ಸಿಎಂ ಬದಲಾವಣೆ ಇಲ್ಲ ಅಂತ ಮಲ್ಲಿಕಾರ್ಜುನ ಖರ್ಗೆ ಹೇಳಲಿ, ಅವರಿವರು ಹೇಳೋದ್ಯಾಕೆ? ಆರ್ ಅಶೋಕ
ಅಕ್ಟೋಬರ್ ಇಲ್ಲವೇ ನವೆಂಬರ್ನಲ್ಲಿ ಸಿದ್ದರಾಮಯ್ಯ ಬದಲಿಗೆ ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿದ್ದೇನೆ, ಇದು ಕವಡೆ ಶಾಸ್ತ್ರವೇ ಆಗಿರಲಿ, ಒಂದು ಪಕ್ಷ ತಾನು ಹೇಳಿದ್ದೇ ನಿಜವಾದರೆ ಏನಾವಾಗ? ಎಂದು ಅಶೋಕ ಪ್ರಶ್ನಿಸಿದರು. ಅಶೋಕ ಒಮ್ಮ ಸರ್ಕಾರ ಉರುಳುತ್ತೆ ಅನ್ನುತ್ತಾರೆ, ಮತ್ತೊಮ್ಮೆ ಸಿಎಂ ಬದಲಾಗುತ್ತಾರೆ ಅನ್ನುತ್ತಾರೆ, ಯಾವುದು ಸರಿ ಯಾವುದು ತಪ್ಪು ಅಂತ ಅವರೇ ಹೇಳಬೇಕು.
ಹಾಸನ, ಜುಲೈ 7: ಬಿಜೆಪಿ ನಾಯಕ ಆರ್ ಅಶೋಕ ಅವರಿಗೆ ತಮ್ಮ ಸ್ಥಾನಕ್ಕಿಂತ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ (Siddaramaiah and DK Shivakumar) ಅವರ ಸ್ಥಾನಗಳ ಬಗ್ಗೆಯೇ ಹೆಚ್ಚು ಚಿಂತೆ ಇರುವಂತಿದೆ. ತನ್ನದು ಕವಡೆ ಶಾಸ್ತ್ರ ಅಂತ ಕಾಂಗ್ರೆಸ್ ನಾಯಕರು ಹೇಗೆ ಮೂದಲಿಸುತ್ತಾರೆ? ತಾನು ಹೇಳಿದ್ದೇ ಸತ್ಯವಾಯಿತಲ್ಲ? ರಾಮನಗರ ಶಾಸಕ ಇಕ್ಬಾಲ್ ಹುಸ್ಸೇನ್ ಹೇಳಿದ್ದೇನು? ನೋಟೀಸ್ ಕೊಟ್ಟ ಮೇಲೂ ಅವರು ಎರಡೂವರೆ ವರ್ಷ ಸಿದ್ದರಾಮಯ್ಯ ಎರಡೂವರೆ ವರ್ಷ ಶಿವಕುಮಾರ್ ಸಿಎಂ ಅಂತ ಹೇಳಿದ್ದಾರೆ ತಾನೇ? ಇದೆಲ್ಲ ಮ್ಯಾಚ್ ಫಿಕ್ಸಿಂಗ್ ಎಂದು ಅಶೋಕ ಹೇಳಿದರು. ಅವರಿವರು ಹೇಳೋದ್ಯಾಕೆ? ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೇ ಸಿದ್ದರಾಮಯ್ಯ 5-ವರ್ಷ ಅವಧಿಗೆ ಮುಖ್ಯಮಂತ್ರಿ ಅಂತ ಹೇಳಲಿ, ಇಲ್ಲದಿದ್ದರೆ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಅವರಾದರೂ ಹೇಳಲಿ, ಇಬ್ಬರಿಗೂ ತನ್ನದು ಮುಕ್ತ ಸವಾಲು ಎಂದು ಅಶೋಕ ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದಿಂದ ಪೊಲೀಸ್ ಇಲಾಖೆಯ ಮನೋಬಲಕ್ಕೆ ಧಕ್ಕೆ: ಭರಮನಿ ಸ್ವಯಂ ನಿವೃತ್ತಿ ಪ್ರಸ್ತಾಪಿಸಿ ಅಶೋಕ್ ವಾಗ್ದಾಳಿ
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ