Bigg Boss Kannada Season 11: ನಾನು ರೆಬೆಲ್ ಅಲ್ಲ, ಮಾನಸಿಕವಾಗಿ ಸದೃಢಳಾಗಿರುವ ವ್ಯಕ್ತಿ: ಗೌತಮಿ ಜಾಧವ್
Bigg Boss Kannada Season 11: ಗೌತಮಿಯವರ ಪತಿ ಅಭಿಷೇಕ್ಗೆ ಪತ್ನಿ ಗೆದ್ದೇ ಗೆಲ್ಲುತ್ತಾರೆ ಇಲ್ಲವೇ ಫಿನಾಲೆ ವಾರವಾದರೂ ತಲುಪುತ್ತಾರೆ ಎಂಬ ವಿಶ್ವಾಸ ಇತ್ತಂತೆ, ಅದರೆ ಅವರಿಗೆ ತುಂಬಾ ನಿರಾಶೆಯಾಗಿದೆ ಎಂದು ಗೌತಮಿ ಹೇಳುತ್ತಾರೆ. ಮನೆಗೆ ವಾಪಸ್ಸು ಬಂದಿರೋದು ಮಕ್ಕಳೊಂದಿಗೆ ಪುನರ್ಮಿಲನ, ಬಹಳ ಖುಷಿ ನೀಡಿದೆ ಎನ್ನುವ ಅವರು ಬಿಗ್ ಬಾಸ್ ಸೀಸನ್ ಗೆಲ್ಲಲಾಗದಿದ್ದರೂ ತನ್ನ ವ್ಯಕ್ತಿತ್ವ ಗೆದ್ದಿದೆ ಎನ್ನುತ್ತಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಫಿನಾಲೆ ತಲುಪಲಾಗದೆ ಶನಿವಾರದಂದು ಹೊರಬಿದ್ದ ಸ್ಪರ್ಧಿ ಗೌತಮಿ ಜಾಧವ್ ತಾನು ಮನೆಯಲ್ಲಿದಷ್ಟು ದಿನ ಚೆನ್ನಾಗಿ ಆಡಿದ್ದರ ಬಗ್ಗೆ ಅಭಿಮಾನ ಮತ್ತು ಆತ್ಮವಿಶ್ವಾಸದಿಂದ ಮಾತಾಡುತ್ತಾರೆ. ಸೀಸನ್ ಗೆಲ್ಲದೆ ಹೋಗಿದ್ದಕ್ಕೆ ವಿಷಾದ ವ್ಯಕ್ತಪಡಿಸುವ ಗೌತಮಿ, ತಾನು ರೆಬೆಲ್ ಅಂತ ಜನ ಭಾವಿಸಿದ್ದಾರೆ, ತಾನು ರೆಬೆಲ್ ಅಲ್ಲ ಆದರೆ ಮಾನಸಿಕವಾಗಿ ಬಹಳ ಸ್ಟ್ರಾಂಗ್; ಹಾಗೆಯೇ ಭಾವುಕ ಜೀವಿಯೂ ಹೌದು ಅಂತ ಹೇಳುತ್ತಾರೆ. ಬಿಗ್ ಬಾಸ್ ಮನೆ ಸೇರಿದ ಕಾರಣಕ್ಕೆ ತನ್ನ ವ್ಯಕ್ತಿತ್ವ ಬದಲಾಯಿಸುವ ಗೋಜಿಗೇನೂ ಹೋಗಲಿಲ್ಲ, ಹೊರಗಡೆ ಹೇಗಿರ್ತೀನೋ ಅಲ್ಲೂ ಹಾಗೆಯೇ ಇದ್ದೆ ಎಂದು ಗೌತಮಿ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪಾಸಿಟಿವಿಟಿ ಬಿಟ್ಟು ವೈಲೆಂಟ್ ಆದ ಗೌತಮಿ ಜಾಧವ್; ರಜತ್ಗೆ ಕೊಟ್ಟರು ಠಕ್ಕರ್
Latest Videos