ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​

ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​

ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Updated By: ಗಂಗಾಧರ​ ಬ. ಸಾಬೋಜಿ

Updated on: Sep 21, 2024 | 9:56 PM

ರಾಮನಗರದ ಚನ್ನಪಟ್ಟಣದಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ನಾನೇ ಇಲ್ಲಿ ಕ್ಯಾಂಡಿಡೇಟ್. ನಿಮ್ಮಲ್ಲಿ ಕೂಡ ಯಾರಾದರೂ ಕ್ಯಾಂಡಿಡೇಡ್ ಆಗಬಹುದು ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ. ಮೂರು ತಿಂಗಳಲ್ಲಿ ಇಷ್ಟು ಕೆಲಸ ಮಾಡಿದ್ದೇವೆ. ಇನ್ನೂ ಮೂರುವರೆ ವರ್ಷ ಎಷ್ಟು ಕೆಲಸ ಮಾಡಬಹುದು ಯೋಚನೆ ಮಾಡಿ ಎಂದು ಹೇಳಿದ್ದಾರೆ.

ರಾಮನಗರ, ಸೆಪ್ಟೆಂಬರ್​ 21: ಚನ್ನಪಟ್ಟಣದಲ್ಲಿ ನಾನೇ ಅಭ್ಯರ್ಥಿ. ನೀವು ಅಭ್ಯರ್ಥಿ ಬಗ್ಗೆ ವಿಚಾರ ಮಾಡಬೇಡಿ. ಚನ್ನಪಟ್ಟಣ ಬದಲಾವಣೆ ಮಾಡಿ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar)
ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಿಮ್ಮಲ್ಲಿ ಯಾರಾದರೂ ಅಭ್ಯರ್ಥಿ ಆಗಬಹುದು. ಮೂರು ತಿಂಗಳಲ್ಲಿ ಇಷ್ಟು ಕೆಲಸ ಮಾಡಿದ್ದೇವೆ, ಹಾಗಾದರೆ ಇನ್ನೂ ಮೂರುವರೆ ವರ್ಷ ಎಷ್ಟು ಕೆಲಸ ಮಾಡಬಹುದು ಯೋಚನೆ ಮಾಡಿ ಎಂದು ಹೇಳಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.