ಟಿದ್ದು ಕನ್ನಡ ಚಿತ್ರರಂಗದ ಅಭಿಮಾನಿಗಳು. ನಾನು ಮಾಡಿದ್ದು ಕೆಲವೇ ಸಿನಿಮಾ ಆದರೂ ಜನರು ಪ್ರೋತ್ಸಾಹಿಸಿದ್ದಾರೆ. ಸಂಘಟನೆ ವಿಚಾರದಲ್ಲಿ ಹೆಚ್ಚಿನ ಗಮನ ಹರಿಸಬೇಕಿದೆ. ಯಾವ ಹಳ್ಳಿಗೆ ಹೋದರು ನಟ ಎಂದೇ ನನ್ನನ್ನು ಗುರಿಸುತ್ತಾರೆ. ರಾಜಕಾರಣದಲ್ಲಿ ನಿರೀಕ್ಷೆ ಇದೆ, ಜವಾಬ್ದಾರಿ ಇದೆ. ಹಾಗಾಗಿ ಅದನ್ನು ಮುಂದುವರಿಸುತ್ತೇನೆ. ನಟನೆಯಿಂದ ಸಣ್ಣ ವಿರಾಮ ತೆಗೆದುಕೊಳ್ಳುತ್ತಿದ್ದೇನೆ’ ಎಂದಿದ್ದಾರೆ ನಿಖಿಲ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.