ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷರಾಗುವ ಸಾಧ್ಯತೆ ಇದೆ ಎಂದ ಸಚಿವ ಕೆಎನ್ ರಾಜಣ್ಣ

Updated on: Jun 28, 2025 | 2:41 PM

ಮಧುಗಿರಿ ತಾಲೂಕಿನಲ್ಲಿ 60 ಎಕರೆಯಷ್ಟು ಜಮೀನು ಒತ್ತುವರಿಯಾಗಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ರಾಜಣ್ಣ ದಾಖಲೆಗಳನ್ನು ತಿದ್ದಿ ಒತ್ತುವರಿ ಮಾಡಿದ್ದು ಗಮನಕ್ಕೆ ಬಂದಿದೆ, ಜಿಲ್ಲಾಧಿಕಾರಿಯವರು ಓವರ್ ರೈಟಿಂಗ್ ಆಗಿರುವ, ಲಾಗಿನ್ ಮಿಸ್​ಯೂಸ್ ಆಗಿರುವ ಸಂಗತಿಗಳನ್ನು ಪರಿಶೀಲನೆ ನಡೆಸಿ ಪ್ರಕರಣವನ್ನು ತನಿಖೆಗೆ ಒಪ್ಪಿಸಿದ್ದಾರೆ ಎಂದು ಹೇಳಿದರು.

ತುಮಕೂರು, ಜೂನ್ 28: ಸಹಕಾರ ಸಚಿವ ಕೆಎನ್ ರಾಜಣ್ಣ ಅವರಾಡುವ ಮಾತು ಇತ್ತೀಚಿಗೆ ಹೆಚ್ಚು ಕುತೂಹಲ ಸೃಷ್ಟಿಸುತ್ತಿದೆ. ಇವತ್ತು ತುಮಕೂರುನಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದ ಅವರು ಕೆಪಿಸಿಸಿ ರಾಜ್ಯಾಧ್ಯಕ್ಷನ ಬದಲಾವಣೆಯು ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ, ಬದಲಾವಣೆ ಮಾಡಬೇಕೋ ಇಲ್ಲವೋ, ಯಾರನ್ನು ಅಧ್ಯಕ್ಷ ಮಾಡಬೇಕು ಮೊದಲಾದ ತೀರ್ಮಾನಗಳನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ ಎಂದರು. ರಾಜ್ಯಾಧ್ಯಕ್ಷನ ಸ್ಥಾನಕ್ಕೆ ಸಚಿವ ಸತೀಶ್ ಜಾರಕಿಹೊಳಿ ಹೆಸರು ಕೇಳಿಬರುತ್ತಿದೆಯಲ್ಲ ಅಂದಾಗ ಯಾವುದೇ ಉದ್ವಿಗ್ನತೆ ತೋರದ ಅವರು ಸತೀಶ್ ಕೆಪಿಸಿಸಿ ಅಧ್ಯಕ್ಷನಾಗುವ ಸಾಧ್ಯತೆ ಇದೆ ಎಂದರು.

ಇದನ್ನೂ ಓದಿ:  ಕಾಂಗ್ರೆಸ್ ಶಾಸಕರ ಅಸಮಾಧಾನದ ಬೆಂಕಿಗೆ ತುಪ್ಪ ಸುರಿದ ಕೆಎನ್ ರಾಜಣ್ಣ: ಕ್ರಾಂತಿ, ಪವರ್‌ ಸೆಂಟರ್‌ ಹೇಳಿಕೆಯಿಂದ ಸಂಚಲನ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ