ಮುಖ್ಯಮಂತ್ರಿ ಆಗಬೇಕು, ಸಾಕಷ್ಟು ದುಡ್ಡು ಮಾಡಿಕೊಳ್ಳಬೇಕು ಎಂಬ ಆಸೆ ನನಗಿಲ್ಲ: ಬಸನಗೌಡ ಯತ್ನಾಳ್
ತಾನು ಸೈಲೆಂಟ್ ಆಗಿದ್ದೀನಂತ ರಮೇಶ್ ಜಾರಕಿಹೊಳಿ ವಯ್ಲೆಂಟ್ ಆಗಿಲ್ಲ ಎನ್ನುವ ಬಸನಗೌಡ ಯತ್ನಾಳ್, ಗೋಕಾಕ ಶಾಸಕ ತಮಗಾಗಿರುವ ಅನುಭವ ಹೇಳಿಕೊಂಡಿದ್ದಾರೆ, ತನ್ನ ಪರವಾಗಿ ಅವರು ಮಾತಾಡಿಲ್ಲ, ತನ್ನ ಬಗ್ಗೆ ಪಕ್ಷದ ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ, ಅದರ ಬಗ್ಗೆ ಅಧೀರನಾಗಿಲ್ಲ ಎಂದು ಹೇಳಿದರು.
ಬಾಗಲಕೋಟೆ: ಬಿಜೆಪಿ ಶಿಸ್ತು ಪಾಲನಾ ಸಮಿತಿ ಮುಂದೆ ಹಾಜರಾದ ಬಳಿಕ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮೊದಲಿನಂತಿಲ್ಲ. ತಮ್ಮಲ್ಲಿ ಯಾವುದೇ ಬದಲಾವಣೆ ಇಲ್ಲ ಅವರು ಹೇಳಿದರೂ ಕನ್ನಡಿಗರು ಅವರ ಮಾತನ್ನು ನಂಬಲಾರರು. ಖುದ್ದು ಅವರೇ, ಪಕ್ಷದ ಬಗ್ಗೆ ಕೇಳುವ ಪ್ರಶ್ನೆಗೆ ನೋ ಕಾಮೆಂಟ್ಸ್ ಅನ್ನುತ್ತಾರೆ. ಕುಗ್ಗುವುದು ಹಿಗ್ಗುವುದು ತನಗೆ ಒಗ್ಗದ ಮಾತು, ಶಿಸ್ತು ಸಮಿತಿ ಮುಂದೆ ಹಾಜರಾದ ಬಳಿಕ ತಾನು ಸಪ್ಪಗಾಗಿಲ್ಲ, ಯಾಕೆಂದರೆ ತನಗೆ ಭವಿಷ್ಯದಲ್ಲಿ ಹಣ ಮಾಡಬೇಕು, ಸಿಎಂ ಅಗಬೇಕು ಎಂಬ ಅಸೆಯಿಲ್ಲ, ತಾನು ಸ್ಥಿತಪ್ರಜ್ಞ ಎಂದು ಅವರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬಿಜೆಪಿ ಹೈಕಮಾಂಡ್ ಸೂಚನೆ ಬಳಿಕವೂ ಆರದ ಬಂಡಾಯ? ಶಿಸ್ತು ಸಮಿತಿ ಸಭೆ ಬಳಿಕವೂ ಯತ್ನಾಳ್ ಟೀಮ್ ಮೀಟಿಂಗ್