ಹನಿ ಟ್ರ್ಯಾಪ್ ಪ್ರಕರಣ ದೆಹಲಿಗೆ ಶಿಫ್ಟ್ ಆಗುವ ಲಕ್ಷಣಗಳು ಪ್ರಖರ, ದೆಹಲಿಗೆ ಭೇಟಿ ನೀಡಲಿರೋ ಸಿಎಂ
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯಗಿಂತ ಸುಮಾರು ಒಂದು ವಾರದಷ್ಟು ಮೊದಲೇ ದೆಹಲಿ ಹೋಗಲಿದ್ದಾರೆ. ಎಐಸಿಸಿಯು ಎಲ್ಲ ಪಿಸಿಸಿ ಮತ್ತು ಡಿಸಿಸಿ ಅಧ್ಯಕ್ಷರ ಸಭೆ ಕರೆದಿದ್ದು ಅದರಲ್ಲಿ ಭಾಗಿಯಾಗಲು ನಾಳೆ ನಡೆಯುವ ಸಂಪುಟ ಸಭೆಯ ನಂತರ ಶಿವಕುಮಾರ್ ದೆಹಲಿಗೆ ಹೋಗುತ್ತಾರೆ. ಹನಿ ಟ್ರ್ಯಾಪ್ ಕೇಸಿಗೆ ಸಂಬಂಧಿಸಿದಂತೆ ಡಿಸಿಎಂ ಹೈಕಮಾಂಡ್ ಜೊತೆ ಚರ್ಚಿಸುವುದು ನಿಶ್ಚಿತ!
ಬೆಂಗಳೂರು, ಮಾರ್ಚ್ 26: ಬಿಟ್ಟೆನೆಂದರೂ ಬಿಡದೀ ಮಾಯೆ! ರಾಜಕೀಯದಲ್ಲಿ ಎಲ್ಲವೂ ಸಾಧ್ಯ ಅಂತ ನಾವು ಹೇಳುತ್ತಿರುತ್ತೇವೆ. ಹನಿ ಟ್ರ್ಯಾಪ್ ಪ್ರಕರಣ (honey trap case) ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಮುಜುಗುರ ಸೃಷ್ಟಿಸಿದೆ ಹಾಗೂ ನಾಯಕರು ಈ ಸಂಗತಿಯನ್ನು ಅಂಗೀಕರಿಸುತ್ತಿದ್ದಾರೆ. ಪ್ರಕರಣವನ್ನು ಚರ್ಚಿಸಲು ಪಕ್ಷದ ಹಿರಿಯ ನಾಯಕ ಸತೀಶ್ ಜಾರಕಿಹೊಳಿ ದೆಹಲಿಗೆ ಹೋಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಇದೇ ವಿಷಯದ ಹಿನ್ನೆಲೆಯಲ್ಲಿ ದೆಹಲಿ ಹೋಗಲು ತಯಾರಾಗಿದ್ದು ಮೂಲಗಳ ಪ್ರಕಾರ ಅವರು ಏಪ್ರಿಲ್ 2 ಅಥವಾ 3ರಂದು ತೆರಳಲಿದ್ದಾರೆ. ಅವರಿಗೆ ಹೈಕಮಾಂಡ್ ನಿಂದ ಬುಲಾವ್ ಬಂದಿದೆಯೋ ಅಥವಾ ಪ್ರಕರಣವನ್ನು ವರಿಷ್ಠರಿಗೆ ಮನವರಿಕೆ ಮಾಡಿಕೊಡಲು ಖುದ್ದು ಅವರೇ ಹೋಗುತ್ತಿದ್ದಾರೋ ಖಚಿತಪಟ್ಟಿಲ್ಲ.
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
ಇದನ್ನೂ ಓದಿ: ರಾಜಕಾರಣಿಗಳು, ನ್ಯಾಯಾಧೀಶರ ಮೇಲೆ ಹನಿಟ್ರ್ಯಾಪ್ ಆರೋಪ: PIL ವಜಾಗೊಳಿಸಿದ ಸುಪ್ರೀಂ