ದರ್ಶನ್ ಚಿತ್ರವೊಂದಕ್ಕೆ ₹ 22 ಕೋಟಿ ಸಂಭಾವನೆ ಪಡೆಯುತ್ತಿರುವುದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ

ಅರುಣ್​ ಕುಮಾರ್​ ಬೆಳ್ಳಿ

Updated on: Jul 03, 2024 | 6:59 PM

ದರ್ಶನ್ ಅಭಿಮಾನಿಗಳಿಗೂ ಸರಿಗಮ ವಿಜಿ ಬುದ್ಧಿವಾದ ಹೇಳಿದರು. ಅವರು ಸುಖಾಸುಮ್ಮನೆ ಕಿರಿಚಾಡುವುದರಲ್ಲಿ ಅರ್ಥವಿಲ್ಲ, ಆದಷ್ಟು ಬೇಗ ದರ್ಶನ್ ಹೊರಬರಲಿ, ಎಲ್ಲ ಒಳ್ಳೆಯದಾಗಲಿ ಅಂತ ದೇವರಲ್ಲಿ ಪ್ರಾರ್ಥಿಸೋಣ ಎಂದು ಅವರು ಹೇಳಿದರು.

ಬೆಂಗಳೂರು: ಹಿರಿಯ ನಟ, ಸಹ ನಿರ್ದೇಶಕ ಮತ್ತು ರಂಗಕರ್ಮಿ ಸರಿಗಮ ವಿಜಿ ಇಂದು ನಗರದಲ್ಲಿ ಹಾಕಲಾಗಿದ್ದ ಟಿವಿ ಧಾರಾವಹಿಯ ಸೆಟ್ಟೊಂದರ ಸೈಡ್ ಲೈನ್ಸ್ ನಲ್ಲಿ ನಮ್ಮ ಪ್ರತಿನಿಧಿಯೊಂದಿಗೆ ಹಲವಾರು ವಿಷಯಗಳ ಬಗ್ಗೆ ಮಾತಾಡಿದರಾದರೂ ಹೆಚ್ಚಿನ ಮಾತುಕತೆ ನಟ ದರ್ಶನ್ ಮೇಲೆ ಕೇಂದ್ರೀಕೃತವಾಗಿತ್ತು. ದರ್ಶನ್ ಪಡೆಯುತ್ತಿದ್ದ ಸಂಭಾವನೆ ಬಗ್ಗೆ ಮಾತಾಡಿದ ಅವರು ಕಲಾಸಿ ಪಾಳ್ಯ ಚಿತ್ರಕ್ಕೆ ಅವನು ರೂ. 12 ಲಕ್ಷ ಸಂಭಾವನೆ ಪಡೆದಿದ್ದ, ನಂತರ ಅದು ಹೆಚ್ಚುತ್ತಾ ₹ 25 ಲಕ್ಷ ತಲುಪಿತ್ತು. ಆಮೇಲಿನ ದಿನಗಳಲ್ಲಿ ಅವನು 4-5 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾನೆ ಅಂತ ಗೊತ್ತಾದಾಗ ಈ ಪಾಟಿ ಸಂಭಾವನೆನಾ?ಅಂತ ಶಾಕ್ ಆಗಿತ್ತು. ಈಗ ಅವನು ಒಂದು ಚಿತ್ರಕ್ಕೆ ₹ 22 ಕೋಟಿ ಡಿಮ್ಯಾಂಡ್ ಮಾಡುತ್ತಿದ್ದಾನಂತೆ! ನನಗಂತೂ ನಂಬಲಾಗುತ್ತಿಲ್ಲ, ಕನ್ನಡ ಚಿತ್ರರಂಗದಲ್ಲಿ ಇಷ್ಟು ಸಂಭಾವನೆಯನ್ನು ಯಾರೆಂದರೆ ಯಾರೂ ತೆಗೆದುಕೊಂಡಿಲ್ಲ ಎಂದು ಸರಿಗಮ ವಿಜಿ ಹೇಳಿದರು. ಜೈಲಿಂದ ಹೊರಬಂದ ಬಳಿಕ ವರ್ತನೆಯನ್ನು ತಿದ್ದಿಕೋ, ದುಡುಕು ಬುದ್ಧಿ ಬಿಟ್ಟುಬಿಡು, ಭಗವಂತ ಈಗ ನಿಂಗೆ ಸೆಕೆಂಡ್ ಇನ್ನಿಂಗ್ಸ್ ಕೊಟ್ಡಿದ್ದಾನೆ, ಚೆನ್ನಾಗಿ ಬಾಳ್ವೆ ಮಾಡು ಅಂತ ಬುದ್ಧವಾದ ಹೇಳ್ತೀನಿ ಅಂದ ವಿಜಿ, ಜೈಲಲ್ಲಿ ಈಗಾಗಲೇ ಅವನಿಗೆ ಪಶ್ಚಾತ್ತಾಪವಾಗಿದೆ, ಖಂಡಿತವಾಗಿ ತನ್ನ ತಪ್ಪುಗಳನ್ನು ತಿದ್ದಿಕೊಳ್ಳುತ್ತಾನೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ದರ್ಶನ್ ಹೊರಗೆ ಬಂದ ಮೇಲೆ ಅವರೊಟ್ಟಿಗೆ ಸಿನಿಮಾ ಮಾಡುವೆ: ಕೆ ಮಂಜು

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.