ಕುಮಾರಸ್ವಾಮಿ ಪೆನ್ ಡ್ರೈವ್ ನೀಡಿದರೆ ಮುಖ್ಯಮಂತ್ರಿಯವರು ತನಿಖಾ ಆಯೋಗ ರಚಿಸುತ್ತಾರೆ: ಸತೀಶ್ ಜಾರಕಿಹೊಳಿ

|

Updated on: May 14, 2024 | 5:54 PM

ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಸವಾಲು ಹಾಕಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ, ಅವರು ಮೊದಲು ಪೆನ್ ಡ್ರೈವ್ ನೀಡಲಿ, ಅವರನ್ನು ತಡೆದವರು ಯಾರು? ಮುಖ್ಯಮಂತ್ರಿ ಸಿದ್ದರಾಮಯ್ಯ ಕುಮಾರಸ್ವಾಮಿಗೆ ಅಪರಿಚಿತರೇ? ಪೆನ್ ಡ್ರೈವ್ ಸಿಕ್ಕ ಬಳಿಕ ಮುಖ್ಯಮಂತ್ರಿ ಆಯೋಗಗಳನ್ನು ರಚಿಸಿ ತನಿಖೆ ಮಾಡಲು ಹೇಳುತ್ತಾರೆ, ಇಲ್ಲವೇ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸುತ್ತಾರೆ ಎಂದು ಹೇಳಿದರು.

ಬೆಂಗಳೂರು: ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಸದಾ ತೂಕದ ಮಾತಾಡುತ್ತಾರೆ. ವೃಥಾ ಅಥವಾ ಹಾರಿಕೆಯ ಹೇಳಿಕೆಗಳನ್ನು ಅವರು ನೀಡಲ್ಲ, ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಪ್ರಜ್ವಲ್ ರೇವಣ್ಣ ಮತ್ತು ಹೆಚ್ಡಿ ರೇವಣ್ಣ (HD Revanna) ಪ್ರಕರಣಗಳಲ್ಲಿ ಎಸ್ಐಟಿ ತನಿಖೆ ಮೇಲೆ ಸಂಶಯ ವ್ಯಕ್ತಪಡಿಸುತ್ತಿರುವ ವಿರೋಧ ಪಕ್ಷದ ನಾಯಕರನ್ನು ತರಾಟೆಗೆ ತೆಗೆದುಕೊಂಡರು. ತನಿಖೆಯ ಸ್ವರೂಪದ ಬಗ್ಗೆ ಅವರಲ್ಲಿ ಅನುಮಾನಗಳಿದ್ದರೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡುವ ಬದಲು ನ್ಯಾಯಾಲಯದ ಬಾಗಿಲನ್ನು ತಟ್ಟಲಿ, ಸುಖಾಸುಮ್ಮನೆ ಆರೋಪಗಳನ್ನು ಮಾಡೋದು ಬೇಡ ಎಂದು ಜಾರಕಿಹೊಳಿ ಹೇಳಿದರು. ಭ್ರಷ್ಟಾಚಾರದ ಬಗ್ಗೆ ಪೆನ್ ಡ್ರೈವ್ ನೀಡಿದರೆ ತನಿಖೆ ಮಾಡಿಸುವ ತಾಕತ್ತು ಇದೆಯಾ? ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಸವಾಲು ಹಾಕಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ, ಅವರು ಮೊದಲು ಪೆನ್ ಡ್ರೈವ್ ನೀಡಲಿ, ಅವರನ್ನು ತಡೆದವರು ಯಾರು? ಮುಖ್ಯಮಂತ್ರಿ ಸಿದ್ದರಾಮಯ್ಯ ಕುಮಾರಸ್ವಾಮಿಗೆ ಅಪರಿಚಿತರೇ? ಪೆನ್ ಡ್ರೈವ್ ಸಿಕ್ಕ ಬಳಿಕ ಮುಖ್ಯಮಂತ್ರಿ ಆಯೋಗಗಳನ್ನು ರಚಿಸಿ ತನಿಖೆ ಮಾಡಲು ಹೇಳುತ್ತಾರೆ, ಇಲ್ಲವೇ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸುತ್ತಾರೆ ಎಂದು ಹೇಳಿದರು. ರೇವಣ್ಣ ಬಂಧನದ ವಿಷಯದಲ್ಲಿ ಮಾತಾಡಿದ ಜಾರಕಿಹೊಳಿ, ಅವರನ್ನು ಬಂಧಿಸುವ ಹಿಂದೆ ಯಾವುದೇ ರಾಜಕೀಯ ದ್ವೇಷವಿಲ್ಲ, 2-3 ಮಹಿಳೆಯರು ದೂರು ದಾಖಲಿಸಿದ ನಂತರ ಅವರನ್ನು ಬಂಧಿಸಲಾಗಿತ್ತು ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕುಮಾರಸ್ವಾಮಿ, ಶಿವಕುಮಾರ್ ವಿರುದ್ಧ ಆರೋಪ ಮಾಡಬಹುದು ಅದರೆ ಅವು ತನಿಖೆಯಲ್ಲಿ ಸಾಬೀತಾಗಬೇಕು: ಸತೀಶ್ ಜಾರಕಿಹೊಳಿ