ವಿಜಯೇಂದ್ರ ಹೇಳಿಕೆಗಳಿಗೆ ಬಸವಣ್ಣನ ವಚನಗಳ ರೂಪದಲ್ಲಿ ಪ್ರತಿಕ್ರಿಯೆ ನೀಡಿದ ಬಸನಗೌಡ ಯತ್ನಾಳ್
ಬಸನಗೌಡ ಯತ್ನಾಳ್ ವಿರುದ್ಧ ದೆಹಲಿಗೆ ತೆರಳಿ ವರಿಷ್ಠರಿಗೆ ಮತ್ತೊಂದು ದೂರು ನೀಡಲು ಎಂಪಿ ರೇಣುಕಾಚಾರ್ಯ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಾಗೂ ಇತರರು ತಯಾರಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ, ಯಾರಿಗೆ ಬೇಕಾದರೂ ದೂರು ನೀಡಲಿ, ತಾನು ಹೆದರುವ ವ್ಯಕ್ತಿಯಲ್ಲ, ದೂರು ಕೊಡಲು ಹೋದವರಿಗೆ ನೀವೆಷ್ಟು ಸಾಚಾ ಅಂತ ವರಿಷ್ಠರು ಕೇಳುತ್ತಾರೆ ಎಂದರು.
ಹುಬ್ಬಳ್ಳಿ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ತಾನು ಅಡುವ ಮಾತಗಳನ್ನು ಬಸವಣ್ಣನ ವಚನಗಳ ಹಾಗೆ ಹೇಳಲಾರಂಭಿಸಿದ್ದಾರೆ. ಇಂದು ಹುಬ್ಬಳ್ಳಿಯಲ್ಲಿ ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿದ ಯತ್ನಾಳ್ ಇಟ್ಟ ಹೆಜ್ಜೆಯನ್ನು ಹಿಂತೆಗೆಯಲ್ಲ ಎಂದು ವಿಜಯೇಂದ್ರ ಹೇಳಿರುವುದಕ್ಕೆ, ನಿಮ್ಮ ತಂದೆ ಸಿಎಂ ಆಗಿದ್ದಾಗ ಖೊಟ್ಟಿ ಸಹಿ ಮಾಡಿದ್ದು ನಿನಲ್ಲವೇ ವಿಜಯೇಂದ್ರ? ನೀನು ಮಾಡಿರುವ ಎಲ್ಲ ಹಲ್ಕಾ ಕೆಲಸಗಳಿಗೆ ಇಟ್ಟ ಹೆಜ್ಜೆ ಮುಂದಿಡದೆ ಮನೆಗೆ ಹೋಗು, ಕೂಡಲಸಂಗಮದೇವಾ ಎಂದು ಹೇಳುತ್ತಾರೆ. ಬಿಜೆಪಿ ರಾಜ್ಯಾಧ್ಯಕ್ಷನ ಚುನಾವಣೆಯಲ್ಲಿ ತಮ್ಮ ಬಣದಿಂದ ಒಬ್ಬ ಅಬ್ಯರ್ಥಿಯನ್ನು ಕಣಕ್ಕಿಳಿಸುವುದು ನಿಶ್ಚಿತ ಎಂದು ಯತ್ನಾಳ್ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹಿಂದೂಗಳ ಹಿತಾಸಕ್ತಿ ಕಾಪಾಡುವಲ್ಲಿ ಹಿಂದಿನ ಮತ್ತು ಈಗಿನ ಸರ್ಕಾರಗಳು ವಿಫಲವಾಗಿವೆ: ಬಸನಗೌಡ ಯತ್ನಾಳ್