ಆಶ್ಚರ್ಯಕರ ಬೆಳವಣಿಗೆಯೊಂದರಲ್ಲಿ ಶಿವಕುಮಾರ್ ಮನೆಗೆ ಬೋಕೆ ಹಿಡಿದು ಬಂದ ಮುರುಗೇಶ್ ನಿರಾಣಿ

Updated on: Apr 18, 2025 | 1:16 PM

ಮುರುಗೇಶ್ ನಿರಾಣಿ ಮತ್ತು ಉಚ್ಚಾಟಿತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡುವೆ ಹಾವು-ಮುಂಗುಲಿಯ ಸಂಬಂಧ. ಯತ್ನಾಳ್ ಮತ್ತು ಶಿವಕುಮಾರ್ ನಡುವಿನ ಸಂಬಂಧ ಹೇಗೆ ಅಂತ ಜಗಜ್ಜಾಹೀರು. ದುಶ್ಮನ್ ಕಾ ದುಶ್ಮನ್ ದೋಸ್ತ್ ಅನ್ನೋ ಕಾರಣಕ್ಕೆ ನಿರಾಣಿಯವರು ಶಿವಕುಮಾರ್ ಮನೆಗೆ ಬಂದಿರಲಾರರು, ಯಾಕೆಂದರೆ ಬಿಜೆಪಿ ನಾಯಕರು ಈಗ ಯತ್ನಾಳ್ ಬಗ್ಗೆ ಮಾತು ಕೂಡ ಅಡುತ್ತಿಲ್ಲ.

ಬೆಂಗಳೂರು, ಏಪ್ರಿಲ್ 18: ಉದ್ಯಮಿ ಮತ್ತು ಮಾಜಿ ಸಚಿವ ಮುರುಗೇಶ್ ನಿರಾಣಿ ಹಾಲಿ ಶಾಸಕರಲ್ಲದಿರಬಹುದು, ಅದರೆ ಬಿಜೆಪಿಯಲ್ಲಿ ಅವರೊಬ್ಬ ಪ್ರಭಾವಿ ಮತ್ತು ಪಂಚಮಸಾಲಿ ಲಿಂಗಾಯತ ಸಮುದಾಯದ (Panchamasali Lingayat community) ಪ್ರಮುಖ ನಾಯಕ. ನಿರಾಣಿ ಇಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದ್ದು ಕನ್ನಡಿಗರಲ್ಲಿ ಸೋಜಿಗ ಮೂಡಿಸಿದೆ. ಒಂದು ಬೃಹತ್ ಗಾತ್ರದ ಬೋಕೆ ಮತ್ತು ಕೆಲವು ಪುಸ್ತಕಗಳೊಂದಿಗೆ ಅವರು ಶಿವಕುಮಾರ್ ಮನೆ ಪ್ರವೇಶಿಸಿದರು. ಡಿಸಿಎಂ ಜೊತೆ ಮಾತುಕತೆ ನಡೆಸಿದ ಬಳಿಕ ಮಾಧ್ಯಮಗಳಿಗೆ ತಮ್ಮ ಭೇಟಿಯ ಉದ್ದೇಶ ಹೇಳಬಹುದು.

ಇದನ್ನೂ ಓದಿ:  ಗ್ಯಾಸ್ ಸಿಲಿಂಡರ್ ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ, ಫ್ರೀಡಂ ಪಾರ್ಕ್ ಬಂದ ಶಿವಕುಮಾರ್​​ಗೆ ಭರ್ಜರಿ ಸ್ವಾಗತ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ