‘ಎ’ ಸಿನಿಮಾ ಮರು ಬಿಡುಗಡೆ, ಚಿತ್ರಮಂದಿರದಲ್ಲಿ ಅಭಿಮಾನಿಗಳ ಹಾವಳಿ ಹೀಗಿತ್ತು
ಉಪೇಂದ್ರ ನಿರ್ದೇಶಿಸಿ, ಮೊದಲ ಬಾರಿಗೆ ನಾಯಕನಾಗಿ ನಟಿಸಿದ್ದ ‘ಎ’ ಸಿನಿಮಾ 26 ವರ್ಷಗಳ ಬಳಿಕ ಇಂದು (ಮೇ 17) ಮರು ಬಿಡುಗಡೆ ಆಗಿದೆ. ಪ್ರೇಕ್ಷಕರು ಚಿತ್ರಮಂದಿರಗಳಿಗೆ ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಚಿತ್ರಮಂದಿರಗಳ ಒಳಗೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.
ಉಪೇಂದ್ರ (Upendra) ನಟಿಸಿ, ನಿರ್ದೇಶನ ಮಾಡಿದ್ದ ‘ಎ’ ಸಿನಿಮಾ 26 ವರ್ಷಗಳ ಬಳಿಕ ಮರು ಬಿಡುಗಡೆ ಆಗಿದೆ. ಮೊದಲ ದಿನವೇ ಅಭಿಮಾನಿಗಳು ಚಿತ್ರಮಂದಿರಕ್ಕೆ ಮುಗಿಬಿದ್ದಿದ್ದಾರೆ. ಬೆಳಿಗ್ಗೆ ಬೆಂಗಳೂರಿನ ಹಲವೆಡೆ ಮಳೆ ಬಿತ್ತಾದರೂ ಅದರ ನಡುವೆಯೇ ಜನ ಚಿತ್ರಮಂದಿರಗಳಿಗೆ ಬಂದು ಸಿನಿಮಾ ನೋಡಿದ್ದಾರೆ. ಸಿನಿಮಾ ಪ್ರಾರಂಭವಾಗುತ್ತಿದ್ದಂತೆ ಸ್ಕ್ರೀನ್ ಮುಂದೆ ಬಂದು ಡ್ಯಾನ್ಸ್ ಮಾಡಿದ್ದಾರೆ. ಉಪೇಂದ್ರ ತೆರೆಯ ಮೇಲೆ ಕಾಣುತ್ತಿದ್ದಂತೆ ಆರತಿ ಮಾಡಿ ಸಂಭ್ರಮಿಸಿದ್ದಾರೆ. ಚಿತ್ರಮಂದಿರಗಳ ಮುಂದೆ ಪಟಾಕಿ ಹೊಡೆದಿದ್ದಾರೆ, ತಮಟೆ ಸದ್ದಿಗೆ ಕುಣಿದು ಕುಪ್ಪಳಿಸಿದ್ದಾರೆ. ಬೆಂಗಳೂರಿನ ಹಲವು ಚಿತ್ರಮಂದಿರಗಳಲ್ಲಿ ಇಂದು ‘ಎ’ ಸಿನಿಮಾ ಮರು ಬಿಡುಗಡೆ ಆಗಿದ್ದು, ಬಹುತೇಕ ಎಲ್ಲ ಚಿತ್ರಮಂದಿರಗಳಲ್ಲಿಯೂ ಇದೇ ರೀತಿಯ ದೃಶ್ಯಗಳು ಪುನರಾವರ್ತನೆಯಾಗಿವೆ. ಉಪೇಂದ್ರ ಸಿನಿಮಾಕ್ಕೆ ಮಹಿಳೆಯರು ಬರುವುದಿಲ್ಲ ಎಂಬ ಆಪಾದನೆ 20 ವರ್ಷಗಳ ಹಿಂದೆ ಇತ್ತು. ಆದರೆ ‘ಎ’ ಸಿನಿಮಾಕ್ಕೆ ಹಲವು ಚಿತ್ರಮಂದಿರಗಳಲ್ಲಿ ಮಹಿಳೆಯರು ಬಂದಿದ್ದು ವಿಶೇಷವಾಗಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ