ಹನುಮಂತನ ಸರಳತೆ, ಮುಗ್ಧತೆ ಇಷ್ಟವಾಗುತ್ತದೆ, ಲುಂಗಿಯ ಘನತೆಯನ್ನು ಅವರು ಹೆಚ್ಚಿಸಿದ್ದಾರೆ: ಅಭಿಮಾನಿ
ಉತ್ತರ ಕರ್ನಾಟಕದ ಲುಂಗಿ ಉಡುವ ಸಂಸ್ಕೃತಿಯನ್ನು ಮುಂದುವರಿಸಿರುವ ಹನುಮಂತ ಪ್ಯಾಟಿ ಹುಡುಗಿಗಿಂತ ಹಳ್ಳಿ ಹುಡುಗಿಯನ್ನು ಮದುವೆಯಾಗುವುದೇ ಲೇಸು ಎಂದು ಹೇಳುವ ಅಭಿಮಾನಿ, ಮದುವೆ ಅವರ ಕುಟುಂಬಕ್ಕೆ ಸಂಬಂಧಪಟ್ಟ ವಿಷಯ, ಅವರ ತಂದೆತಾಯಿಗಳು ಯಾವ ಕನ್ಯೆಯನ್ನು ಆರಿಸುತ್ತಾರೋ ಗೊತ್ತಿಲ್ಲ, ಅದರೆ ಅವರ ಮದುವೆಗೆ ಬರೋದು ನಿಶ್ಚಿತ ಎನ್ನುತ್ತಾರೆ.
ಹಾವೇರಿ: ಬಿಗ್ ಬಾಸ್ ರಿಯಾಲಿಟಿ ಶೋ ಗೆದ್ದಿರುವ ಹನುಮಂತ ಇನ್ನೂ ತನ್ನೂರು ಚಿಣ್ಣೂರು ಬಂಡಿಗೆ ಬಂದಿಲ್ಲ, ಆದರೆ ಅಭಿಮಾನಿಗಳಿಗೆ ಅವರನ್ನ ಭೇಟಿಯಾಗಿ ಮಾತಾಡಿಸುವ ತವಕ ಹೆಚ್ಚುತ್ತಿದೆ, ಹಾಗಾಗಿ ಪ್ರತಿದಿನ ಹನುಮಂತ ಮನೆಗೆ ಬಂದು ಅವರು ಬಂದಿರದ ಸುದ್ದಿ ಕೇಳಿ ವಾಪಸ್ಸು ಹೋಗುವವರ ಸಂಖ್ಯೆ ಕಡಿಮೆಯೇನೂ ಇಲ್ಲ. ಧಾರವಾಡ ಮತ್ತು ಹುಬ್ಬಳ್ಳಿಯಿಂದ ಬಂದಿರುವ ಅಭಿಮಾನಿಗಳ ಜೊತೆ ನಮ್ಮ ಹಾವೇರಿ ವರದಿಗಾರ ಮಾತಾಡಿದ್ದಾರೆ. ಹನುಮಂತನ ಸರಳತೆ, ನಡತೆ ಮತ್ತು ಮುಗ್ಧತೆ ತಮಗೆ ಬಹಳ ಇಷ್ಟವಾಯಿತು ಎಂದು ಹೇಳುವ ಅಭಿಮಾನಿಯೊಬ್ಬರು ಸರಿಗಮಪ ಕಾರ್ಯಕ್ರಮ ಗೆದ್ದಾಗ ಹೇಗಿದ್ದರೋ ಬಿಗ್ ಬಾಸ್ ಗೆದ್ದಾಗಲೂ ಹಾಗೆಯೇ ಇದ್ದಾರೆ, ಅಹಂಭಾವಕ್ಕೆ ಅವರು ಜಾಗವೇ ನೀಡಿಲ್ಲ ಎನ್ನುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬಿಗ್ ಬಾಸ್ ವಿನ್ನರ್ ಹನುಮಂತನ ಮದುವೆ ಮಾತುಕತೆ ಹೇಗೆ ನಡೆದಿದೆ? ಉತ್ತರ ನೀಡಿದ ತಾಯಿ