ನೀರಿನ ದರಯೇರಿಕೆ; ಆಡಳಿತ ನಡೆಸಲಾಗಲ್ಲ ಅಂತ ಸಿದ್ದರಾಮಯ್ಯ ಸರ್ಕಾರ ಅಧಿಕಾರ ಬಿಟ್ಟು ತೊಲಗಲಿ: ನಿವಾಸಿಗಳು

Updated on: Apr 10, 2025 | 11:27 AM

ಅಕ್ರಮ ನೀರಿನ ಸಂಪರ್ಕಗಳನ್ನು ರೆಗ್ಯುಲರೈಸ್ ಮಾಡಿ ದುರಸ್ತಿ ಕಾಣದೆ ಪೈಪ್​ಗಳು ಒಡೆದು ನೀರು ಪೋಲಾಗುತ್ತಿರುವುದನ್ನು ತಡೆದರೆ ನೀರಿನ ದರ ಏರಿಸುವ ಪ್ರಮೇಯವೇ ಉದ್ಭವಿಸುವುದಿಲ್ಲ. ಆದರೆ, ಸರ್ಕಾರ ತಾನು ಮಾಡಬೇಕಿರುವುದನ್ನು ಬಿಟ್ಟು ಅಮಾಯಕ ಜನರ ಮೇಲೆ ಬೆಲೆಯೇರಿಕೆಯ ಹೊರೆ ಹೇರುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸುಮಾರು 50 ವಸ್ತುಗಳ ಬೆಲೆಯೇರಿಕೆ ಅಗಿದೆ ಅಂತ ನಿವಾಸಿಗಳು ಹೇಳುತ್ತಾರೆ.

ಬೆಂಗಳೂರು, ಏಪ್ರಿಲ್ 10: ಬಸ್ ಪ್ರಯಾಣ, ಹಾಲು, ವಿದ್ಯುತ್ ದರ ಏರಿಕೆಯ ನಂತರ ಇವತ್ತಿನಿಂದ ನೀರಿನ ದರವೂ ಏರಿಕೆ. ಬೆಂಗಳೂರು ನಿವಾಸಿಗಳು ಸಿದ್ದರಾಮಯ್ಯ ಸರ್ಕಾರವನ್ನು (Siddaramaiah Government) ನಿಷ್ಪ್ರಯೋಜಕ ಸರ್ಕಾರ ಎಂದು ತೆಗಳುತ್ತಿದ್ದಾರೆ. ನಮ್ಮ ಬೆಂಗಳೂರು ಪ್ರತಿನಿಧಿ ಹಲವು ಹಿರಿಯ ನಾಗರಿಕರೊಂದಿಗೆ ಮಾತಾಡಿದ್ದು ಅವರು ಬೇರೆ ಬೇರೆ ರೀತಿಯಲ್ಲಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಈ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಾಮಾನ್ಯ ಜನರಿಗೆ, ಮಧ್ಯಮ ವರ್ಗದ ಕುಟುಂಬಗಳಿಗೆ ಆಗಿರುವ ಪ್ರಯೋಜನವಾದರೂ ಏನು ಎಂದು ಅವರು ಪ್ರಶ್ನಿಸುತ್ತಾರೆ.

ಇದನ್ನೂ ಓದಿ:   ಗಗನಕ್ಕೇರಿದ ಕೊಬ್ಬರಿ ಎಣ್ಣೆ ದರ: ಲೀಟರ್​ಗೆ 300 ರೂಪಾಯಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ