Loading video

ಸಿಎಂ ಸಿದ್ದರಾಮಯ್ಯ ಏನಾದರೂ ಹೇಳಿದ್ದರೆ ಅವರನ್ನೇ ಕೇಳಿ, ನಾನು ಹೇಗೆ ಉತ್ತರಿಸುವುದು? ಜಿ ಪರಮೇಶ್ವರ್

|

Updated on: Feb 21, 2025 | 1:30 PM

ಸಂಪುಟ ಪುನಾರಚನೆ ವಿಚಾರ ಮುಖ್ಯಮಂತ್ರಿ ಅವರ ಸುಪರ್ದಿಗೆ ಬಿಟ್ಟದ್ದು ತಾನೇನೂ ಕಾಮೆಂಟ್ ಮಾಡಲ್ಲ ಎಂದು ಪರಮೇಶ್ವರ್ ಹೇಳಿದರು. ನಿನ್ನೆ ಪಕ್ಷದ ಹೈಕಮಾಂಡನ್ನು ಭೇಟಿಯಾಗಲು ಸಚಿವ ಕೆಎನ್ ರಾಜಣ್ಣ ದೆಹಲಿಗೆ ಹೋಗಿ ಅಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಂದ ಸಾರ್ವಜನಿಕವಾಗಿ ಹೇಳಿಕೆ ನೀಡದೆ ಬಾಯ್ಮುಚ್ಚಿಕೊಂಡಿರುವಂತೆ ಹೇಳಿರುವುದಕ್ಕೆ ಪರಮೇಶ್ವರ್, ತಾನೂ ವಿಷಯವನ್ನು ಮಾಧ್ಯಮಗಳಲ್ಲಿ ನೋಡಿದ್ದು ಎಂದರು.

ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆ ಸಹ ಕಾಂಗ್ರೆಸ್ ಪಕ್ಷವು ತನ್ನ ನೇತೃತ್ವದಲ್ಲೇ ಹೋರಾಟ ನಡೆಸಲಿದೆ ಎಂದು ಡಿಕೆ ಶಿವಕುಮಾರ್ ಹೇಳಿರುವುದನ್ನು ಸಮರ್ಥಿಸಿದ ಗೃಹ ಸಚಿವ ಜಿ ಪರಮೇಶ್ವರ್ ಅದರಲ್ಲಿ ತಪ್ಪೇನಿದೆ, ತನಗೇನೂ ತಪ್ಪು ಕಾಣುತ್ತಿಲ್ಲ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಏನಾದರೂ ಹೇಳಿದ್ದರೆ ಅವರನ್ನೇ ಕೇಳಬೇಕು ತನ್ನನ್ನು ಕೇಳಿದರೆ ಹೇಗೆ ಎಂದ ಪರಮೇಶ್ವರ್, ರಂಜಾನ್ ತಿಂಗಳಲ್ಲಿ ಮುಸಲ್ಮಾನ ಸರ್ಕಾರೀ ಉದ್ಯೋಗಿಗಳಿಗೆ ಒಂದು ಗಂಟೆ ಮೊದಲು ಮನೆಗೆ ಹೋಗುವ ಅವಕಾಶವನ್ನು ಮಾಡಿಕೊಡುವ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರ ತೆಗೆದುಕೊಳ್ಳಲಿರುವ ತೀರ್ಮಾನದ ಬಗ್ಗೆ ಗೊತ್ತಿಲ್ಲ, ತನ್ನ ಅಭಿಪ್ರಾಯವನ್ನು ಸಾರ್ವಜನಿಕವಾಗಿ ಹೇಳಲಾಗಲ್ಲ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಗೃಹಲಕ್ಷ್ಮಿ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡೋದು ತಡವಾಗಿದೆ, ಆದಷ್ಟು ಬೇಗ ರಿಲೀಸ್ ಮಾಡುತ್ತೇವೆ: ಜಿ ಪರಮೇಶ್ವರ್