ನನ್ನನ್ನು ಹನಿ ಟ್ರ್ಯಾಪ್ ಮಾಡಲಾಗಿದೆ ಅಂತ ಸಚಿವರೊಬ್ಬರು ಹೇಳಿದಾಗ ಸಿಎಂಗೆ ಅಶ್ಲೀಲ ಅನಿಸಲಿಲ್ಲವೇ? ಅಶೋಕ
ಸದನದ ಮಾನ ಉಳಿಸಲು ಬಿಜೆಪಿ ನ್ಯಾಯ ಕೇಳಿದ್ದೇವೆ, ನ್ಯಾಯಾಂಗ ತನಿಖೆ ನಡೆಯಲಿ, ತನಿಖೆಯನ್ನು ಸಿಬಿಐಗೆ ಒಪ್ಪಿಸಲಿ ಅಂತ ಅಂತ ಹೋರಾಟ ಮಾಡಿದ್ದು ಕೇವಲ ಸದನದ ಗೌರವ ಉಳಿಸೋದಿಕ್ಕೆ, ಅಸಲಿಗೆ ಆಡಳಿತ ಪಕ್ಷವೇ ತನ್ನ ಸಚಿವನ ಬೆನ್ನಿಗೆ ನಿಲ್ಲಬೇಕಿತ್ತು, ಅದ್ಯಾವ ಮುಖ ಇಟ್ಕೊಂಡು ಇವರು ಸದನದ ಕಲಾಪಗಳಿಗೆ ಬರುತ್ತಾರೆ ಎಂದು ಆರ್ ಅಶೋಕ ಖಾರವಾಗಿ ಪ್ರಶ್ನಿಸಿದರು.
ಬೆಂಗಳೂರು, ಮಾರ್ಚ್ 19: ಒಬ್ಬ ಹಿರಿಯ ಸಚಿವರೊಬ್ಬರು ಸದನದಲ್ಲಿ ನಿಂತುಕೊಂಡು, ನನ್ನನ್ನು ಹನಿ ಟ್ರ್ಯಾಪ್ ಮಾಡಲಾಗಿದೆ ನನಗೆ ರಕ್ಷಣೆ ಬೇಕಿದೆ ಅಂತ ಕೇಳಿದಾಗ ಅವರ ನೆರವಿಗೆ ಮತ್ತು ಸದನದ ಮರ್ಯಾದೆ ಉಳಿಸಲು ಹೋದ ವಿರೋಧ ಪಕ್ಷದ ನಾಯಕರಿಗೂ ರಕ್ಷಣೆ ಇಲ್ಲ ಎಂದು ವಿರೋಧ ಪಕ್ಷದ ನಾಯಕ ಅರ್ ಅಶೋಕ ಹೇಳಿದರು. ಸಚಿವ ಹನಿ ಟ್ರ್ಯಾಪ್ ಅಗಿದೆ ಅಂದಾಗ ಸಿಎಂಗೆ ಮತ್ತು ಸ್ಪೀಕರ್ ಅವರಿಗೆ ಅದು ಅಶ್ಲೀಲ ಅನಿಸಲಿಲ್ಲವೇ? ಈಗ ಸ್ಪೀಕರ್ ಆಗಿರುವ ಖಾದರ್ ಸಹ ಹಿಂದೆ ಸಸ್ಪೆಂಡ್ ಆಗಿದ್ದರು, ಬಿಜೆಪಿ ಶಾಸಕರನ್ನು ವಜಾ ಮಾಡಿದ್ದು ಕಾಂಗ್ರೆಸ್ ಸರ್ಕಾರದ ದುರುಳ ನೀತಿ, ಇದನ್ನು ಬಿಜೆಪಿ ಖಂಡಿಸುತ್ತದೆ ಎಂದು ಅಶೋಕ ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Karnataka Budget Session: ಮುಖ್ಯಮಂತ್ರಿ ಹೇಳಿದ್ದಕ್ಕೆ ಕೂತಿದ್ದೆ; ಉಪ ಮುಖ್ಯಮಂತ್ರಿ ಹೇಳಿದಾಗಲೂ ಕೂರಬೇಕಾ? ಅರ್ ಅಶೋಕ