ಕೇಂದ್ರದಲ್ಲಿ ಕುಮಾರಸ್ವಾಮಿಯವರು ಮಂತ್ರಿಯಾಗುವ ಸುದ್ದಿ ಕೇವಲ ಊಹಾಪೋಹ: ನಿಖಿಲ್ ಕುಮಾರಸ್ವಾಮಿ
ಇವತ್ತು ಬೆಂಗಳೂರಲ್ಲಿ ಪ್ರತಿಕ್ರಿಯೆ ನೀಡಿದ ನಿಖಿಲ್, ತನ್ನ ತಂದೆ ಕೇಂದ್ರದಲ್ಲಿ ಮಂತ್ರಿಯಾಗಲಿದ್ದಾರೆ ಅನ್ನೋದು ಕೇವಲ ಊಹಾಪೋಹ ಮಾತ್ರ, ಇದುವರೆಗೆ ಅಂಥ ಪ್ರಸ್ತಾಪವಾಗಿಲ್ಲ, ನಿನ್ನೆ ದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಡೆಸಿದ ಸಭೆಯಲ್ಲೂ ಮಂತ್ರಿ-ಖಾತೆಗಳ ಚರ್ಚೆಯಾಗಿಲ್ಲ ಎಂದು ಹೇಳಿದರು.
ಬೆಂಗಳೂರು: ಲೋಕಸಭಾ ಚುನಾವಣೆಯ ಪ್ರಚಾರ ನಡೆಯುತ್ತಿದ್ದ ಸಂದರ್ಭದಲ್ಲೇ ಹೆಚ್ ಡಿ ಕುಮಾರಸ್ವಾಮಿಯವರು (HD Kumaraswamy) ತಾನು ಗೆದ್ದರೆ ಕೇಂದ್ರದಲ್ಲಿ ಕೃಷಿ ಸಚಿವನಾಗುವ (agriculture minister) ಸಾಧ್ಯತೆ ಇದೆ ಎಂದು ಹೇಳಿದ್ದರು. ಅದನ್ನೇ ಆಧಾರವಾಗಿಟ್ಟುಕೊಂಡು ಅವರಿಗೆ ಮತ್ತು ನಿಖಿಲ್ ಕುಮಾರಸ್ವಾಮಿಯವರಿಗೆ (Nikhil Kumaraswamy) ಕೇಂದ್ರದಲ್ಲಿ ಯಾವ ಖಾತೆ ಅಂತ ಪದೇಪದೆ ಕೇಳಲಾಗುತ್ತಿದೆ. ಇವತ್ತು ಬೆಂಗಳೂರಲ್ಲಿ ಪ್ರತಿಕ್ರಿಯೆ ನೀಡಿದ ನಿಖಿಲ್, ತನ್ನ ತಂದೆ ಕೇಂದ್ರದಲ್ಲಿ ಮಂತ್ರಿಯಾಗಲಿದ್ದಾರೆ ಅನ್ನೋದು ಕೇವಲ ಊಹಾಪೋಹ ಮಾತ್ರ, ಇದುವರೆಗೆ ಅಂಥ ಪ್ರಸ್ತಾಪವಾಗಿಲ್ಲ, ನಿನ್ನೆ ದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಡೆಸಿದ ಸಭೆಯಲ್ಲೂ ಮಂತ್ರಿ-ಖಾತೆಗಳ ಚರ್ಚೆಯಾಗಿಲ್ಲ ಎಂದು ಹೇಳಿದರು. ಕುಮಾರಸ್ವಾಮಿಯವರು ನಾಳೆ ಮತ್ತೇ ದೆಹಲಿಗೆ ಹೋಗುತ್ತಿದ್ದಾರೆ, ಮುಂದಿನ 2-3 ದಿನಗಳಲ್ಲಿ ವಿಷಯದ ಬಗ್ಗೆ ಮಾಹಿತಿ ಸಿಗಬಹುದು, ಸದ್ಯಕ್ಕಂತೂ ಯಾವುದೇ ಅಂಥ ಮಾಹಿತಿ ಇಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಜೆಡಿಎಸ್ ಪಕ್ಷಕ್ಕೆ ಬೇಡಿಕೆಗಳಿಲ್ಲ, ಆದರೆ ರಾಜ್ಯದ ಸಮಸ್ಯೆಗಳಿಗೆ ಕೇಂದ್ರದಿಂದ ಪರಿಹಾರ ಕಂಡುಕೊಳ್ಳಬೇಕಿದೆ: ಕುಮಾರಸ್ವಾಮಿ
ರೀಲ್ಸ್ಗಾಗಿ ಮೊಸಳೆಯ ಬಾಲ ಹಿಡಿದು ಹಿಂಸೆ ನೀಡಿದ ಯುವಕ; ವಿಡಿಯೋ ವೈರಲ್
ಸುರ್ಜೇವಾಲ ಜೊತೆಗಿನ ಸಭೆ ಬಳಿಕ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು
ಬಸ್ನೊಳಗಿಂದ ತಿಂಡಿಗಾಗಿ ದುಡ್ಡು ಕೊಟ್ಟ ಯುವಕನಿಗೆ ವ್ಯಾಪಾರಿ ಮಾಡಿದ್ದೇನು?
ಹಂಸಲೇಖ, ರವಿಚಂದ್ರನ್ ನಡುವೆ ಆ ಒಂದು ಹಾಡಿಗಾಗಿ ಮೂಡಿತ್ತು ಭಿನ್ನಾಭಿಪ್ರಾಯ

