AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಉಪೇಂದ್ರ ನನ್ನ ಫೇವರಿಟ್​ ನಿರ್ದೇಶಕ’: ಕಾರಣ ಸಹಿತ ವಿವರಿಸಿದ ಪ್ರಶಾಂತ್​ ನೀಲ್​

ಡಿಫರೆಂಟ್​ ಸಿನಿಮಾಗಳನ್ನು ಮಾಡಿ ಜನಮೆಚ್ಚುಗೆ ಗಳಿಸಿದ ಉಪೇಂದ್ರ ಎಂದರೆ ಪ್ರೇಕ್ಷಕರಿಗೆ ಸಖತ್​ ಅಭಿಮಾನ. ಸ್ಟಾರ್​ ಡೈರೆಕ್ಟರ್​ ಪ್ರಶಾಂತ್​ ನೀಲ್​ ಅವರಿಗೂ ಉಪೇಂದ್ರ ಬಗ್ಗೆ ಬೆಟ್ಟದಷ್ಟು ಅಭಿಮಾನ ಇದೆ. ‘ಉಗ್ರಂ’ ಸಿನಿಮಾದ ನೆನಪುಗಳನ್ನು ಮೆಲಕು ಹಾಕುವಾಗ ಉಪೇಂದ್ರ ಬಗ್ಗೆ ಪ್ರಶಾಂತ್​ ನೀಲ್​ ಮಾತನಾಡಿದ್ದಾರೆ. ನಿರೂಪಕಿ ಅನುಶ್ರೀ ನಡೆಸಿದ ಸಂದರ್ಶನದಲ್ಲಿ ಅವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

‘ಉಪೇಂದ್ರ ನನ್ನ ಫೇವರಿಟ್​ ನಿರ್ದೇಶಕ’: ಕಾರಣ ಸಹಿತ ವಿವರಿಸಿದ ಪ್ರಶಾಂತ್​ ನೀಲ್​
ಉಪೇಂದ್ರ, ಪ್ರಶಾಂತ್​ ನೀಲ್​
ಮದನ್​ ಕುಮಾರ್​
|

Updated on: Feb 27, 2024 | 5:45 PM

Share

ನಿರ್ದೇಶಕ ಪ್ರಶಾಂತ್​ ನೀಲ್​ (Prashanth Neel) ಅವರಿಗೆ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬೇಡಿಕೆ ಇದೆ. ಅವರು ಮಾಡಲಿರುವ ಸಿನಿಮಾಗಳಿಗಾಗಿ ದೊಡ್ಡ ಪ್ರೇಕ್ಷಕವರ್ಗ ಕಾದು ಕುಳಿತಿದೆ. ಪ್ರಶಾಂತ್​ ನೀಲ್​ ಜೊತೆ ಸಿನಿಮಾ ಮಾಡಬೇಕು ಎಂದು ದೊಡ್ಡ ದೊಡ್ಡ ಸ್ಟಾರ್​ ಕಲಾವಿದರು, ನಿರ್ಮಾಪಕರು ಕಾದಿದ್ದಾರೆ. ಇಷ್ಟೆಲ್ಲ ಜನಪ್ರಿಯತೆ, ಬೇಡಿಕೆ ಸೃಷ್ಟಿಸಿಕೊಂಡಿರುವ ಪ್ರಶಾಂತ್​ ನೀಲ್​ ಅವರಿಗೆ ಉಪೇಂದ್ರ (Upendra) ಎಂದರೆ ತುಂಬ ಇಷ್ಟ. ಆ ಬಗ್ಗೆ ಅವರು ಅನೇಕ ಬಾರಿ ಹೇಳಿದ್ದುಂಟು. ಈಗ ಅವರು ಮತ್ತೊಮ್ಮೆ ಆ ವಿಚಾರದ ಬಗ್ಗೆ ಮಾತನಾಡಿದ್ದಾರೆ. ‘ಉಗ್ರಂ’ ಸಿನಿಮಾ ಬಿಡುಗಡೆಯಾಗಿ 10 ವರ್ಷಗಳು ಕಳೆದಿವೆ. ಈ ಪ್ರಯುಕ್ತ ನಿರೂಪಕಿ ಅನುಶ್ರೀ ಅವರು ವಿಶೇಷ ಸಂದರ್ಶನ (Anchor Anushree Interview) ನಡೆಸಿದ್ದು, ಈ ವೇಳೆ ಉಪೇಂದ್ರ ಬಗ್ಗೆ ಪ್ರಶಾಂತ್​ ನೀಲ್​ ಮಾತನಾಡಿದ್ದಾರೆ.

‘ಎಂದೆಂದಿಗೂ ಉಪೇಂದ್ರ ಸರ್​ ನನ್ನ ಫೇವರಿಟ್​ ಡೈರೆಕ್ಟರ್​. ಅದಕ್ಕೆ ಕಾರಣ ಕೂಡ ಇದೆ. ನಾನು ಇಲ್ಲಿ ಕನ್ನಡದ ಪ್ರೋಗ್ರಾಂನಲ್ಲಿ ಕುಳಿತುಕೊಂಡಿದ್ದೇನೆ ಎಂಬ ಕಾರಣಕ್ಕೆ ಈ ಮಾತು ಹೇಳುತ್ತಿಲ್ಲ. ಪ್ರಪಂಚದಲ್ಲಿ ಯಾರೂ ಕೂಡ ‘ಶ್​’, ‘ತರ್ಲೆ ನನ್​ ಮಗ’ ಹಾಗೂ ‘ಓಂ’ ರೀತಿಯ ಬೇರೆ ಬೇರೆ ಪ್ರಕಾರದ ಸಿನಿಮಾಗಳನ್ನು ಮಾಡಲು ಸಾಧ್ಯವಿಲ್ಲ. ಅದು ಅಸಾಧ್ಯ. ಆ ಮೂರೂ ಪ್ರಕಾರಗಳು ಡಿಫರೆಂಟ್​ ಆಗಿವೆ. ಇನ್ನು, ಅವರ ‘ಎ’ ಮತ್ತು ‘ಉಪೇಂದ್ರ’ ಸಿನಿಮಾವನ್ನು ಬೇರೆ ಯಾರೂ ಮಾಡೋಕೆ ಸಾಧ್ಯವಿಲ್ಲ’ ಎಂದು ಪ್ರಶಾಂತ್​ ನೀಲ್​ ಹೇಳಿದ್ದಾರೆ.

‘ಉಗ್ರಂ’ ಸಿನಿಮಾ ಬಿಡುಗಡೆ ಆಗುವುದಕ್ಕೂ ಮುನ್ನ ಉಪೇಂದ್ರ ಅವರು ಟ್ರೇಲರ್​ ನೋಡಿದ್ದರು. ಆಗಲೇ ಅವರು ಪ್ರಶಾಂತ್​ ನೀಲ್​ರ ಮೇಕಿಂಗ್​ ಅನ್ನು ಮೆಚ್ಚಿಕೊಂಡಿದ್ದರು. ಅದನ್ನು ಈಗ ಶ್ರೀಮುರಳಿ ನೆನಪಿಸಿಕೊಂಡಿದ್ದಾರೆ. ‘ಉಪ್ಪಿ ಸರ್​ ನಮಗೆ ಒಂದು ಮಾತು ಹೇಳಿದ್ದರು. ಅದು ನನಗೆ ಈಗಲೂ ನೆನಪು ಇದೆ. ಏನ್​ ಗುರುವೇ ಇದು? ಇಂಥ ಶಾಟ್​ ನಾನು ನೋಡಿಯೇ ಇಲ್ಲ ಅಂತ ಅವರು ಹೇಳಿದ್ದರು. ಸರ್​ ತಮಾಷೆ ಮಾಡಬೇಡಿ, ನಮ್ಮನ್ನು ರೇಗಿಸಬೇಡಿ ಅಂತ ನಾನು ಹೇಳಿದ್ದೆ. ಇಲ್ಲ ಗುರುವೇ ನಿಜವಾಗಿಯೂ ಚೆನ್ನಾಗಿದೆ. ಈ ಸಿನಿಮಾದಿಂದ ನಿಮಗೆ ಒಳ್ಳೆಯದಾಗುತ್ತದೆ ಅಂತ ಅವರು ಹೇಳಿದ್ದರು’ ಎಂದು ಆ ದಿನಗಳನ್ನು ಶ್ರೀಮುರಳಿ ಮೆಲುಕು ಹಾಕಿದ್ದಾರೆ.

ಇದನ್ನೂ ಓದಿ: ‘ಉಗ್ರಂ’ ಚಿತ್ರಕ್ಕೆ ಮೊದಲು ಇದ್ದ ಶೀರ್ಷಿಕೆ ‘ನಂದೇ’; ಮುಂದಿದೆ ದೊಡ್ಡ ಪ್ಲ್ಯಾನ್​

‘ಉಗ್ರಂ’ ತೆರೆಕಂಡ ಬಳಿಕ ಪ್ರಶಾಂತ್​ ನೀಲ್​ ಅವರ ಬೇಡಿಕೆ ಹೆಚ್ಚಿತು. ಬಳಿಕ ಅವರು ಯಶ್​ ಜೊತೆ ಕೈ ಜೋಡಿಸಿ ‘ಕೆಜಿಎಫ್​: ಚಾಪ್ಟರ್​ 1’ ಮತ್ತು ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಮಾಡಿದರು. ಆ ಸಿನಿಮಾದಿಂದ ಕನ್ನಡ ಚಿತ್ರರಂಗಕ್ಕೆ ಹೊಸ ಚಾರ್ಮ್​ ಬಂತು. ಪ್ರಭಾಸ್​ ಜೊತೆ ‘ಸಲಾರ್​’ ಸಿನಿಮಾ ಮಾಡಿ ಪ್ರಶಾಂತ್​ ನೀಲ್ ಸೈ ಎನಿಸಿಕೊಂಡರು. ಈಗ ಅವರು ಎಲ್ಲರ ಫೇವರಿಟ್​ ಡೈರೆಕ್ಟರ್ ಆಗಿದ್ದಾರೆ. ಜೂನಿಯರ್​ ಎನ್​ಟಿಆರ್​ ಜೊತೆ ಪ್ರಶಾಂತ್​ ನೀಲ್ ಸಿನಿಮಾ ಮಾಡಲಿದ್ದಾರೆ. ‘ಕೆಜಿಎಫ್​ 3’ ಸಿನಿಮಾ ಯಾವಾಗ ಬರಲಿದೆ ಎಂದು ಫ್ಯಾನ್ಸ್​ ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More