DCM Speaks; ದೆಹಲಿಗೆ ಹೋಗಬೇಕಿದೆ ಅದರೆ ಈಗಲ್ಲ, 2-3 ದಿನಗಳ ನಂತರ ಹೋಗುವೆ: ಡಿಕೆ ಶಿವಕುಮಾರ್

DCM Speaks; ದೆಹಲಿಗೆ ಹೋಗಬೇಕಿದೆ ಅದರೆ ಈಗಲ್ಲ, 2-3 ದಿನಗಳ ನಂತರ ಹೋಗುವೆ: ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 20, 2023 | 7:37 PM

ಅನ್ನಭಾಗ್ಯ ಯೋಜನೆ ಜಾರಿ ಕುರಿತಂತೆ ಸರ್ಕಾರಕ್ಕೆ ತಲೆಬಿಸಿಯಾಗಿದೆ. ಇದೇ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ಹೋಗಲಿದ್ದಾರೆ

ಬೆಂಗಳೂರು:  ಕೇಂದ್ರ ಸರ್ಕಾರ ಸರ್ವರ್ ಹ್ಯಾಕ್ (server hack) ಮಾಡಿದ್ದರಿಂದ ಸೇವಾಸಿಂಧು ವೆಬ್ ಸೈಟ್ ಕಾರ್ಯ ನಿರ್ವಹಿಸದಂತಾಗಿತ್ತು ಎಂದು ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಮಾಡಿರುವ ಅರೋಪಕ್ಕೆ ಇಂದು ವಿಧಾನ ಸೌಧದ ಮುಂಭಾಗ ಪ್ರತಿಕ್ತಿಯಿಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar), ತಾನು ತಾಂತ್ರಿಕ ವಿಷಯದಲ್ಲಿ ಪರಿಣಿತನಲ್ಲ, ತಜ್ಞರಿಂದ ಮಾಹಿತಿ ಪಡೆದು ಉತ್ತರ ನೀಡುವೆ, ತಾನು ಹಳ್ಳಿಯಿಂದ ವಿಧಾನ ಸೌಧಕ್ಕೆ ಬಂದಿರುವ ಮನುಷ್ಯ ಎಂದು ನಗುತ್ತಾ ಹೇಳಿದರು. ಅನ್ನಭಾಗ್ಯ ಯೋಜನೆ ಜಾರಿ ಕುರಿತಂತೆ ಸರ್ಕಾರಕ್ಕೆ ತಲೆಬಿಸಿಯಾಗಿದೆ. ಇದೇ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ಹೋಗಲಿದ್ದಾರೆ. ಅವರೊಂದಿಗೆ ಶಿವಕುಮಾರ್ ಸಹ ಹೋಗಲಿದ್ದಾರೆಯೇ ಎಂದು ಕೇಳಿದ ಪ್ರಶ್ನೆಗೆ ಉಪ ಮುಖ್ಯಮಂತ್ರಿ ದೆಹಲಿಗೆ ಹೋಗಬೇಕಿದೆ, ಆದರೆ ಈಗಲ್ಲ 2-3 ದಿನಗಳ ನಂತರ ಹೋಗುವುದಾಗಿ ಹೇಳಿದರು.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ