Loading video

ಡಿಕೆ ಶಿವಕುಮಾರ್​ರನ್ನು ಭೇಟಿಯಾಗಿ ಕುತೂಹಲ ಕೆರಳುವಂತೆ ಮಾಡಿದ ಎಮ್ಮೆಲ್ಸಿ ರಾಜೇಂದ್ರ ರಾಜಣ್ಣ

Updated on: Apr 19, 2025 | 7:20 PM

ಡಿಸಿಎಂ ಶಿವಕುಮಾರ್ ಮನೆಗೆ ಇಂದು ಅನಿರೀಕ್ಷಿತ ಅತಿಥಿಗಳ ದಂಡು. ಮೊದಲು ಬಿಜೆಪಿ ಸಂಸದ ಬಿವೈ ರಾಘವೇಂದ್ರ, ನಂತರ ಬಿಜೆಪಿ ಮಾಜಿ ಸಂಸದ ಜಿಎಂ ಸಿದ್ದೇಶ್ವರ ಮತ್ತು ಕೊನೆಯಲ್ಲಿ ರಾಜೇಂದ್ರ. ಶಿವಕುಮಾರ್ ಮತ್ತು ರಾಜಣ್ಣ ನಡುವೆ ಎಣ್ಣೆ ಸೀಗೆಕಾಯಿ ಸಂಬಂಧ, ಸಹಕಾರ ಸಚಿವ ಕೆಪಿಸಿಸಿ ಅಧ್ಯಕ್ಷನಾಗಲು ಪ್ರಯತ್ನ ಮಾಡುತ್ತಿರುವುದು ಮತ್ತು ಹೆಚ್ಚುವರಿ ಡಿಸಿಎಂಗಳು ಬೇಕು ಅಂತ ಹೇಳಿರೋದು ಶಿವಕುಮಾರ್​​ಗೆ ಸರಿಕಂಡಿಲ್ಲ.

ಬೆಂಗಳೂರು, ಏಪ್ರಿಲ್ 19: ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಮತ್ತು ಸಹಕಾರ ಸಚಿವ ಕೆಎನ್ ರಾಜಣ್ಣ ಅವರ ಮಗ ರಾಜೇಂದ್ರ ರಾಜಣ್ಣ ಇಂದು ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್​ರನ್ನ (DCM DK Shivakumar) ಅವರ ನಿವಾಸದಲ್ಲಿ ಭೇಟಿಯಾದರು. ಕುತೂಹಲಕಾರಿ ಯಾಕೆಂದರೆ, ತಮ್ಮ ಕೊಲೆ ಮಾಡಲು ಸುಪಾರಿ ನೀಡಿದ ಬಗ್ಗೆ ನಡೆದ ಮಾತುಕತೆ ಮತ್ತು ಅವರ ತಂದೆ ಅರೋಪಿಸುತ್ತಿರುವ ಹನಿ ಟ್ರ್ಯಾಪ್ ಪ್ರಕರಣದಲ್ಲಿ ಇಬ್ಬರೂ ದೂರು ದಾಖಲಿಸುವ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾಗಿದ್ದರು. ಶಿವಕಮಾರ್ ಅವರನ್ನು ಭೇಟಿಯಾಗುವ ಗೋಜಿಗೆ ಹೋಗಿರಲಿಲ್ಲ. ಈಗ್ಯಾಕೆ ಹೋದರು ಅಂತ ಜನ ಯೋಚನೆ ಮಾಡುತ್ತಿದ್ದಾರೆ.

ಇದನ್ನೂ ಓದಿ:  ರಾಜೇಂದ್ರ ರಾಜಣ್ಣ ಹನಿಟ್ರ್ಯಾಪ್, ಕೊಲೆ ಯತ್ನದ ಸಂಚುಕೋರ ಒಬ್ಬನೇ! ಬೆಂಗಳೂರಿನ ಪ್ರಬಲ ವ್ಯಕ್ತಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ