Loading video

ಹನಿ ಟ್ರ್ಯಾಪ್ ಹಿಂದೆ ಯಾರಿದ್ದಾರೆ ಗೊತ್ತಿದೆ, ಮುಖ್ಯಮಂತ್ರಿಯವರಿಗೆ ಹೇಳುತ್ತೇನೆ: ರಾಜೇಂದ್ರ, ರಾಜಣ್ಣ ಮಗ

|

Updated on: Mar 22, 2025 | 7:16 PM

ಹನಿ ಟ್ರ್ಯಾಪಿಂಗ್ ಪ್ರಕರಣದ ಹಿಂದೆ ಯಾರೆಲ್ಲ ಇದ್ದಾರೆ, ಇದನ್ನೆಲ್ಲ ಯಾಕೆ ಮಾಡಿಸುತ್ತಿದ್ದಾರೆ ಅಂತ ಚೆನ್ನಾಗಿ ಗೊತ್ತಿದೆ, ದಾಖಲೆಗಳನ್ನು ತೆಗೆದುಕೊಂಡೇ ಮುಖ್ಯಮಂತ್ರಿಯವರ ಹೋಗುತ್ತಿದ್ದೇನೆ, ತನ್ನನ್ನು ಸಿಕ್ಕಿಸಲು ಯಾವೆಲ್ಲ ಪ್ರಯತ್ನಗಳು ನಡೆಯುತ್ತಿವೆ ಅನ್ನೋದನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರುತ್ತೇನೆ ಎಂದು ರಾಜಣ್ಣ ಅವರ ಮಗ ರಾಜೇಂದ್ರ ಹೇಳಿದರು.

ತುಮಕೂರು, ಮಾರ್ಚ್ 22: ಸಹಕಾರ ಸಚಿವ ಕೆಎನ್ ರಾಜಣ್ಣರ ಹನಿ ಟ್ರ್ಯಾಪ್ ಪ್ರಕರಣಕ್ಕೆ (honey trap case) ಸಂಬಂಧಿಸಿದಂತೆ ಜಿಲ್ಲೆಯ ಮಧುಗಿರಿಯಲ್ಲಿ ಮಾತಾಡಿದ ಅವರ ಮಗ ರಾಜೇಂದ್ರ, ಈ ಪೀಡೆ ಬಹಳ ಕೆಟ್ಟದ್ದು, ತನ್ನ ತಂದೆ ಮತ್ತು ತನ್ನ ಮೇಲೂ ಹನಿ ಟ್ರ್ಯಾಪ್ ಮಾಡುವ ಪ್ರಯತ್ನ ನಡೆದಿದೆ ಎಂದು ಹೇಳಿದರು, ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆಯೇ ಭೇಟಿಯಾಗುವಂತೆ ತಿಳಿಸಿದ್ದರು, ಅದರೆ ವಿಧೇಯಕಗಳನ್ನು ಪಾಸು ಮಾಡಲು ಅಸೆಂಬ್ಲಿಯಲ್ಲಿ ವಿಳಂಬವಾಗಿದ್ದರಿಂದ ಇವತ್ತು ಬರಹೇಳಿದ್ದಾರೆ, ವಿಷಯ ಚರ್ಚಿಸಿದ ಬಳಿಕ ಅವರು ಹೇಳಿದಂತೆ ಕೇಳುತ್ತೇನೆ, ದೂರು ದಾಖಲು ಮಾಡು ಅಂದರೆ ಮಾಡ್ತೇನೆ, ಬೇಡ ಇಲ್ಲಿಗೆ ನಿಲ್ಲಿಸಿನಿಡು ಅಂತ ಹೇಳಿದರೆ ಬಿಟ್ಟುಬಿಡುತ್ತೇನೆ, ಆದರೆ ಮುಂದಿನ ದಿನಗಳಲ್ಲಿ ಈ ಪೀಡೆಗೆ ಯಾರೂ ಟಾರ್ಗೆಟ್ ಆಗಬಾರದು ಎಂದು ರಾಜೇಂದ್ರ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ನನ್ನನ್ನು ಹನಿ ಟ್ರ್ಯಾಪ್ ಮಾಡಲಾಗಿದೆ ಅಂತ ಸಚಿವರೊಬ್ಬರು ಹೇಳಿದಾಗ ಸಿಎಂಗೆ ಅಶ್ಲೀಲ ಅನಿಸಲಿಲ್ಲವೇ? ಅಶೋಕ