ನಾಡಿನ ಕಾನೂನು ಅವರಿಗೆ ಒಪ್ಪಿಗೆ ಇಲ್ಲ ಅಂತಾದ್ರೆ ಅವರ ವಾದವನ್ನು ಒಪ್ಪಿಕೊಳ್ಳುವಂಥ ದೇಶಕ್ಕೆ ಹೋಗಲಿ: ಕಲ್ಲಡ್ಕ ಪ್ರಭಾಕರ್ ಭಟ್

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 30, 2022 | 7:18 PM

ಅವರು ಕೇಳಿದಕ್ಕೆಲ್ಲ ಅವಕಾಶ ಮಾಡಿಕೊಟ್ಟರೆ ವಿಪರೀತವಾಗಿ ಆಡಲು ಶುರುಮಾಡುತ್ತಾರೆ. ಪ್ರಶ್ನೆ ಕೇಳಿದ ಪತ್ರಕರ್ತರೊಬ್ಬರಿಗೆ ಅವರು ನಿಮ್ಮ ಹೆಂಡತಿಗೆ ಬುರ್ಖಾ ಹಾಕಿಸುತ್ತಾರೆ ಮತ್ತು ನಿಮಗೆ ಸುನ್ನತಿ ಮಾಡಿಸುತ್ತಾರೆ, ನಿಮಗೆ ಒಪ್ಪಿಗೆನಾ ಅಂತ ಭಟ್ ಕೇಳಿದರು!

ಮಂಗಳೂರು: ಮಂಗಳವಾರದಂದು ಉಡುಪಿಯಲ್ಲಿ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದಲ್ಲಿ ನಡೆಯುತ್ತದೆ ಎನ್ನಲಾಗಿದ್ದ ಸಲಾಂ ಆರತಿ ಬಗ್ಗೆ ಮಾತಾಡಿ ಅದು ಕೂಡಲೇ ನಿಲ್ಲಬೇಕೆಂದು ಹೇಳಿದ್ದ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ (Kalladka Prabhakar Bhat) ಅವರು ಬುಧವಾರ ಮಂಗಳೂರಲ್ಲಿ (Mangaluru) ಮಾಧ್ಯಮದವರ ಜೊತೆ ಮಾತಾಡುವಾಗ ನಾಡಿನ ಕಾನೂನನ್ನು ಒಪ್ಪದ ಜನ ಪಾಕಿಸ್ತಾನಕ್ಕೆ (Pakistan) ಹೋಗಲಿ ಎಂದರು. ವಸ್ತ್ರ ಸಂಹಿತೆ (dress code) ಬಗ್ಗೆ ಸರ್ಕಾರ ಹೇಳಿದೆ ಮತ್ತು ಕೋರ್ಟ್ ಸಹ ಹೇಳಿದೆ. ನ್ಯಾಯಾಲಯದ ಆದೇಶ ಕೂಡ ಅವರಿಗೆ ಸಮ್ಮತವಿಲ್ಲ ಅಂತಾದ್ರೆ ಅವರು ಇಲ್ಯಾಕೆ ಇರೋದು ಪಾಕಿಸ್ತಾನಕ್ಕೆ ಹೋಗಲಿ. ಅವರು ಸುಪ್ರೀಮ್ ಕೋರ್ಟ್ ಹೇಳಿದರೂ ಒಪ್ಪೋದಿಲ್ಲ ಅಂತ ನಮಗೆ ಗೊತ್ತಿದೆ. ಅವರ ವಾದ ಎಲ್ಲಿ ಒಪ್ಪಿಗೆ ಆಗುತ್ತದೋ ಆ ದೇಶಕ್ಕೆ ಹೋಗಲಿ ಎಂದು ಪ್ರಭಾಕರ್ ಭಟ್ ಹೇಳಿದರು.

ಅವರು ಕೇಳಿದಕ್ಕೆಲ್ಲ ಅವಕಾಶ ಮಾಡಿಕೊಟ್ಟರೆ ವಿಪರೀತವಾಗಿ ಆಡಲು ಶುರುಮಾಡುತ್ತಾರೆ. ಪ್ರಶ್ನೆ ಕೇಳಿದ ಪತ್ರಕರ್ತರೊಬ್ಬರಿಗೆ ಅವರು ನಿಮ್ಮ ಹೆಂಡತಿಗೆ ಬುರ್ಖಾ ಹಾಕಿಸುತ್ತಾರೆ ಮತ್ತು ನಿಮಗೆ ಸುನ್ನತಿ ಮಾಡಿಸುತ್ತಾರೆ, ನಿಮಗೆ ಒಪ್ಪಿಗೆನಾ ಅಂತ ಭಟ್ ಕೇಳಿದರು! ಅವರೊಂದಿಗೆ ಸಾಮರಸ್ಯದಿಂದ, ಸೌಹಾರ್ದತೆಯಿಂದ ಇರಲು ನಾವು ಪ್ರಯತ್ನಿಸುತ್ತಲೇ ಇದ್ದೇವೆ. ಆದರೆ ಅವರಿಂದ ಪೂರಕ ಪ್ರತಿಕ್ರಿಯೆ ಬರುತ್ತಿಲ್ಲ ಎಂದು ಅವರು ಹೇಳಿದರು.

ಕೊಲ್ಲೂರು ಮೂಕಾಂಬಿಕೆ ದೇವಸ್ಥಾನ ಸಮಿತಿಯವರು ಸಲಾಂ ಆರತಿ ನಡೆಯುತ್ತಿಲ್ಲ, ಗುಡಿಯಲ್ಲಿ ನಡೆಯುತ್ತಿರೋದು ಪ್ರದೋಶ ಪೂಜೆ ಅಂತ ಹೇಳಿದ್ದಾರೆ ಎಂದ ಅವರು, ನಾವು ಹೆಡ್ಡರು, ನಮ್ಮಲಿ ಬುದ್ಧಿ ಕಮ್ಮಿ ಇರೋದ್ರಿಂದಲೇ ಬೇರೆಯವರು ಹೇಳುವುದನ್ನು ಕೂಡಲೇ ನಂಬಿ ಬಿಡುತ್ತೇವೆ. ಅಸಲು ಸಂಗತಿಯೇನೆಂದರೆ ದೇವಸ್ಥಾನಗಳಲ್ಲಿ ನಮ್ಮ ಪದ್ಧತಿ ಮತ್ತು ಸಂಪ್ರದಾಯಗಳ ಪ್ರಕಾರ ಪೂಜೆ ಪುನಸ್ಕಾರಗಳು ನಡೆಯಬೇಕು ಅಂತ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದರು.

ಇದನ್ನೂ ಓದಿ:  ನಮ್ಮ ಔದಾರ್ಯದಿಂದಾಗಿ ಇದುವರೆಗೆ ದೇವಸ್ಥಾನಗಳಲ್ಲಿ ಸಲಾಂ ಮಂಗಳಾರತಿ ನಡೆಯಿತು, ಇನ್ನು ಮುಂದೆ ಇಲ್ಲ: ಕಲ್ಲಡ್ಕ ಪ್ರಭಾಕರ್ ಭಟ್