‘ಎ’ ಸಿನಿಮಾ ಸೀಕ್ವೆಲ್ ಐಡಿಯಾ ಮೆಚ್ಚಿದ ರಿಯಲ್ ಸ್ಟಾರ್ ಉಪೇಂದ್ರ ಎ2 ಮಾಡಲು ಪ್ರಯತ್ನಿಸುವೆನೆಂದರು!
ಉಪೇಂದ್ರರ ಹೊಸ ವೆಂಚರ್ ‘ಯುಐ’ ಸಿನಿಮಾ ಹಾಡೊಂದರ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ಹೋಗಬೇಕಿರುವ ಅವಶ್ಯಕತೆಯ ಬಗ್ಗೆ ಮಾತಾಡುವ ಉಪೇಂದ್ರ, ಹಾಡಿನಲ್ಲಿ ಬೇರೆ ಬೇರೆ ದೇಶಗಳ ಜನ ಇರೋದ್ರಿಂದ, ಆ ಜನಾಂಗಗಳು ಮತ್ತು ಅವರ ಸಂಸ್ಕೃತಿಗೆ ತಕ್ಕಂಥ ಸಂಗೀತ ಬೇಕಿದೆ, ಹಾಗಾಗಿ ಹಾಡನ್ನ್ನು ವಿದೇಶದಲ್ಲಿ ಶೂಟ್ ಮಾಡುತ್ತಿರುವುದಾಗಿ ಹೇಳುತ್ತಾರೆ.
ಬೆಂಗಳೂರು: ಉಪೇಂದ್ರ (Upendra) ಸಿನಿಮಾಗಳು ಭಿನ್ನವಾಗಿರುತ್ತವೆ, ‘ಜರಾ ಹಟ್ಕೆ’ ಅಂತ ಹಿಂದಿಯಲ್ಲಿ ಹೇಳುತ್ತಾರಲ್ಲ ಹಾಗೆ! ಸದಾ ಬ್ಯೂಸಿಯಾಗಿರುವ ಅವರು ಮಾಧ್ಯಮಗಳ ಕೈಗೆ ಸಿಗೋದು ಕಷ್ಟ. ಆದರೆ, ಟಿವಿ9 ಕನ್ನಡ ವಾಹಿನಿಯ ವರದಿಗಾರ್ತಿ ರಿಯಲ್ ಸ್ಟಾರ್ ನೊಂದಿಗೆ (Real Star) ಒಂದು ಮುಕ್ತ ಮಾತುಕತೆ ನಡೆಸಿದ್ದಾರೆ. ಉಪೇಂದ್ರರ ‘ಎ’ (A movie) ಭಾರೀ ಯಶಸ್ಸು ಕಂಡ ಸಿನಿಮಾ ಮತ್ತು ಕ್ರಿಟಿಕಲ್ಲಿ ಅಕ್ಲೇಮ್ಡ್ ಕೂಡ ಹೌದು. ಅದರ ಕ್ಲೈಮ್ಯಾಕ್ಸ್ ನಿಸ್ಸಂದೇಹವಾಗಿ ಅದ್ಭುತವಾಗಿತ್ತು. ಅದನ್ನು ನೆನಪಿಸಿ ಸೂರ್ಯಾಸ್ತದ ಬಳಿಕ ಸೂರ್ಯೋದವಾಗುವ ಹಾಗೆ ‘ಎ’ ಸಿನಿಮಾದ ಸಿಕ್ವೆಲ್ ತಯಾರಿಸುವ ಯೋಜನೆ ಏನಾದರೂ ಇದೆಯಾ ಅಂತ ವರದಿಗಾರ್ತಿ ಕೇಳಿದಾಗ ಅವರ ಐಡಿಯಾ ಕೇಳಿ ಹರ್ಷ ಮತ್ತು ರೋಮಾಂಚನಗೊಳ್ಳುವ ಉಪೇಂದ್ರ ನಿಮ್ಮ ಐಡಿಯಾ ನನಗೆ ಪ್ರೇರಣೆ ಆಗಬಹುದು, ಎ2, ಪಾರ್ಟ್2 ಪ್ರಯತ್ನಿಸಬಹುದು ಎನ್ನುತ್ತಾರೆ! ಉಪೇಂದ್ರರ ಹೊಸ ವೆಂಚರ್ ‘ಯುಐ’ ಸಿನಿಮಾ ಹಾಡೊಂದರ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ಹೋಗಬೇಕಿರುವ ಅವಶ್ಯಕತೆಯ ಬಗ್ಗೆ ಮಾತಾಡುವ ಉಪೇಂದ್ರ, ಹಾಡಿನಲ್ಲಿ ಬೇರೆ ಬೇರೆ ದೇಶಗಳ ಜನ ಇರೋದ್ರಿಂದ, ಆ ಜನಾಂಗಗಳು ಮತ್ತು ಅವರ ಸಂಸ್ಕೃತಿಗೆ ತಕ್ಕಂಥ ಸಂಗೀತ ಬೇಕಿದೆ, ಹಾಗಾಗಿ ಹಾಡನ್ನ್ನು ವಿದೇಶದಲ್ಲಿ ಶೂಟ್ ಮಾಡುತ್ತಿರುವುದಾಗಿ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ‘ಉಪೇಂದ್ರ ನನ್ನ ಫೇವರಿಟ್ ನಿರ್ದೇಶಕ’: ಕಾರಣ ಸಹಿತ ವಿವರಿಸಿದ ಪ್ರಶಾಂತ್ ನೀಲ್