ಏನು ಸಾಧನೆ ಮಾಡಿದ್ದಾರೆ ಅಂತ ಸಿದ್ದರಾಮಯ್ಯ ಸಾಧನಾ ಸಮಾವೇಶ ಮಾಡುತ್ತಿದ್ದಾರೆ? ಹೆಚ್ ವಿಶ್ವನಾಥ್

Updated on: May 19, 2025 | 1:19 PM

ಸಿದ್ದರಾಮಯ್ಯ ಹಲವು ಪ್ರಶ್ನೆಗಳಿಗೆ ಉತ್ತರಿಸಬೇಕಿದೆ, ಮುಡಾ ಹಗರಣದಲ್ಲಿ ಅವರ, ಕುಟುಂಬ ಮತ್ತು ಪಟಾಲಂನ ಪಾತ್ರವೇನು? ಇವರಿಂದ ಮುಡಾಗೆ ಆಗಿರುವ ನಷ್ಟವೆಷ್ಟು? ಇವರ ಕಠೋರ ಮಾತುಗಳಿಂದ ಎಷ್ಟು ಅಧಿಕಾರಿಗಳು ಇದುವರೆಗೆ ಸಾವನ್ನಪ್ಪಿದ್ದಾರೆ? ಈ ಪ್ರಶ್ನೆಗಳಿಗೆಲ್ಲ ಸಿದ್ದರಾಮಯ್ಯ ಸಮಾವೇಶದಲ್ಲಿ ಉತ್ತರಿಸಬೇಕು, ಇಲ್ಲದಿದ್ದರೆ ತಾವೊಂದು ಸಾಧನಾ ಸಮಾವೇಶ ನಡೆಸಿ ಜನರಿಗೆ ವಿಷಯಗಳನ್ನು ತಿಳಿಸುವುದಾಗಿ ವಿಶ್ವನಾಥ್ ಹೇಳಿದರು.

ಮೈಸೂರು, ಮೇ 19: ಸರ್ಕಾರಗಳು ಸಾಧನಾ ಸಮಾವೇಶ ಮಾಡೋದು ಹೊಸತೇನಲ್ಲ, ಅದರೆ ಸಿದ್ದರಾಮಯ್ಯ ಸರ್ಕಾರ ಯಾವ ಸಾಧನೆ ಮಾಡಿದೆ ಅಂತ ಅದನ್ನು ಮಾಡುತ್ತಿದೆ ಎಂದು ಬಿಜೆಪಿ ಎಮ್ಮೆಲ್ಸಿ ಹೆಚ್ ವಿಶ್ವನಾಥ್ (H Vishwanath) ಪ್ರಶ್ನಿಸಿದರು. ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಅವರು, ಹೆಲಿಕಾಪ್ಟರ್ ನಲ್ಲಿ ತಿರುಗಾಡೋದನ್ನು ಬಿಟ್ಟು ಸಿದ್ದರಾಮಯ್ಯ ಮಾಡಿದ್ದಾದರೂ ಏನು? ರಾಜ್ಯದ ಮಾತು ಹಾಗಿರಲಿ, ತಮ್ಮ ತವರು ಜಿಲ್ಲೆ ಮೈಸೂರಿಗೆ ಏನು ಮಾಡಿದ್ದಾರೆ? ಮೈಸೂರಿಗ್ಯಾಕೆ ಇವರು ಚಾಪರ್​ನಲ್ಲಿ ಬರ್ತಾರೆ? ಕಾರಲ್ಲಿ ಬಂದರೆ ಒಂದು ಗಂಟೆ 20 ನಿಮಿಷದಲ್ಲಿ ತಲುಪುತ್ತಾರೆ, ಇವರು ಮನೆಯಿಂದ ಹೊರಟು ಹೆಲಿಪ್ಯಾಡ್ ತಲುಪಿ ಹೆಲಿಕಾಪ್ಟರ್​ನಲ್ಲಿ ಬರಲು 3 ತಾಸು ಬೇಕಾಗುತ್ತದೆ ಎಂದು ಹೇಳಿದ ವಿಶ್ವನಾಥ್ ಇದರಿಂದ ಬೊಕ್ಕಸಕ್ಕೆ ತಗಲುವ ವೆಚ್ಚವನ್ನು ಸಾಧನೆ ಸಮಾವೇಶದಲ್ಲಿ ಹೇಳುವರೇ ಎಂದರು.

ಇದನ್ನೂ ಓದಿ: ಸಿದ್ಧತೆಗಳ ಪರಿಶೀಲನೆಗೆ ನಾನು ಮತ್ತು ಶಿವಕುಮಾರ್ ನಾಳೆ ವಿಜಯನಗರಕ್ಕೆ ಹೋಗುತ್ತಿದ್ದೇವೆ: ಸಿದ್ದರಾಮಯ್ಯ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ